Get Updates
Get notified of breaking news, exclusive insights, and must-see stories!

ಟಾರ್ಗೆಟ್‌ 28; ರಾಜಾಹುಲಿ ಪುತ್ರನ ಪರ ಮೈತ್ರಿ ನಾಯಕರಿಂದ ಅಬ್ಬರದ ಪ್ರಚಾರ- ಯಡಿಯೂರಪ್ಪ ಹೇಳಿದ್ದೇನು?

ಶಿವಮೊಗ್ಗ, ಏಪ್ರಿಲ್‌ 19: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳಲ್ಲಿ ಎನ್‌ ಡಿ ಎ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಆಡಳಿತರೂಢ ಕಾಂಗ್ರೆಸ್‌ ಠಕ್ಕರ್‌ ಕೊಡಲು ಕಮಲ-ದಳ ನಾಯಕರು ಜಂಟಿ ಪ್ರಚಾರವನ್ನ ನಡೆಸುತ್ತಿದ್ದಾರೆ.

ಹೌದು, ಗುರುವಾರ ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ ಅವರ ಪರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಿ ಟಿ ರವಿ, ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಹಲವು ಮೈತ್ರಿ ನಾಯಕರು ಅಬ್ಬರ ಪ್ರಚಾರವನ್ನ ನಡೆಸುವ ಮೂಲಕ ಶಿವಮೊಗ್ಗ ಕ್ಷೇತ್ರದ ಬಳಿ ಮತಯಾಚಿಸಿದರು.

Lok Sabha Poll NDA Wins In All Lok Sabha Seats In The State Said BS yediyurappa

ಇನ್ನೂ ಈ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್‌ ಯಡಿಯೂರಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ (ಎನ್‍ಡಿಎ) ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಬಿ.ವೈ.ರಾಘವೇಂದ್ರ ಅವರು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮನೆಮನೆಗೆ ತೆರಳಿ ಮೋದಿಜೀ ಅವರ ಜನಪರ ಯೋಜನೆಗಳನ್ನು ತಿಳಿಸಿ. ರಾಘವೇಂದ್ರರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಎರಡು ರೈತ ಶಕ್ತಿಗಳು ರಾಜ್ಯದಲ್ಲಿ ಒಂದಾಗಿವೆ. ಹಣದ ಶಕ್ತಿ ಇದರ ಮುಂದೆ ಏನೂ ಅಲ್ಲ. ಕಾಂಗ್ರೆಸ್ಸಿನವರು ಹೊಸ ಗ್ಯಾರಂಟಿ ತಂದಿದ್ದಾರೆ. ಆದರೆ, ಅವರು ಆಡಳಿತ ಮಾಡಲು ಬೇಕಾದಷ್ಟು ಸ್ಥಾನಕ್ಕೆ ಸ್ಪರ್ಧಿಸಿಲ್ಲ. 35 ಅಂಕಕ್ಕೆ ಬೇಕಾದಷ್ಟು ಪ್ರಶ್ನೆ ಬಿಡಿಸದ ಕಾಂಗ್ರೆಸ್ ಪಕ್ಷ ಪಾಸಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಫೇಲಾಗುವ, ಮೋಸ ಮಾಡುವ ಪಕ್ಷ ಎಂದು ಟೀಕಿಸಿದರು. ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರ ಜೀವ ಉಳಿಸಿದ ಮೋದಿಜೀ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರಿಗೆ ಮತ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಇದು ರೈತವಿರೋಧಿ ಸರಕಾರ. ಈ ಸರಕಾರ ಪಿಕ್ ಪಾಕೆಟ್ ಸರಕಾರ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಮೊದಲು 2.75 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸವಾಲೆಸೆದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಆರಂಭಿಸಿದ್ದ 4 ಸಾವಿರ ನೀಡುವುದನ್ನು ಈ ಸರಕಾರ ರದ್ದು ಮಾಡಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಬಿಜೆಪಿ ಸದಾ ರಾಷ್ಟ್ರಹಿತ, ಹಿಂದುತ್ವಕ್ಕೆ ಬದ್ಧವಾದ ಪಕ್ಷ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬಿಲದಲ್ಲಿದ್ದವರೆಲ್ಲರೂ ಹೊರಕ್ಕೆ ಬಂದಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗುತ್ತಾರೆ. ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅಂಗಡಿಗೆ ಬಂದು ಹೊಡೆದಿದ್ದಾರೆ. ನಿನ್ನೆ ರಾಮನವಮಿ ದಿನ ಜೈ ಶ್ರೀರಾಂ ಎಂದುದಕ್ಕೆ ಹಲ್ಲೆ ಮಾಡಿ ಇನ್ಯಾವುದೋ ಘೋಷಣೆ ಕೂಗಲು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇವರೆಲ್ಲ ಕೊಬ್ಬಿದ್ದಾರೆ ಎಂದು ಟೀಕಿಸಿದರು. ಜನತೆ ಕಾಂಗ್ರೆಸ್ಸಿನ ಕೊಬ್ಬಿಳಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಪತ್ರಕರ್ತರ ಜೊತೆ ಮಾತನಾಡಿ, ಅಭಿವೃದ್ಧಿಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗೆಂದು ಆ ಪಕ್ಷದ ಮುಖಂಡರೂ ಅರಿತಿದ್ದು, ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಸಾಗರೋಪಾದಿಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+