Reality Check: ಸಾರಿಗೆ ಸಚಿವರಿಗೇ 'ಚಿಲ್ಲರೆ ಕೊಡಿ ಇಲ್ಲ ಬಸ್‌ನಿಂದ ಇಳೀರಿ': BMTC ಬಸ್ ಡ್ರೈವರ್- ಕಂಡಕ್ಟರ್ ಅಮಾನತು
ಬೆಂಗಳೂರು; ಬೆಂಗಳೂರು ನಗರವಾಸಿಗಳ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಸಮಸ್ಯೆಗಳು ಸಹ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಬಸ್ ನಿಲ್ಲಿಸದಿರುವುದು, ಚಿಲ್ಲರೆ ಸಮಸ್ಯೆ, ಪ್ರಯಾಣಿಕರೊಂದಿಗೆ ಜಗಳ ಇನ್ನಿತರ ಘಟನೆಗಳು ನಡೆಯುತ್ತವೆ. ಅದೇ ರೀತಿ ಬಸ್ ಹತ್ತಿದ್ದ ಸಾರಿಗೆ ಸಚಿವರ ಬಳಿ ಚಿಲ್ಲರೆ ಇಲ್ಲದ್ದಕ್ಕೆ ಕಂಡಕ್ಟರ್ ಬಸ್‌ನಿಂದ ಕೆಳಕ್ಕೆ ಇಳಿಸಿದ ಘಟನೆ ನಡೆದಿದೆ.
ಕರ್ನಾಟಕ ರಾಜ್ಯದಲ್ಲಿ 'ಶಕ್ತಿ ಯೋಜನೆ' ಸಾರಿಗೆ ಇಲಾಖೆ ದಿವಾಳಿ ಆಗಿದೆ, ಆರ್ಥಿಕ ಸಂಕಷ್ಟದಲ್ಲಿದೆ. ಪ್ರಯಾಣಿಕರು ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ. ಈ ಕಾರಣದಿಂದ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬೈರತಿ ಸುರೇಶ್ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ನಲ್ಲಿ ಖುದ್ದು ಪ್ರಯಾಣಿಸುವ ಮೂಲಕ 'ರಿಯಾಲಿಟಿ ಚೆಕ್' ಮಾಡಿದರು.

ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ, ಟಿಕೆಟ್ ವಿತರಣೆ, ಪ್ರಯಾಣಿಕರೊಂದಿಗಿನ ಬಸ್ ಕಂಡಕ್ಟರ್ ವರ್ತನೆ ಸೇರಿದಂತೆ ಹಲವು ಅಂಶಗಳನ್ನು ಸಚಿವರು ಖುದ್ದು ಗಮನಿಸಿದರು.
ರಿಯಾಲಿಟಿ ಚೆಕ್‌ನಲ್ಲಿ ಸಚಿವರಿಗೆ ವ್ಯವಸ್ಥೆಯ ದರ್ಶನ
ಶನಿವಾರ ಸಂಜೆ 7.30ಕ್ಕೆ ಜಯಮಹಲ್‌ನಿಂದ ಟಿವಿ ಟವರ್ ವರೆಗೆ, ಆರ್ ಟಿ ನಗರ ದಿಂದ ಸಿಬಿಐ ರಸ್ತೆ, ಮುಂದೆ ಮಸೀದಿ ನಿಲ್ದಾಣ, ಬಳ್ಳಾರಿ ಮುಖ್ಯರಸ್ತೆ, ತದನಂತರ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಮುಂದೆ ರಿಂಗ್ ರಸ್ತೆ ಮೂಲಕ ಮಾನ್ಯತಾ ಟೆಕ್‌ಪಾರ್ಕ್, ನಾಗವಾರ, ಹೆಣ್ಣೂರು ಹೀಗೆ ಮುಂದೆ ಗೆದ್ಲಹಳ್ಳಿವರೆಗೆ ಸಚಿವರ ಸಂಚಾರ ಮಾಡಿ ರಿಯಾಲಿಟಿಯನ್ನು ಪರಿಶೀಲಿಸಿದರು. ಅದರ ವಿಡಿಯೋಗಳು ಇಂಟರ್‍ನೆಟ್‌ನಲ್ಲಿ ಹರಿದಾಡುತ್ತಿದೆ.
