ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ: ನ್ಯೂಯಾರ್ಕ್‌ನಲ್ಲಿ ಶಾಲೆಗಳಿಗೆ ರಜೆ

|
Google Oneindia Kannada News

ನ್ಯೂಯಾರ್ಕ್ ನಗರದಲ್ಲಿ 2023 ರಿಂದ ದೀಪಾವಳಿಗೆ ಸಾರ್ವಜನಿಕ ಶಾಲಾ ರಜಾ ದಿನ ಎಂದು ಘೋಷಿಸುವುದಾಗಿ ನಗರದ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೇಯರ್ ಎರಿಕ್ ಆಡಮ್ಸ್, "ಈ ದೀರ್ಘಾವಧಿಯ ಹೆಜ್ಜೆಯು ನಗರದಲ್ಲಿ ದೀಪಾವಳಿಯ ಬಗ್ಗೆ ಸಂದೇಶವನ್ನು ಕಳುಹಿಸುತ್ತದೆ. ಹಬ್ಬದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮಕ್ಕಳನ್ನು ಉತ್ತೇಜಿಸುತ್ತದೆ," ಎಂದಿದ್ದಾರೆ.

"ಇದು ಭಾರತೀಯ-ಅಮೆರಿಕನ್ ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು. ಈ ಮನ್ನಣೆಯು ನ್ಯೂಯಾರ್ಕ್ ನಗರದಲ್ಲಿನ ವೈವಿಧ್ಯತೆ ಮತ್ತು ಬಹುತ್ವಕ್ಕೆ ಆಳವಾದ ಅರ್ಥವನ್ನು ನೀಡುತ್ತದೆ ಮತ್ತು ಎಲ್ಲಾ ವರ್ಗದ ಜನರಿಗೆ ಭಾರತೀಯ ನೀತಿ ಮತ್ತು ಪರಂಪರೆಯನ್ನು ಅನುಭವಿಸಲು, ಆಚರಿಸಲು ಮತ್ತು ಆನಂದಿಸಲು ಅನುವು ಮಾಡಿಕೊಡುತ್ತದೆ'' ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರು ಪಿಟಿಐ ತಿಳಿಸಿದ್ದಾರೆ.

ದೀಪಾವಳಿಗೆ ಸಿಹಿಸುದ್ದಿ: ಮುಖಕ್ಕೆ ಮಾಸ್ಕ್ ಹಾಕಿದ್ರೇನು, ಬಿಟ್ರೇನು, ದಂಡ ಕಟ್ಟಬೇಕಾಗಿಲ್ಲ! ದೀಪಾವಳಿಗೆ ಸಿಹಿಸುದ್ದಿ: ಮುಖಕ್ಕೆ ಮಾಸ್ಕ್ ಹಾಕಿದ್ರೇನು, ಬಿಟ್ರೇನು, ದಂಡ ಕಟ್ಟಬೇಕಾಗಿಲ್ಲ!

"ಬೆಳಕಿನ ಹಬ್ಬವಾದ ದೀಪಾವಳಿಯನ್ನು ಆಚರಿಸುವ ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮಗಳ 200,000 ನ್ಯೂಯಾರ್ಕರನ್ನು ಗುರುತಿಸುವ ಸಮಯ ಬಂದಿದೆ" ಎಂದು ಸಿಎನ್‌ಎನ್ ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ವರ್ಷ ಐದು ದಿನಗಳ ದೀಪಾವಳಿ ರಜೆ ಅಕ್ಟೋಬರ್ 24 ರಂದು ಪ್ರಾರಂಭವಾಗುತ್ತದೆ.

