ಇಂದು ನಾಮಪತ್ರ ವಾಪಸ್ ಪಡೆಯುತ್ತಾರಾ ಈಶ್ವರಪ್ಪ; ಸಫಲವಾಗದ ಸಂಧಾನ- ಉಚ್ಟಾಟನೆ ಫಿಕ್ಸ್‌?

ಬೆಂಗಳೂರು, ಏಪ್ರಿಲ್‌ 22:ಲೋಕಸಭಾ ಚುನಾವಣೆಗೆ ಪುತ್ರಿನಿಗೆ ಹಾವೇರಿಯಿಂದ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ತೊಡೆತಟ್ಟಿದ್ದು, ಕೆ.ಎಸ್.ಈಶ್ವರಪ್ಪ ಮೇಲೆ ಉಚ್ಛಾಟನೆಯ ತೂಗುಗತ್ತಿ ಎದುರಾಗಿದೆ.

ಹೌದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿರುವ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಸ್ವಪಕ್ಷದ ನಾಯಕರ ವಿರುದ್ಧ ಬಂಡಾಯದ ಬಾವುಟ ಹಾರಿದ್ದಾರೆ. ಅಲ್ಲದೇ ನಿರಂತರವಾಗಿ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಕುಟುಂಬದಿಂದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕೆ ಎಸ್‌ ಈಶ್ವರಪ್ಪ ಅವರಿಗೆ ಏಪ್ರಿಲ್‌ 22 ರಂದು ನಾಮಪತ್ರ ವಾಪಸ್‌ ಪಡೆಯಲು ಡೆಡ್‌ ಲೈನ್‌ ನೀಡಲಾಗಿದೆ. ಇಂದು ನಾಮಪತ್ರ ವಾಪಸ್‌ ಪಡೆಯದಿದ್ದರೇ ಬಿಜೆಪಿಯಿಂದ ಉಚ್ಛಾಟನೆ ಫಿಕ್ಸ್‌ ಎಂದು ಹೇಳಲಾಗಿದೆ.

Lok Sabha Poll BJP High Command Sets Today Deadline For KS Eshwarappa

ಮಾಜಿ ಉಪಮುಖ್ಯಮಂತ್ರಿ ಹಾಗೂ ಕುರುಬ ನಾಯಕರ ಕೆ ಎಸ್‌ ಈಶ್ವರಪ್ಪ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಲವು ಬಿಜೆಪಿ ನಾಯಕರು ಮನವೊಲಿಸಿದ್ರು. ಆದರೆ, ನಾಮಪತ್ರವನ್ನೂ ಸಲ್ಲಿಕೆ ಮಾಡಿರುವ ಕೆ ಎಸ್‌ ಈಶವರಪ್ಪ ಅವರಿಗೆ ಇದೀಗ ಡೆಡ್‌ ಲೈನ್‌ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈಶ್ವರಪ್ಪ ಅವರಿಗೆ ನಾಮಪತ್ರ ಹಿಂಪಡೆಯಲು ಇದೇ ತಿಂಗಳ 28ರವರೆಗೆ ಕಾಲಾವಕಾಶ ಇದೆ. ಇನ್ನೂ ಬಿಜೆಪಿ ನಾಯಕರು ಏಪ್ರಿಲ್‌ 22 ರವರೆಗೆ ಅವಕಾಶವನ್ನ ನೀಡಲಾಗಿದ್ದು, ಒಂದು ವೇಳೆ 28ರ ಒಳಗೆ ಈಶ್ವರಪ್ಪ ತಮ್ಮ ನಾಮಪತ್ರವನ್ನು ಹಿಂಪಡೆಯದೇ ಕಣದಲ್ಲಿ ಉಳಿದಿದ್ದೇಯಾದರೆ ಅದನ್ನು ಅಶಿಸ್ತು ಎಂದು ಪರಿಗಣಿಸುವ ಬಿಜೆಪಿ ನಾಯಕರು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಿದೆ ಎಂದು ತಿಳಿದುಬಂದಿದೆ.

ಸದ್ಯ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಗೆಲುವಿಗಾಗಿ ಬಿಜೆಪಿ ರಾಜ್ಯ ಮತ್ತು ಕೇಂದ್ರ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ರೆ ಇತ್ತ, ಕೆ ಎಸ್‌ ಈಶ್ವರಪ್ಪ ಅವರು ಏಕಾಂಗಿಯಾಗಿ ರಣತಂತ್ರವನ್ನು ಹೆಣೆದಿದ್ದಾರೆ. ಇನ್ನೂ ನಾಮಪತ್ರ ಹಿಂಪಡೆಯುವಂತೆ ಈಶ್ವರಪ್ಪ ಆಪ್ತರ ಮೂಲಕ ಸೂಚನೆ ನೀಡಲಾಗಿತ್ತು. ಆದರೆ ಈಗಾಗಲೇ ಬಹುದೂರ ಸಾಗಿರುವ ಅವರು ಬ್ರಹ್ಮ ಬಂದು ಹೇಳಿದರೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಕಡ್ಡಿ ಮುರಿದಂತೆ ಕೆ ಎಸ್‌ ಈಶ್ವರಪ್ಪ ಅವರು ಹೇಳಿದ್ದು, ಬಿಜೆಪಿಯಿಂದ ಉಚ್ಛಾಟನೆ ಫಿಕ್ಸ್‌ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+