ಸಚಿವರು ಬಸ್‌ನಲ್ಲಿ ರಿಯಾಲಿಟಿ ಚೆಕ್ ಮಾಡುವಾಗ ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಅವರು ಸಚಿವರು, ರಾಜಕಾರಣಿ ಎಂದು ಬಸ್ ನಿರ್ವಾಹಕ, ಚಾಲಕರಿಗೆ ಗೊತ್ತಾಗಿಲ್ಲ. ಪ್ರಯಾಣಿಕರು ಅವರನ್ನು ಗುರುತಿಸಿಲ್ಲ. ತಾವು ಜನಸಾಮಾನ್ಯರಂತೆ ಸಹ ಪ್ರಯಾಣಿಕರಿಂದ ಸಂಚಾರ ವ್ಯವಸ್ಥೆ, ನಿಲುಗಡೆ ಕುರಿತು ಸಮಾಲೋಚಿಸಿದರು.
ಚಿಲ್ಲರೆ ಇಲ್ಲದಕ್ಕೆ ಸಚಿವರನ್ನು ಕೆಳಗಿಳಿಸಿದ ಬಸ್ ಚಾಲಕ
ಇದೇ ವೇಳೆ ಹೆಬ್ಬಾಳ-ನಾಗಶೆಟ್ಟಿಹಳ್ಳಿ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ ಸಾರಿಗೆ ಸಚಿವರನ್ನು ಟಿಕೆಟ್...ಟಿಕೆಟ್.. ಎಂದು ಕಂಡಕ್ಟರ್ ಕೇಳಿದ್ದಾರೆ. ಆಗ ಸಚಿವರು 100 ರೂ. ನೀಡಿದಾಗ, ಚಿಲ್ಲರೆ ಕೊಡಿ, ತನ್ನ ಬಳಿಯು ಚಿಲ್ಲರೆ ಇಲ್ಲವೆಂದು ತನ್ನ ಬ್ಯಾಗ್ ತೋರಿಸಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯುವಂತೆ ತಿಳಿಸಿದ್ದಾರೆ. ಕಂಡಕ್ಟರ್ ಪ್ರತಿಕ್ರಿಯೆ ನೋಡಿದ ಸಚಿವರು ಏನೊಂದನ್ನು ಮಾತನಾಡಿದೇ ಬಸ್‌ನಿಂದ ಕೆಳಗೆ ಇಳಿದಿದ್ದಾರೆ.
ಕೈ ಮಾಡಿದ್ರು ಬಸ್ ನಿಲ್ಲಿಸಿಲ್ಲ: ಸಿಬ್ಬಂದಿ ಅಮಾನತಿಗೆ ಸೂಚನೆ
ಮುಂದೆ ಚಿಲ್ಲರೆ ಸಮೇತ ಟಕೆಟ್‌ಗೆ ಬೇಕಾದ ಅಗತ್ಯ ನೀಡಿ ಬೇಸ್ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಈ ವೇಳೆ ಜಯಮಹಲ್ ಕಡೆಯಿಂದ ಬಂದ ಬಸ್ (KA 57 F 3372) ಫನ್ ವರ್ಲ್ಡ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈ ಮಾಡಿದರೂ ನಿಲ್ಲದೇ ಹಾಗೇ ಹೋಗಿದ್ದನ್ನು ಹಿಂದಿನ ಬಸ್‌ನಲ್ಲಿದ್ದ ಸಚಿವರು ಗಮನಿಸಿದ್ದಾರೆ. ಕೂಡಲೇ ಆ ಬಸ್ ನಿರ್ವಾಹಕರು ಮತ್ತು ಚಾಲಕರನ್ನು ಅಮಾನತು ಮಾಡುವಂತೆ ಸೂಚನೆ ನೀಡುವ ಮೂಲಕ ಪ್ರಯಾಣಿಕರಿಗೆ ಸ್ಪಂದಿಸುವುದು ಬಿಎಂಟಿಸಿ ಬಸ್ ಸಿಬ್ಬಂದಿ ಕರ್ತವ್ಯ, ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಅಮಾನತು ಕ್ರಮದ ಮೂಲಕ ರವಾನಿಸಿದ್ದಾರೆ.
