ಆರ್ಥಿಕ ಕುಸಿತದ ಭಯ: 7% ಉದ್ಯೋಗಿಗಳನ್ನು ವಜಾಗೊಳಿಸಲಿವೆ ಅಮೆರಿಕಾದ ಮಾಧ್ಯಮಗಳು
ನ್ಯೂಯಾರ್ಕ್, ಜನವರಿ, 22: ಸಿಎನ್‌ಎನ್‌ನಿಂದ ವಾಷಿಂಗ್ಟನ್ ಪೋಸ್ಟ್‌ವರೆಗೆ ಹಲವು ಅಮೆರಿಕಾದ ಮಾಧ್ಯಮಗಳು ಕಠಿಣ ಸಮಯವನ್ನು ಎದುರಿಸುತ್ತಿವೆ. ಆರ್ಥಿಕ ಕುಸಿತದ ಭಯದ ನಡುವೆ ಈ ಚಳಿಗಾಲದಲ್ಲಿ ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
ವೋಕ್ಸ್ ಮತ್ತು ದಿ ವರ್ಜ್ ವೆಬ್‌ಸೈಟ್‌ಗಳು, ನ್ಯೂಯಾರ್ಕ್ ಮ್ಯಾಗಜೀನ್ ಮತ್ತು ಅದರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮಾಲೀಕ ವೋಕ್ಸ್ ಮೀಡಿಯಾವು ತನ್ನ ಸಂಸ್ಥೆಯ ಶೇಕಡಾ ಏಳರಷ್ಟು ಸಿಬ್ಬಂದಿಯನ್ನು ವಜಾ ಮಾಡುವುದಾಗಿ ಘೋಷಿಸಿದೆ.
ಸಿಎನ್ಎನ್, ಎನ್‌ಬಿಸಿ, ಬುಝ್‌ಫೀಡ್ ಮತ್ತು ಇತರ ಮಾಧ್ಯಮಗಳ ಹಾದಿಯನ್ನೇ ವೋಕ್ಸ್ ಕೂಡ ಹಿಡಿದಿದ್ದು, ಅಮೆರಿಕಾದ ಮಾಧ್ಯಮಗಳಲ್ಲಿ ಆತಂಕ ಶುರುವಾಗಿದೆ.

ತನ್ನ ಸಿಬ್ಬಂದಿಗೆ ನೀಡಿರುವ ಪತ್ರದಲ್ಲಿ, ವೋಕ್ಸ್ ಮೀಡಿಯಾ ಸಿಇಒ ಜಿಮ್ ಬ್ಯಾಂಕಾಫ್ "ನಮ್ಮ ವ್ಯಾಪಾರ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರುವ ಸವಾಲಿನ ಆರ್ಥಿಕ ವಾತಾವರಣದಿಂದಾಗಿ ಸಂಸ್ಥೆಗಳಲ್ಲಿನ ನಮ್ಮ ಸಿಬ್ಬಂದಿಯಲ್ಲಿ ಸುಮಾರು ಏಳು ಪ್ರತಿಶತ ಮಂದಿಯನ್ನು ವಜಾ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ವೋಕ್ಸ್ ಮೀಡಿಯಾ ಒಡೆತನದ ಆಹಾರ ವೆಬ್‌ಸೈಟ್ ಈಟರ್‌ನಲ್ಲಿ ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿರುವ ಪ್ರಶಸ್ತಿ ವಿಜೇತ ಪತ್ರಕರ್ತೆ ಮೇಘನ್ ಮೆಕ್‌ಕಾರನ್ ಶುಕ್ರವಾರ ಟ್ವೀಟ್ ಮಾಡಿದ್ದು, 37 ವಾರಗಳ ಗರ್ಭಿಣಿಯಾಗಿರುವ ತಾನು ಕೂಡ ವಜಾಗೊಂಡವರಲ್ಲಿ ಒಬ್ಬರು ಎಂದಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಇತರ ಸಂಸ್ಥೆಗಳಿಂದ ವಜಾಗೊಂಡ ಹಲವು ಪತ್ರಕರ್ತರು ಹೊಸ ಉದ್ಯೋಗವನ್ನು ಹುಡುಕುತ್ತಿದ್ದು, ಇದರ ನಡುವೆ ವೋಕ್ಸ್ ಕೂಡ ಸಿಬ್ಬಂದಿಯನ್ನು ವಜಾ ಮಾಡುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು, 12,000 ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಶುಕ್ರವಾರ ಘೋಷಿಸಿದ ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ದೊಡ್ಡ ದೊಡ್ಡ ಕಂಪನಿಗಳಂತೆ ಮಾಧ್ಯಮದಲ್ಲಿ ಸಿಬ್ಬಂದಿ ವಜಾ ಮಾಡುವುದು ನಾಟಕೀಯವಲ್ಲ, ಆದರೆ, ಆರ್ಥಿಕ ಕುಸಿತದ ವಾತಾವರಣದ ನಡುವೆ ಜಾಹೀರಾತಿನ ಆದಾಯ ಕುಸಿತದ ಪರಿಣಾಮದಿಂದ ಇಂತಹ ನಿರ್ಧಾರಗಳು ತೆಗೆದುಕೊಳ್ಳುತ್ತಿವೆ ಎಂದು ಕ್ವಿನ್ನಿಪಿಯಾಕ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಕಮ್ಯುನಿಕೇಷನ್ಸ್ ಡೀನ್ ಕ್ರಿಸ್ ರೌಶ್ ಹೇಳಿದ್ದಾರೆ.
