ನ್ಯೂಯಾರ್ಕ್‌ನಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಭಾರತೀಯ ವಿದ್ಯಾರ್ಥಿಗಳು ಮೃತ

ನ್ಯೂಯಾರ್ಕ್ ಅಕ್ಟೋಬರ್ 28: ಪಶ್ಚಿಮ ಮೆಸಾಚುಸೆಟ್ಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27) ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ರವರು ಘರ್ಷಣೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬರ್ಕ್‌ಷೈರ್ ಜಿಲ್ಲಾಧಿಕಾರಿಗಳ ಕಚೇರಿ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಐವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಮೆಸಾಚುಸೆಟ್ಸ್‌ ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸರಿಸುಮಾರು ಮುಂಜಾನೆ 5:30 ರ ವೇಳೆಗೆ ಉತ್ತರ ದಿಕ್ಕಿನಿಂದ ಬರುತ್ತಿದ್ದ ಕಾರು ಮತ್ತು ದಕ್ಷಿಣ ಭಾಗದಿಂದ ಬರುತ್ತಿದ್ದ ವಾಹನ ಡಿಕ್ಕಿ ಹೊಡೆದಿವೆ. ಕಾರಿನಲ್ಲಿದ್ದ ಇತರ ಐವರು ಗಾಯಗೊಂಡಿದ್ದಾರೆ. 23 ವರ್ಷದ ಮನೋಜ್ ರೆಡ್ಡಿ ದೊಂಡ, 22 ವರ್ಷದ ಶ್ರೀಧರ್ ರೆಡ್ಡಿ ಚಿಂತಕುಂಟಾ, 23 ವರ್ಷದ ವಿಜಿತ್ ರೆಡ್ಡಿ ಗುಮ್ಮಲ ಮತ್ತು 22 ವರ್ಷದ ಹಿಮಾ ಐಶ್ವರ್ಯ ಸಿದ್ದಿರೆಡ್ಡಿ ಅವರನ್ನು ಬರ್ಕ್‌ಶೈರ್ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾನೂನು ಜಾರಿ ಅಧಿಕಾರಿಗಳು ಕಾರಿನಲ್ಲಿದ್ದವರನ್ನು ಅಂತಾರಾಷ್ಟ್ರೀಯ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಿದ್ದಾರೆ. ಆರು ಮಂದಿ ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಮತ್ತು ಒಬ್ಬರು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ವಾಹನದ ಚಾಲಕ 46 ವರ್ಷದ ಅರ್ಮಾಂಡೋ ಬೌಟಿಸ್ಟಾ-ಕ್ರೂಜ್ ಅವರನ್ನು ಚಿಕಿತ್ಸೆಗಾಗಿ ಫೇರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ.

Terrible road accident in New York: Three Indian students killed

ಶೆಫೀಲ್ಡ್ ಪೋಲೀಸ್ ಇಲಾಖೆ ಮತ್ತು ಬರ್ಕ್‌ಷೈರ್ ಡಿಸ್ಟ್ರಿಕ್ಟ್ ಅಟಾರ್ನಿ ಕಛೇರಿಗೆ ನಿಯೋಜಿಸಲಾದ ರಾಜ್ಯ ಪೊಲೀಸ್ ಡಿಟೆಕ್ಟಿವ್ ಯೂನಿಟ್ ಘಟನೆಯ ತನಿಖೆ ನಡೆಸುತ್ತಿದೆ. ಮಾಹಿತಿ ಹೊಂದಿರುವ ಯಾರಾದರೂ ಅಧಿಕಾರಿಗಳನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+