ಸಿಎಂ ಆಗಲು ನಾನು ಸಮರ್ಥನಿದ್ದೇನೆ: ಸಿದ್ದರಾಮಯ್ಯ 2 ಸಾವಿರ ಕೊಡತಿದ್ರೆ, ನಾನು 5 ಸಾವಿರ ಕೊಡ್ತೀನಿ ಎಂದ ಬಿಜೆಪಿ ನಾಯಕ
ಬೆಳಗಾವಿ, ಏಪ್ರಿಲ್ 14:ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ. ನಾನು ಯಾರಿಗೂ ಅಪ್ಪಾಜಿ ಅಪ್ಪಾಜಿ ಅಂತ ಕಾಲಿಗೆ ನಮಸ್ಕರಿಸುವುದಿಲ್ಲ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇದೀಗ ಮತ್ತೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಿಕ್ಕೋಡಿಯಲ್ಲಿ ಶಿನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದಾವರು, ಮುಖ್ಯಮಂತ್ರಿ ಆಗಲು ನಾನು ಸಮರ್ಥನಿದ್ದೇನೆ. ನನ್ನ ಕಡೆಗೆ ಐದು ವರ್ಷ ಅಧಿಕಾರ ಕೊಟ್ಟು ನೋಡಲಿ, ಸಿದ್ದರಾಮಯ್ಯ ಎರಡು ಸಾವಿರ ಕೊಡುತ್ತಿದ್ದರೇ ನಾನು ಐದು ಸಾವಿರ ಕೊಡ್ತಿನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ಅಧಿಕಾರವಿದ್ರೆ ಪ್ರಾಮಾಣಿಕವಾಗಿ ಜನರಿಗೆ ಕೊಡಬಹುದು. ಜನರಿಗೆ ಬೇಕಾಗಿದ್ದು ನೀರಾವರಿ ಸೌಲಭ್ಯಗಳು, ಜನರು ಸ್ವಾವಲಂಬಿಯಾಗಿ ಬದುಕುವಂತಹ ವ್ಯವಸ್ಥೆ ಮಾಡುತ್ತೇನೆ. ಭ್ರಷ್ಟಚಾರ ನಿರ್ಮೂಲನೆ ಮಾಡುತ್ತೇನೆ, ಸಿಎಂ ಸ್ಥಾನ ಕೊಟ್ರೆ ಇವನ್ನೆಲ್ಲಾ ಮಾಡಬಹುದು. ಇಲ್ಲದಿದ್ರೆ ಹಿಂಗ್ ಮಾತನಾಡುತ್ತಾ ಹೋಗೋದು ಎಂದ ಶಾಸಕ ಪಾಟೀಲ್ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತೆ ಎನ್ನುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನು ಒಂದು ವರ್ಷದಲ್ಲಿ ಶಾಸಕರಿಗೆ ಸಂಬಳ ಸಿಗದಂತಹ ಪರಿಸ್ಥಿರಿ ಬರುತ್ತದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ನವರು ಬೇರೆ ರೀತಿಯಲ್ಲಿ ಮಾತನಾಡಲು ಶುರು ಮಾಡ್ತಾರೆ, ಕಾಂಗ್ರೆಸ್ ಎಂಎಲ್‌ಎಗಳು ಯಾರೂ ಅಭಿವೃದ್ಧಿ ಕೇಳಬೇಡ್ರಿ , ನಮಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಕಠಿಣವಾಗಿದೆ ಎಂದು ಖುದ್ದು ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬಿಜೆಪಿ 40% ಸರ್ಕಾರ ಅಂತಿದ್ರು, ಕಾಂಗ್ರೆಸ್ ಸರ್ಕಾರದಲ್ಲಿ ಅದು 50% ಆಗಿದೆ. ಬಿಜೆಪಿ ಟೀಕೆ ಮಾಡಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದು, ಬಿಜೆಪಿ ಸರ್ಕಾರದ 40% ಕಮಿಷನ್ ಕೇಸ್ ತನಿಖೆ ಮಾಡಲಿ, ಸಿಬಿಐಗೆ ವಹಿಸಲಿ.ಯಾಕೆ ಕೊಡ್ತಿಲ್ಲ, ನೀವು ಹಿಂದಿನವರು ಅಡ್ಜೆಸ್ಟಮೆಂಟ್ ಇದ್ರೆನು..? ಪಿಎಸ್ಐ ಹಗರಣದಲ್ಲಿ ಬಿಜೆಪಿ ಬಾರಿ ಲೂಟಿ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದ್ರು. ಅಧಿಕಾರಿ ನಿಮ್ಮ ಬಳಿಯೇ ಇದೆ ಸಿಬಿಐಗೆ ವಹಿಸಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.












Click it and Unblock the Notifications