Chamarajanagar Lok sabha Constituency: ಚಾಮರಾಜನಗರಕ್ಕೆ ಎಂಟ್ರಿ ಕೊಡಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಚಾಮರಾಜನಗರ, ಏಪ್ರಿಲ್, 21: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಲೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಇಂದು (ಏಪ್ರಿಲ್ 21) ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಬಿಎಸ್ ಯಡಿಯೂರಪ್ಪ ಎಂಟ್ರಿ ಕೊಟ್ಟು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಲಿಂಗಾಯತ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಇಂದು ಪಕ್ಷದ ಘಟಾನುಘಟಿ ನಾಯಕರು ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಎಸ್.ಬಾಲರಾಜು ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ 1ಕ್ಕೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬೇರೆ ಬೇರೆ ಕಡೆ ಬಿ.ಎಸ್.ಯಡಿಯೂರಪ್ಪ ರೋಡ್ ಶೋ ನಡೆಸಲಿದ್ದು, ಮತ್ತೊಂದೆಡೆ ಬಿ.ವೈ.ವಿಜಯೇಂದ್ರ ಅವರು ಹೆಚ್.ಡಿ. ಕೋಟೆ, ಸರಗೂರು, ನಂಜನಗೂಡಿನಲ್ಲಿ ರೋಡ್ ಶೋ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೋದಿ ಸರ್ಕಾರ ಮಾಡಿರೋದು ಕೇವಲ ಚೊಂಬು ಮಾಡೆಲ್: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಚಾಮರಾಜನಗರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರ ಕೇವಲ ಮಾಡಿರೋದು ಚೊಂಬು ಮಾಡೆಲ್. ನಾವು ಕೇಂದ್ರ ಸರ್ಕಾರಕ್ಕೆ 100 ರೂಪಾಯಿ ಕೊಟ್ರೆ ಅವ್ರು ನಮಗೆ 13 ರೂಪಾಯಿ ಅಷ್ಟೇ ವಾಪಸ್ ಕೊಡ್ತಾರೆ. ನಾವು ಅದನ್ನು ಕೇಳಿದರೆ ಚೊಂಬು ತಗೋಳಿ ಅಂತಾರೆ.
ಹಾಗೆಯೇ ಉದ್ಯೋಗ ಕೇಳಿದ್ರೆ ಮೋದಿ ಹೇಳೋದು ಚೊಂಬು ತಗೋಳಿ ಅಂತಾ ಎಂದು ವ್ಯಗ್ಯವಾಡಿದರು.
ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸಿದೆ. 58 ಕೋಟಿ ರೂಪಾಯಿ ಹಣವನ್ನು ಕರ್ನಾಟಕದ ಜನತೆಯ ಖಾತೆಗೆ ಹಾಕಿದ್ದೀವಿ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲೂ ಗ್ಯಾರಂಟಿ ಕೊಡಲು ನಿರ್ಧರಿಸಿದೆ ಎಂದರು.
ಬಿಜೆಪಿಯ 2 ಕೋಟಿ ರೂಪಾಯಿ ಹಣವನ್ನು ನಿನ್ನೆ (ಏಪ್ರಿಲ್ 20) ಬೆಂಗಳೂರಲ್ಲಿ ಸೀಜ್ ಮಾಡಲಾಗಿದ್ದು, ಈ ಹಣವನ್ನು ಮೈಸೂರು ಹಾಗೂ ಚಾಮರಾಜನಗರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಇನ್ನು ಈ ಬಗ್ಗೆ ಎರಡು ಪತ್ರಗಳು ಕೂಡ ಕಾರಿನಲ್ಲಿ ಲಭ್ಯವಾಗಿದೆ ಎಂದರು.
ಮಾರ್ಚ್ 27 ರಂದು ಕೋದಂಡ ರಾಮಪುರದ ಕೆನರಾ ಬ್ಯಾಂಕ್ ಬ್ರಾಂಚ್‌ನಿಂದ 5 ಕೋಟಿ ರೂಪಾಯಿ ಹಣವನ್ನು ವಿಥ್ ಡ್ರಾ ಮಾಡಲಾಗಿದೆ. 50 ಸಾವಿರಕ್ಕೂ ಹೆಚ್ಚು ಹಣ ಸಾಗಿಸಿದ್ರೆ ಎಲೆಕ್ಷನ್ ಕಮಿಷನ್ ಸೀಜ್ ಮಾಡುತ್ತದೆ. ಆದರೆ
ಬಿಜೆಪಿ ಕೋಟಿ ಕೋಟಿ ಹಣವನ್ನು ಸಾಗಿಸುತ್ತಿದೆ. ಇನ್ನು ವಿಥ್ ಡ್ರಾ ಮಾಡಿದ ಹಣವನ್ನ 10 ಕಿಲೋ ಮೀಟರ್ ಸಾಗಿಸಲು ಒಂದು ತಿಂಗಳು ಬೇಕಾಗಿತ್ತಾ? ಎಂದು ಪ್ರಶ್ನೆ ಮಾಡಿದರು.
ಎಂದು ನಾನು ಮೋದಿ, ವಿಜಯೇಂದ್ರ , ಜೆಪಿ ನಡ್ಡಾ ಅವರನ್ನು ಪ್ರಶ್ನೆ ಮಾಡ್ತೀನಿ. ಇಲ್ಲಿ ಮನಿ ಲಾಂಡ್ರಿಂಗ್ ಏನಾದ್ರೂ ಅಗ್ತಿದೆಯಾ? ಯಾಕೆ ಮೈಸೂರು ಹಾಗೂ ಚಾಮರಾಜನಗರಕ್ಕೆ ಸಾಗಿಸುತ್ತಿದ್ದೀರಾ? ಎಲೆಕ್ಷನ್ ಕಮಿಷನ್ ಯಾಕೆ ವಿಜಯೇಂದ್ರ ಹಾಗೂ ಆರ್.ಅಶೋಕ್ ಮೇಲೆ ಕ್ರಮ ತೆಗೆದುಕೊಳ್ಳಬಾರದು ಎಂದರು.
ಈ ಹಣವನ್ನು ಪೊಲೀಸ್ ಸೀಜ್ ಮಾಡಿದ ಮೇಲೆ ಇಂಟ್ರೆಸ್ಟಿಂಗ್ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಐಟಿ ಇಲಾಖೆ ಬಿಜೆಪಿಯನ್ನು ಉಳಿಸಲು ಎಂಟ್ರಿಯಾಗಿತ್ತು. ರಾತ್ರೋ ರಾತ್ರಿಯೇ ಇನ್ನೊಂದು ಆದೇಶ ಕೂಡ ಪಾಸ್ ಅಗುತ್ತದೆ. ಈ ಹಣವನ್ನು ಬ್ಯಾಂಕ್‌ನಿಂದ ವಿಥ್ ಡ್ರಾ ಮಾಡಲಾಗಿದೆ. ಇಲ್ಲಿ ಯಾವ ರೀತಿ ಮನಿ ಲಾಂಡ್ರಿಂಗ್ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೇ ಉತ್ತರ ಕೊಡಿ ಎಂದರು.












Click it and Unblock the Notifications