ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್: ಭಾರತೀಯ ಮೂಲದ ವಿದ್ಯಾರ್ಥಿಗಳ ಸುಳಿವಿಲ್ಲ

By Mahesh
|
Google Oneindia Kannada News

ನ್ಯೂಯಾರ್ಕ್, ಮಾ. 7: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಸ್ನೇಹಿತರೊಂದಿಗೆ ರಜೆಯ ಮೋಜಿನಲ್ಲಿದ್ದ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅದೇ ವೇಳೆ, ಇತ್ತೀಚೆಗೆ ನ್ಯೂಯಾರ್ಕ್ ನಲ್ಲಿ ನಾಪತ್ತೆಯಾಗಿರುವ ಭಾರತೀಯ-ಅಮೆರಿಕನ್ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಇನ್ನೂ ಚಾಲನೆಯಲ್ಲಿದೆ. ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಯರು ನಾಪತ್ತೆಯಾಗಿ 11 ದಿನಗಳು ಕಳೆದಿವೆ.

ರೈಸ್ ವಿಶ್ವವಿದ್ಯಾನಿಲಯದ ಮಾರ್ಟೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ರೆನಿ ಜೋಸ್ ಫ್ಲೋರಿಡಾದ ಪನಾಮ ಸಿಟಿ ಬೀಚ್ ‌ನಲ್ಲಿದ್ದಾಗ ನಾಪತ್ತೆಯಾಗಿದ್ದಾರೆ.ಸಂಜೆ ನಡಿಗೆಗಾಗಿ ಹೊರ ಹೋದ ಅವರು ಹಿಂದಿರುಗಲಿಲ್ಲ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಈ ವಿಷಯವನ್ನು ಫ್ಲೋರಿಡಾ ಬೇ ಕೌಂಟಿ ಪೊಲೀಸ್ ಕಚೇರಿ ದೃಢಪಡಿಸಿದೆ.

ಜೋಸ್ ಹುಡುಕಾಟಕ್ಕೆ ಅನುಕೂಲವಾಗಲೆಂದು ಜೋಸ್ ಅವರ ಸೋದರಿ ರೇಷ್ಮಾ ಜೋಸ್ ಅವರು ಫೇಸ್ ಬುಕ್ ಪುಟ ಆರಂಭಿಸಿದ್ದಾರೆ. ಲಾಥಮ್ ಶಾಕರ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ ನಂತರ ರೈಸ್ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಜೋಸ್ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.

Two Indian-American students go missing

ಈ ನಡುವೆ, ಫೆಬ್ರವರಿ 24ರಂದು ನಾಪತ್ತೆಯಾದ 22 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜಾಸ್ಮಿನ್.ವಿ ಜೋಸೆಫ್ ‌ಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ. ಅವರು ನ್ಯೂಯಾರ್ಕ್ ‌ನ ತನ್ನ ಮನೆಯಿಂದ ನ್ಯೂಯಾರ್ಕ್ ಇನ್ ‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ‌ಗೆ ಹೋಗಲೆಂದು ಕಾರಿನಲ್ಲಿ ಹೋದವರು ಹಿಂದಿರುಗಿಲ್ಲ.

ಆದರೆ, ಆಕೆ ನ್ಯೂಯಾರ್ಕ್ ನ ಕಾಲೇಜಿಗೆ ದಾಖಲಾಗಿದ್ದಳೇ? ಸರಿಯಾಗಿ ಕಾಲೇಜಿಗೆ ಹೋಗುತ್ತಿದ್ದಳೇ? ಎಂಬುದರ ಬಗ್ಗೆ ಆಕೆ ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲ. ಕಳೆದ ಮೇ ತಿಂಗಳಿನಿಂದ ಜಾಸ್ಮಿನ್ ಜೋಸೆಫ್ ಹೆಸರಿನ ವಿದ್ಯಾರ್ಥಿ ಓಲ್ಡ್ ವೆಸ್ಟ್ ಬರಿ ಕ್ಯಾಂಪಸಿನ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿಲ್ಲ ಎಂದು ನ್ಯೂಯಾರ್ಕ್ ಕಾಲೇಜಿನ ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ಕಳೆದ ತಿಂಗಳು ಇಲಿನಾಯ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಪ್ರವೀಣ್ ವರ್ಗೀಸ್ ಎಂಬುವರು ಕೂಡಾ ನಾಪತ್ತೆಯಾಗಿದ್ದರು. ನಂತರ ಅವರ ಶವ ಕಾರ್ಬೊನ್ಡೇಲ್ ನ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿತ್ತು.(ಐಎಎನ್ಎಸ್)

English summary
Even as search continues for an Indian-American nursing student who went missing in New York 11 days ago another India native has mysteriously vanished on a spring break trip to Florida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X