ಮುಂದೆ ಆಟೋ ಹತ್ತಿದ ಬಸ್ ಪ್ರಯಾಣೀಕರಿಗೆ ಮತ್ತೊಂದು ಅನುಭವವಾಗಿದೆ. ಆಟೋ ಮೀಟರ್ 30 ರೂಪಾಯಿ ತೋರಿಸಿದರೂ ಸಹಿತ ಚಾಲಕ 35 ರೂ. ನೀಡುವಂತೆ ಕೇಳಿದ್ದಾನೆ. ಯಾಕೆ ಎಂದ ಸಚಿವರಿಗೆ ಮೀಟರ್ ಕೆಟ್ಟಿದ್ದು ಸರಿ ಮಾಡಿಸುವೆ ಎಂದಿದ್ದಾರೆ. ಸಚಿವರು 40 ರೂಪಾಯಿ ಕೈಗಿಟ್ಟು ಅಲ್ಲಿಂದ ನಡೆದಿದ್ದಾರೆ.
ಹೀಗೆ ಸಚಿವರೊಬ್ಬರು ರಿಯಾಲಿಟಿ ಚೆಕ್ ಮೂಲಕ ಕೆಲವೇ ನಿಲ್ದಾಣ, ಮಾರ್ಗದಲ್ಲಿನ ಬಸ್‌ಗಳ ವ್ಯವಸ್ಥೆ ಪರಿಶೀಲಿಸಿದ್ದಾರೆ. ನಿತ್ಯ ನೂರಾರು ಮಾರ್ಗಗಳಲ್ಲಿ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಒಂದಿಲ್ಲೊಂದು ಸಮಸ್ಯೆ, ತಾಪತ್ರಯ ಅನುಭವಿಸುತ್ತಾರೆ. ಮಳೆಗಾಲದಲ್ಲಂತೂ ಈ ಸಮಸ್ಯೆ ಹೆಚ್ಚಿರುತ್ತದೆ. ಇನ್ನೂ ಬಿಎಂಟಿಸಿ ಬಸ್ ಸಿಬ್ಬಂದಿ ಸಹ ರಜೆ, ವೇತನ ಪರಿಷ್ಕರಣೆ, ರಜೆ ಇಲ್ಲದೇ ಕೆಲಸ ಇನ್ನಿತರ ಕಾರಣಗಳಿಂದ ಒತ್ತಡದಲ್ಲಿ ಸಿಲುಕಿದ್ದಾರೆ ಅಂತಲೂ ದೂರುಗಳು ಕೇಳಿ ಬಂದಿವೆ..
ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ಸ್ನೇಹಿ ನಿಯಮಗಳನ್ನು ಜಾರಿಗೆ ತಂದು ಬೆಂಗಳೂರು ಸಾರಿಗೆಯನ್ನು ಮಾದರಿಯಾಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸದ್ಯ ಸಚಿವರು ರಿಯಾಲಿಟಿ ಚೆಕ್ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Karnataka Transport Minister @byrathi_suresh travelled incognito on 10+ BMTC buses.across Bengaluru for 2 hours wearing a mask to inspect services firsthand.
— ChristinMathewPhilip (@ChristinMP_) July 12, 2026
He suspended a driver and conductor after a bus failed to stop for passengers. In another bus, a conductor asked him to… pic.twitter.com/celtwAXIPG














Click it and Unblock the Notifications