ಮೆಟ್ರೋದೊಳಗೆ ಸ್ನಾನ ಮಾಡಿದ ಬುದ್ದಿಗೇಡಿ: ಯಾವ ಊರು ಸ್ವಾಮಿ ನಿಂದು ಎಂದು ಕೇಳಿದ ನೆಟ್ಟಿಗರು
ನವದೆಹಲಿ ಏಪ್ರಿಲ್ 10: ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಬಿಕಿನಿ ಮತ್ತು ಮೈಕ್ರೋ ಮಿನಿ ಸ್ಕರ್ಟ್ ಧರಿಸಿದ್ದಕ್ಕಾಗಿ ವೈರಲ್ ಆಗಿರುವ 'ದೆಹಲಿ ಮೆಟ್ರೋ ಗರ್ಲ್' ಕುರಿತು ಇಂಟರ್ನೆಟ್ನಲ್ಲಿ ಚರ್ಚೆ ನಡೆಯುತ್ತಿದೆ. ವರದಿಯ ಪ್ರಕಾರ 19 ವರ್ಷ ವಯಸ್ಸಿನ ಹುಡುಗಿ ತಾನು ಧರಿಸಿದ ಉಡುಪಿನಿಂದಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಳು. ಸಾರ್ವಜನಿಕರನ್ನು ಕೆರಳಿದ್ದಳು. ಅಂದಿನಿಂದ ಅವಳ ಫ್ಯಾಶನ್ ಸೆನ್ಸ್‌ಗಾಗಿ ವ್ಯಾಪಕ ಖಂಡನೆ ಎದುರಿಸುತ್ತಿದ್ದಾಳೆ.
ಹೀಗೆ ಮೆಟ್ರೋದಲ್ಲಿ ಅರೆ ಬಟ್ಟೆ ತೊಟ್ಟ ಹುಡುಗಿಯ ಹೆಸರು ರಿದಮ್ ಚನಾನಾ. ಈಕೆ ಪಂಜಾಬ್ ನಿವಾಸಿ. ದೆಹಲಿ ಮೆಟ್ರೋ ರೈಡ್ ಮಾಡುವಾಗ ಆಕೆಯ ಹಾಟ್ ಬಟ್ಟೆಗಳನ್ನು ಧರಿಸಿರುವ ಹಲವಾರು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಬಾರಿ ವಿಭಿನ್ನವಾದ ಮೆಟ್ರೋ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ. ಆದರೆ ಅದು ಭಾರತದಲ್ಲಿ ಸೆರೆಹಿಡಿದ ವಿಡಿಯೋವಲ್ಲ. ವಿಡಿಯೊ ನ್ಯೂಯಾರ್ಕ್ ನಗರದ ಮೆಟ್ರೋದಲ್ಲಿ ಸೆರೆಹಿಡಿಯಲಾಗಿದೆ.

ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ @princezee ಎಂಬುವವರು ಹಂಚಿಕೊಂಡಿದ್ದಾರೆ. ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈ ವೈರಲ್ ಆಗಿರುವ ವಿಡಿಯೋದಲ್ಲಿ, ನ್ಯೂಯಾರ್ಕ್ ಸಿಟಿ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಮೆಟ್ರೋದಲ್ಲಿ ಸ್ನಾನಾನಾ ಎಂದು ನೀವು ಶಾಕ್ ಆಗಬಹುದು. ಹೌದು.. ಇದು ನಿಜವೇ. ಆ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ಇದನ್ನು ಹಂಚಿಕೊಂಡಾಗಿನಿಂದ ಕ್ಲಿಪ್ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯ ಧೈರ್ಯವನ್ನು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಅನೇಕರು ಅಸಹ್ಯಕರ ಮೂರ್ಖರ ನಡೆ ಎಂದು ಆಕ್ರೋಶಗೊಂಡಿದ್ದಾರೆ. ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದಾರೆ.

ಕೆಳಗಿನ ಕೆಲವು ಪ್ರತಿಕ್ರಿಯೆಗಳನ್ನು ಪರಿಶೀಲಿಸಿ:
ನೆಟ್ಟಿಗರೊಬ್ಬರು, "ಈ ಪೀಳಿಗೆ ಈ ದೃಶ್ಯವನ್ನು ನೋಡಿ ನಿಜವಾಗಿಯೂ ಹತಾಶವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ನೀವು ಎಲ್ಲಿ ಬೇಕಾದರು ಸ್ನಾನ ಮಾಡಿ ಆದರೆ ಇತರರನ್ನು ಒದ್ದೆ ಮಾಡದಂತೆ ಬಹಳ ಜಾಗರೂಕರಾಗಿರ. ಅವರು ಒರಟಾಗಿದ್ದರೆ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬರು,' ಯಾವ ಊರು ಸ್ವಾಮಿ ನಿಂದು' ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ರಿದಮ್ ಚನಾನಾ ಎಂಬ ಹುಡುಗಿ ತನ್ನ ಬಟ್ಟೆಯ ಆಯ್ಕೆಯಿಂದ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದ್ದಳು. ಅವಳು ಸ್ಕರ್ಟ್‌ನೊಂದಿಗೆ DIY ಬ್ರ್ಯಾಲೆಟ್ ಅನ್ನು ಧರಿಸಿದ್ದಳು. ಹುಡುಗಿಯ ವಿಡಿಯೊಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಹುಡುಗಿಯ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಾತನಾಡಿ,"ಮೆಟ್ರೋ ಒಳಗೆ ವಿಡಿಯೋಗ್ರಫಿ ಇಲ್ಲ ಎಂಬ ತಮ್ಮದೇ ಆದ ನಿಯಮವನ್ನು ಡಿಎಂಆರ್‌ಸಿ ಈಗ ಮರೆತಿರುವುದು ವಿಚಿತ್ರವಾಗಿದೆ" ಎಂದು 19 ವರ್ಷದ ಯುವತಿ ಮಾಧ್ಯಮ ಚಾನೆಲ್‌ಗೆ ತಿಳಿಸಿದರು. ನನ್ನ ಉಡುಪಿನಲ್ಲಿ ಅವರಿಗೆ ಸಮಸ್ಯೆಯಿದ್ದರೆ ಅದನ್ನು ಶೂಟ್ ಮಾಡಿದವರಿಂದಲೇ ಸಮಸ್ಯೆಯಾಗಬೇಕು' ಎಂದು ವಿವರಿಸಿದ್ದಳು.
ಹಲವಾರು ತಿಂಗಳಿಂದ ಹೀಗೆಯೇ ಓಡಾಡುತ್ತಿದ್ದೇನೆ ಎಂದು ಚಾನನ ಹೇಳಿದ್ದಳು. "ನನಗೆ ದೆಹಲಿಯ ಪಿಂಕ್ ಲೈನ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ, ಆದರೆ ಬೇರೆ ಯಾವುದೇ ಮಾರ್ಗದಲ್ಲಿ ನನಗೆ ಅಂತಹ ಸಮಸ್ಯೆಗಳಿಲ್ಲ" ಎಂದು ಅವರು ವಿವರಿಸಿದರು.












Click it and Unblock the Notifications