Donald Trump : ರಸ್ತೆಯುದ್ದಕ್ಕೂ ಬ್ಯಾರಿಕೇಡ್, ಸ್ತಬ್ಧವಾದ ನ್ಯೂಯಾರ್ಕ್: ಟ್ರಂಪ್ ಬಂಧನಕ್ಕೆ ಸಕಲ ಸಿದ್ಧತೆ?

ನ್ಯೂಯಾರ್ಕ್: ಮತ್ತೊಂದು ಮಹಾನ್ ಅಂತರ್ಯುದ್ಧಕ್ಕೆ ಅಮೆರಿಕ ಸಜ್ಜಾದಂತೆ ಕಾಣುತ್ತಿದೆ. 2021ರ ಕ್ಯಾಪಿಟಲ್ ಹಿಲ್ ದುರಂತವನ್ನು ಕಣ್ಮುಂದೆ ತರಿಸುವಂತಹ ಭಯಾನಕ ವಾತಾವರಣ ಅಮೆರಿಕದಲ್ಲಿ ಮತ್ತೆ ಸೃಷ್ಟಿಯಾಗುತ್ತಿದೆ. ಅಷ್ಟಕ್ಕೂ ಈ ಆತಂಕಕ್ಕೆಲ್ಲಾ ಕಾರಣ ಒನ್ಸ್ ಅಗೈನ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್‌ ಬಾಯಿ ಮುಚ್ಚಿಸಲು 1 ಲಕ್ಷ 30 ಸಾವಿರ ಡಾಲರ್ ಹಣವನ್ನು ತಮ್ಮ ವಕೀಲರ ಮೂಲಕ ಅಕ್ರಮವಾಗಿ ನೀಡಿದ್ದರು ಎಂಬ ಗಂಭೀರ ಆರೋಪದ ಹಿನ್ನೆಲೆ ಟ್ರಂಪ್ ವಿರುದ್ಧ ವಿಚಾರಣೆ ನಡೆಯುತ್ತಿದೆ.

ವಿಚಾರಣೆ ಸಂಬಂಧ ಮ್ಯಾನ್‌ಹಟನ್ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಂಗಳವಾರ ಹಾಜರಾಗಲಿದ್ದು, ಇದೇ ಸಂದರ್ಭದಲ್ಲಿ ಟ್ರಂಪ್ ಅವರನ್ನ ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತಮ್ಮ ಬೆಂಬಲಿಗರಿಗೆ ಪ್ರತಿಭಟನೆ ನಡೆಸುವಂತೆ ಟ್ರಂಪ್ ಕರೆ ನೀಡಿರುವ ಕಾರಣಕ್ಕೆ ಹಿಂಸಾಚಾರ ಭುಗಿಲೇಳುವ ಆತಂಕ ಆವರಿಸಿದೆ. ಪರಿಸ್ಥಿತಿ ಕೈಮೀರಿ ಹೋದರೆ 2021ರ ಕ್ಯಾಪಿಟಲ್ ಹಿಲ್ ದುರಂತ ಮರುಕಳಿಸೋದು ಪಕ್ಕಾ. ಹೀಗಾಗಿ ನ್ಯೂಯಾರ್ಕ್ ನಗರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ನ್ಯೂಯಾರ್ಕ್ ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಯಾರಾದರೂ ಬಾಲ ಬಿಚ್ಚಿದರೆ ಕಟ್ ಮಾಡಲು ಅಮೆರಿಕದ ಭದ್ರತಾ ಸಿಬ್ಬಂದಿ ಸಜ್ಜಾಗಿದ್ದಾರೆ.

New York administration increased security amid Trump inquiry in Manhattan courthouse

ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿ ಟ್ರಂಪ್ ಹೆಗಲು ಹೇರಿದೆ. 2016ರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಜತೆಗಿನ ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆಗೆ ಟ್ರಂಪ್ ಹಣ ಸಂದಾಯ ಮಾಡಿದ್ದ ಪ್ರಕರಣ ಇದಾಗಿದೆ. 2 ವಾರಗಳ ಹಿಂದೆಯೇ ಟ್ರಂಪ್ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮನ್ನು ಅರೆಸ್ಟ್ ಮಾಡಿದ್ದೆ ಆದಲ್ಲಿ ಉಗ್ರ ಹೋರಾಟ ನಡೆಸುವಂತೆಯೂ ಕರೆ ನೀಡಿದ್ದರು. ಇದೀಗ ಅಮೆರಿಕದ ಪ್ರಮುಖ ನಗರಗಳಲ್ಲಿ ಹಿಂಸಾಚಾರ, ಪ್ರತಿಭಟನೆಗಳು ಭುಗಿಲೇಳುವ ಮುನ್ಸೂಚನೆ ಸಿಕ್ಕಿದು ಹೈಅಲರ್ಟ್ ಘೋಷಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಹಿಂದೆ ಅಂದರೆ 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್‌ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಟ್ರಂಪ್ ವಿರುದ್ಧದ ಈ ಆರೋಪ ಅವರಿಗೆ 2016ರ ಚುನಾವಣೆ ಹೊತ್ತಲ್ಲಿ ಮುಳುವಾಗುವ ಸಾಧ್ಯತೆ ದಟ್ಟವಾಗಿತ್ತು. ಆಗ ಸ್ಟಾರ್ಮಿ ಡೇನಿಯಲ್ಸ್‌ ಬಾಯಿ ಮುಚ್ಚಿಸೋದಕ್ಕೆ ಟ್ರಂಪ್ ಸುಮಾರು 1 ಲಕ್ಷ 30 ಸಾವಿರ ಡಾಲರ್ ಅಂದರೆ 1 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಿದ್ದರು ಎನ್ನಲಾಗಿದೆ. ಅಮೆರಿಕದ ಕಾನೂನಿನಲ್ಲಿ ಈ ರೀತಿ ಹಣ ಪಾವತಿ ಮಾಡುವುದು ಕಾನೂನು ಬದ್ಧ ಎನ್ನಲಾಗಿದೆಯಾದರೂ, ಟ್ರಂಪ್ ಹಣ ಪಾವತಿ ಮಾಡಿರುವ ರೀತಿ ಕಾನೂನು ಬದ್ಧವಲ್ಲ ಎಂಬ ಗಂಭೀರ ಆರೋಪ ಮಾಡಲಾಗಿದೆ. ಹೀಗಾಗಿ ಟ್ರಂಪ್ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಇದೀಗ ಅಮೆರಿಕದ ಅಧ್ಯಕ್ಷರಿಗೆ ಬಂಧನದ ಭೀತಿ ಎದುರಾಗಿದೆ.

