ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ; ಅಪ್ಪಾಜಿ ಅಂತಾ ನಾನು ಕಾಲಿಗೆ ಬೀಳಲ್ಲ: ಯತ್ನಾಳ್

ಬೆಳಗಾವಿ, ಏಪ್ರಿಲ್‌ 12: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಭರಾಟೆ ಜೋರಾಗಿದೆ. ಅಭ್ಯರ್ಥಿಗಳ ಪರವಾಗಿ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಚಾರ ನಡೆಸುತ್ತಿದ್ದು, ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಯತ್ನಾಳ್‌ ಹೇಳಿದ್ದಾರೆ.

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರವಾಗಿ ಮತಯಾಚಿಸಿದ ಬಳಿಕ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್‌ ಅವರು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದಾರೆ.

If BJP Came Power In Karnataka I Will Be The CM Said Basangouda Patil Yatnal

ಅದಲ್ಲದೇ ನಾನು ಯಾರಿಗೂ ಅಪ್ಪಾಜಿ ಅಪ್ಪಾಜಿ ಅಂತ ಕಾಲಿಗೆ ನಮಸ್ಕರಿಸುವುದಿಲ್ಲ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾರಿಗೂ ವಂಚನೆ ಮಾಡುವುದಿಲ್ಲ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೇ ಉತ್ತರ ಕರ್ನಾಟಕದ, ನಾನೇ ಮುಖ್ಯಮಂತ್ರಿಯಾಗುತ್ತೇನೆ. ಜಾತಿ ಜಾತಿ ಅಂತ ನೋಡದೆ, ದೇಶ ಉಳಿಸುವುದಕ್ಕಾಗಿ ಎಲ್ಲರೂ ವೋಟ್ ಹಾಕಿ ಎಂದರು.

ಜಾರಕಿಹೊಳಿ ಕುಟುಂಬ ವಿರುದ್ಧ ಗುಡುಗಿದ ಯತ್ನಾಳ್ , ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿ, ಸಾಹುಕಾರ್ ಸಾಹುಕಾರ್ ಯಾಕೆ ಅನ್ನುತ್ತೀರಿ. ಅವರ ಮನೆಯ ತೊಟ್ಟಿಲನಲ್ಲಿರುವ ಕಂದಮ್ಮಗಳಿಗೂ ನಮಸ್ಕರಿಸುತ್ತೀರಿ. ಯಾಕೆ ನಿಮಗೆ ಸ್ವಾಭಿಮಾನ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಮ್ಮ ಜಮೀನಿನಲ್ಲಿ ಕಬ್ಬು ಬೆಳಯುತ್ತೀರಾ ಅಥವಾ ಅವರ ಜಮೀನಿನಲ್ಲಿ ಬೆಳೆಯುತ್ತೀರಾ? ಯಾರಿಗೂ ನಮಸ್ಕರಿಸಬೇಡಿ, ಸ್ವಾವಲಂಭಿಗಳಾಗಿ. ಪ್ರಧಾನಿ ನರೇಂದ್ರ ಮೋದಿಯವರೇ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ. ಅಂದಮೇಲೆ ಇವರ ಕಾಲಿಗೆ ಏಕೆ ನಮಸ್ಕಾರ ಮಾಡುತ್ತೀರಿ ಎಂದು ಪರೋಕ್ಷವಾಗಿ ಕೆಲ ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.

ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾರಿಗೂ ವಂಚನೆ ಮಾಡುವುದಿಲ್ಲ. ರೈತರು ಬರಗಾಲ ಬರಲಿ ಅಂತ ಬಯಸುತ್ತಾರೆ, ಐದು ಲಕ್ಷದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಹೇಳಿದರು. ವಿಧಾನಸೌಧದಲ್ಲಿ ಇದೇ ವಿಚಾರದಲ್ಲಿ ನನಗೂ ಅವರಿಗೂ ಜಗಳ ಆಯ್ತು. ನಾನು ಹಾಗೇ ಅಂದಿಲ್ಲ ಅಂದರು. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಅಂದರು. ನನ್ನ ಮೇಲೆ ಈಗಾಗಲೆ 100 ಕೇಸ್​ ಇದೆ, ಇದೊಂದು ಹೆಚ್ಚಲ್ಲ, ಕೇಸ್​ ಹಾಕಿ ಅಂದೆ ಎಂದು ಯತ್ನಾಳ್ ಸಭೆಯಲ್ಲಿ ಹೇಳಿದರು.

ಇನ್ನೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್‌ , ಇಂದು ಗ್ಯಾರಂಟಿ ಗ್ಯಾರಂಟಿ ಅಂತಿದ್ದಾರೆ, ಆದರೆ ದೇಶ ಉಳಿದರೆ ಮಾತ್ರ ಗ್ಯಾರಂಟಿ ಜಾರಿಯಲ್ಲಿರುತ್ತದೆ. ದೇಶ ಉಳಿಯದಿದ್ದರೆ, ಮುಸ್ಲಿಂರೆಲ್ಲ ಒಂದಾದರೆ ಹಿಂದೂಗಳ ಜಮೀನು ಉಳಿಯಲ್ಲ, ಮನೆನೂ ಉಳಿಯಲ್ಲ. ಒಂದು ಮತಾಂತರವಾಗಬೇಕು, ಇಲ್ಲ ಸಾಯಬೇಕು ಇವೆರಡೇ ಆಯ್ಕೆ ಉಳಿಯುತ್ತೆ. ನಮ್ಮ ಅಜ್ಜ, ಮುತ್ತಜ್ಜರು ಟಿಪ್ಪು ಸುಲ್ತಾನ್ ವಿರುದ್ಧ, ಔರಂಗಜೇಬನ ವಿರುದ್ಧ ಹೋರಾಟ ಮಾಡಿದ್ದಕ್ಕೆ ಹಿಂದೂಗಳು ಉಳಿದಿದ್ದೇವೆ. ನಾವು ಯಾರಾದರೂ ಹಿಂದೂಗಳಾಗಿ ಉಳಿದಿದ್ದರೆ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯದಿಂದ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+