ಅಮೆರಿಕಾದ ಮಾಧ್ಯಮಗಳಲ್ಲಿ ಸಿಬ್ಬಂದಿ ಕಡಿತ ಹೊಸದಲ್ಲ. 2008 ಮತ್ತು 2020 ರ ನಡುವೆ 1,14,000 ರಿಂದ 85,000 ಪತ್ರಕರ್ತರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಪ್ಯೂ ರಿಸರ್ಚ್ ಸೆಂಟರ್‌ನ 2021 ರ ಅಧ್ಯಯನ ತಿಳಿಸಿದೆ. ಇದರಿಂದ ಹೆಚ್ಚಿಗೆ ಹೊಡೆತ ತಿಂದಿರುವುದು ಮಾತ್ರ ಸ್ಥಳೀಯ ಮಾಧ್ಯಮಗಳು.
"ಪತ್ರಿಕೋದ್ಯಮವು ದೀರ್ಘಕಾಲದಿಂದ ಒತ್ತಡದಲ್ಲಿದೆ. ಹೀಗಾಗಿ ಹಲವಾರು ಸಂಸ್ಥೆಗಳು ತಮ್ಮ ಸಿಬ್ಬಂಯನ್ನು ಕಡಿಮೆ ಮಾಡಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಡುತ್ತಾರೆ. ಇದು ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡನ್ನೂ ಸಂಕಷ್ಟಕ್ಕೆ ಇಡುಮಾಡುತ್ತದೆ" ಎಂದು ರೈಟರ್ಸ್ ಗಿಲ್ಡ್ ಆಫ್ ಅಮೆರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಾಷಿಂಗ್ಟನ್ ಪೋಸ್ಟ್‌ನಲ್ಲಿ ಇದೇ ರೀತಿಯ ಭಯ ಆರಂಭವಾಗಿದೆ. ಸಿಇಒ ಫ್ರೆಡ್ ರಿಯಾನ್ ಕಳೆದ ತಿಂಗಳು ಹಲವಾರು ಸ್ಥಾನಗಳನ್ನು ಮುಂದಿನ ವಾರಗಳಲ್ಲಿ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು, ವೈಸ್ ಮೀಡಿಯಾ ಸಿಇಒ ನ್ಯಾನ್ಸಿ ಡುಬಕ್ ಶುಕ್ರವಾರ ತನ್ನ ಸಿಬ್ಬಂದಿಗೆ ಕಂಪನಿಯು ಮಾರಾಟಕ್ಕಿದೆ ಎಂದು ಘೋಷಿಸಿ, ಶಾಕ್ ನೀಡಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ, ಅಮೆರಿಕಾ ಮಾಧ್ಯಮಗಳ ಪ್ರಕಾರ, ಸಿಎನ್‌ಎನ್ ಒಟ್ಟು 4,000 ಜನರಲ್ಲಿ ಅಂದಾಜು ನೂರಾರು ಸಿಬ್ಬಂದಿಯನ್ನು ವಜಾಗೊಳಿಸಿದೆ.












Click it and Unblock the Notifications