2021ರ ಘೋರ ಹಿಂಸಾಚಾರ

ಇಡೀ ಜಗತ್ತು 2021ರ ಕ್ಯಾಪಿಟಲ್ ಹಿಲ್ ಹಿಂಸಾಚಾರವನ್ನು ಮರೆಯಲು ಸಾಧ್ಯವಿಲ್ಲ. ಟ್ರಂಪ್ ಬೆಂಬಲಿಗರು ದಿಢೀರ್ ಅಮೆರಿಕದ ಸಂಸತ್ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ್ದರು. ಸ್ವತಃ ಟ್ರಂಪ್ ಇದಕ್ಕೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ತಮ್ಮ ಬಂಧನದ ಸಾಧ್ಯತೆ ಇದ್ದು, ನೀವು ಪ್ರತಿಭಟನೆ ನಡೆಸಿ ಎಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆನೀಡಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಟ್ರಂಪ್ ವಿರುದ್ಧ ಆಡಳಿತ ಪಕ್ಷದ ನಾಯಕರು ತಿರುಗಿಬಿದ್ದಿದ್ದಾರೆ.

ಗಿಫ್ಟ್ ವಿಚಾರ ಮುಚ್ಚಿಟ್ಟ ಟ್ರಂಪ್?

ಒಂದು ಕಡೆ ಸ್ಟಾರ್ಮಿ ಡೇನಿಯಲ್ಸ್‌ ವಿಚಾರದಲ್ಲಿ ಟ್ರಂಪ್ ಕಂಬಿ ಎಣಿಸುವ ಭೀತಿ ಎದುರಾಗಿದ್ದರೆ, ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ದುಬಾರಿ ಗಿಫ್ಟ್ಗಳ ವಿಚಾರ ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಭಾರತ ಸೇರಿದಂತೆ ವಿದೇಶಿ ನಾಯಕರಿಂದ ಪಡೆದ 250 ಸಾವಿರ ಡಾಲರ್ ಮೌಲ್ಯದ ಗಿಫ್ಟ್ ಬಹಿರಂಗಪಡಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ವರದಿ ಪ್ರಕಾರ ಟ್ರಂಪ್ಗೆ ಕೊಟ್ಟ ಗಿಫ್ಟ್ ಪೈಕಿ ಭಾರತದಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದ 8,500 ಡಾಲರ್ ಬೆಲೆಯ ಗಿಫ್ಟ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರ 6,600 ಡಾಲರ್ ಬೆಲೆಬಾಳುವ ಗಿಫ್ಟ್ ಹಾಗೂ ಪ್ರಧಾನಿ ಮೋದಿ ಅವರು ನೀಡಿದ್ದ 1,900 ಡಾಲರ್ ಬೆಲೆಯ ಗಿಫ್ಟ್ಗಳು ಸೇರಿವೆ ಎಂದು ಆರೋಪ ಮಾಡಲಾಗಿದೆ.

ಒಂದು ಕಡೆ ಟ್ರಂಪ್ ಬೆಂಬಲಿಗರು 'ಮತ್ತೊಮ್ಮೆ ಟ್ರಂಪ್' ಎಂಬ ಘೋಷವಾಖ್ಯದ ಮೂಲಕ, ಮತ್ತೆ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಧಿಕಾರಕ್ಕೆ ಬರಲಿ ಎಂದು ಬೃಹತ್ ಕ್ಯಾಂಪೇನ್ ಶುರು ಮಾಡಿದ್ದರು. ಆದರೆ ಮತ್ತೊಂದು ಕಡೆ ಇಡೀ ಅಮೆರಿಕದ ಇತಿಹಾಸದಲ್ಲೇ ಮಾಜಿ ಅಧ್ಯಕ್ಷರಿಗೆ ಭಾರಿ ಕಠಿಣ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಆರ್ಥಿಕ ಮುಗ್ಗಟ್ಟು ಹಾಗು ಕೊರೊನಾ ಹಾವಳಿಗೆ ದೊಡ್ಡಣ್ಣ ಅಮೆರಿಕ ಬೆಚ್ಚಿಬಿದ್ದಿದೆ, ಇರೋ ಸಮಸ್ಯೆಗಳು ಸಾಲದು ಎಂಬಂತೆ ಟ್ರಂಪ್ ವಿಚಾರ ಕೆಂಡಕ್ಕೆ ತುಪ್ಪ ಸುರಿಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+