ಐದು ದಿನಗಳ ಹಿಂದೂ ಹಬ್ಬ

ಐದು ದಿನಗಳ ಹಿಂದೂ ಹಬ್ಬ

ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಧನ್ತೇರಸ್ ಅನ್ನು ದೀಪಾವಳಿಯ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ. ಇದರ ನಂತರ, ನರಕ ಚತುರ್ದಶಿ, ನಂತರ ದೀಪಾವಳಿ, ಗೋವರ್ಧನ ಪೂಜೆ ಮತ್ತು ಕೊನೆಯದಾಗಿ ಭಯ್​​ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಐದು ದಿನಗಳ ಹಬ್ಬದ ಆಚರಣೆ ಮಾಡಲಾಗುತ್ತದೆ.

ಧನ್​ತೇರಸ್​​ ಹಬ್ಬ

ಧನ್​ತೇರಸ್​​ ಹಬ್ಬ

ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್​ತೇರಸ್​​ ಹಬ್ಬವನ್ನು ಆಚರಿಸಲಾಗುತ್ತದೆ. ಐದು ದಿನಗಳ ದೀರ್ಘ ದೀಪಾವಳಿಯ ಮೊದಲ ದಿನ ಧನ್​ತೇರಸ್​​. ಧಂತೇರಸ್ ದಿನದಂದು ಯಾರು ಚಿನ್ನ, ಬೆಳ್ಳಿ, ಪಾತ್ರೆಗಳು, ಭೂಮಿ ಮತ್ತು ಆಸ್ತಿಯ ಶುಭ ಖರೀದಿಯನ್ನು ಮಾಡುತ್ತಾರೆ, ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ನರಕ ಚತುರ್ದಶಿಯನ್ನು ನರಕ್ ಚೌದಾಸ್, ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಏಕೆಂದರೆ ಇದನ್ನು ದೀಪಾವಳಿಯ ಮೊದಲು ಆಚರಿಸಲಾಗುತ್ತದೆ. ಈ ದಿನದಂದು ಸಾವಿನ ದೇವರು ಯಮರಾಜನನ್ನು ಪೂಜಿಸಲಾಗುತ್ತದೆ.

ಮಹಾಲಕ್ಷ್ಮಿ ಪೂಜೆ

ಮಹಾಲಕ್ಷ್ಮಿ ಪೂಜೆ

ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ಪ್ರದೋಷ ಕಾಲವಿರುವಾಗ ದೀಪಾವಳಿಯಂದು ಮಹಾಲಕ್ಷ್ಮಿಯನ್ನು ಪೂಜಿಸಲಾಗುವುದು. ದೀಪಾವಳಿಯ ಸಂಜೆಯ ಶುಭ ಸಮಯದಲ್ಲಿ ಲಕ್ಷ್ಮಿ , ಗಣೇಶ, ಸರಸ್ವತಿ ಮತ್ತು ಸಂಪತ್ತಿನ ದೇವರು ಕುಬೇರರನ್ನು ಪೂಜಿಸಲಾಗುತ್ತದೆ

ಬಲಿ ಪಾಡ್ಯಮಿ

ಬಲಿ ಪಾಡ್ಯಮಿ

ಬಲಿ ಪಾಡ್ಯಮಿಯ ದಿನದಂದು ಗೋವರ್ಧನ ಪೂಜೆಯ ದಿನವಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಗೋವರ್ಧನ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನದಂದು ಆಚರಿಸಲಾಗುತ್ತದೆ. ಇಂದು ಶ್ರೀಕೃಷ್ಣನೊಂದಿಗೆ ಗೋವರ್ಧನ ಪರ್ವತ ಮತ್ತು ಗೋವುಗಳನ್ನು ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.

ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆ ಇರುವ ಈ ಭಾಯಿ ದೂಜ್ ಅನ್ನು ದೀಪಾವಳಿ ಹಬ್ಬದ ಕೊನೆಯ ದಿನ ಆಚರಿಸಲಾಗುವುದು. ಸಹೋದರತೆಯ ಸಂಕೇತವಾಗಿರುವ ಈ ಭಾಯಿ ದೂಜ್ ಅನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಆಚರಿಸಲಾಗುತ್ತದೆ.

English summary
Deepavali will be a public school holiday in New York City from 2023, announced the city’s mayor, Eric Adams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X