Isha Koppikar: ನಾನು ಮಂಗಳೂರಿನವಳು, ದೀಪಿಕಾ ಪಡುಕೋಣೆ ಮತ್ತು ನಾನು ಒಂದೇ: ಬಾಲಿವುಡ್ ನಟಿ Video Viral

ಬಾಲಿವುಡ್‌ನ ಜನಪ್ರಿಯ ನಟಿ ಇಶಾ ಕೊಪ್ಪಿಕರ್ ಅವರು ಇತ್ತೀಚೆಗೆ ಕಾಮಿಡಿಯನ್ ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಪ್ರಸಿದ್ಧ 'ಎಲ್‌ಒಎಲ್ ಪಾಡ್‌ಕಾಸ್ಟ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ತಮ್ಮ ಮೂಲದ ಕುರಿತು ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಇಶಾ ಕೊಪ್ಪಿಕರ್ ಅವರ ಈ ವಿಡಿಯೋ ತುಣುಕು ಭಾರಿ ವೈರಲ್ ಆಗುತ್ತಿದ್ದು, ಕನ್ನಡಿಗರ ಗಮನ ಸೆಳೆಯುತ್ತಿದೆ.

ಪಾಡ್‌ಕಾಸ್ಟ್‌ನಲ್ಲಿ ಭಾರ್ತಿ ಸಿಂಗ್ ಅವರು ಇಶಾ ಅವರಿಗೆ "ನೀವು ವೆಜಿಟೇರಿಯನ್ (ಸಸ್ಯಾಹಾರಿ) ನಾ?" ಎಂದು ಪ್ರಶ್ನಿಸಿದಾಗ, ಇಶಾ ಅವರು ನಗುತ್ತಾ "ಇಲ್ಲವೇ ಇಲ್ಲ, ನಾನು ಮಂಗಳೂರಿನವಳು, ನಾವು ಕರಾವಳಿ ಭಾಗದವರು. ಹಾಗಾಗಿ ನಮ್ಮ ಆಹಾರದಲ್ಲಿ ತೆಂಗಿನಕಾಯಿ, ಅಕ್ಕಿ ಮತ್ತು ಮೀನು ಕಡ್ಡಾಯವಾಗಿ ಇರುತ್ತದೆ" ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿ ಆಶ್ಚರ್ಯಚಕಿತರಾದ ಹರ್ಷ್ ಲಿಂಬಾಚಿಯಾ, "ನೀವು ಮಂಗಳೂರಿನವರಾ?" ಎಂದು ಮರುಪ್ರಶ್ನೆ ಮಾಡಿದ್ದಾರೆ.

Isha Koppikar

ಇದಕ್ಕೆ ಹೆಮ್ಮೆಯಿಂದ ಉತ್ತರಿಸಿದ ಇಶಾ, "ಹೌದು, ನಾನು ಮತ್ತು ನಟಿ ದೀಪಿಕಾ ಪಡುಕೋಣೆ ಇಬ್ಬರೂ ಒಂದೇ ಕಡೆಯವರು" ಎಂದು ಹೇಳುವ ಮೂಲಕ ತಮ್ಮಿಬ್ಬರ ಮಂಗಳೂರಿನ ಕನೆಕ್ಷನ್ ಅನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಕೂಡ ಕರಾವಳಿ ಮೂಲದವರಾಗಿದ್ದು, ಕೊಂಕಣಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೇ ವೇಳೆ ಹರ್ಷ್ ಅವರು ಇಶಾ ಅವರ ಹೆಸರಿನ ಹಿಂದಿರುವ 'ಕೊಪ್ಪಿಕರ್' ಎಂಬ ಸರ್‌ನೇಮ್‌ ನೋಡಿ, ಅವರು ಮಹಾರಾಷ್ಟ್ರದವರು ಅಥವಾ ಮರಾಠಿ ಭಾಷಿಗರು ಎಂದು ಭಾವಿಸಿದ್ದಾಗಿ ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಇಶಾ ಕೊಪ್ಪಿಕರ್, "ಹೆಸರಿನ ಕೊನೆಯಲ್ಲಿ 'ಕರ್' ಎಂದ ತಕ್ಷಣ ಅವರೆಲ್ಲರೂ ಮರಾಠಿಗರಲ್ಲ. ಕೊಂಕಣಿ ಸಮುದಾಯದಲ್ಲೂ ಮಾತೋನ್ಕರ್, ಚಂದಾವರ್ಕರ್ ಮುಂತಾದ ಸರ್‌ನೇಮ್‌ ಇವೆ. ಇವು ಕೊಂಕಣಿ ಹೆಸರುಗಳಾಗಿವೆ" ಎಂದು ತಿಳಿಸಿದರು.

ಆದಾಗ್ಯೂ, ತಾವು ಮುಂಬೈನಲ್ಲಿ ಬೆಳೆದ ಕಾರಣ ಮರಾಠಿ ಭಾಷೆಯನ್ನು ಅತ್ಯಂತ ಸರಾಗವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಬಲ್ಲೆ ಎಂದು ಇಶಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಶಾ ಕೊಪ್ಪಿಕರ್ ಅವರ ಈ ಮಾತುಗಳು ಕರಾವಳಿ ಕರ್ನಾಟಕದ ಜನರಲ್ಲಿ ಹಾಗೂ ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಬಾಲಿವುಡ್‌ನಲ್ಲಿ ಯಶಸ್ಸು ಗಳಿಸಿದರೂ ತಮ್ಮ ಮೂಲವನ್ನು ನೆನೆದ ನಟಿಯ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಲಾಗುತ್ತಿದ್ದು, ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+