ತಪ್ಪು ಮಾಡಿದಾಗ ಕೂಗಾಡುವುದರಿಂದ ಮಕ್ಕಳು ಸರಿದಾರಿಗೆ ಬರುವರೇ? ಮಾತು ಮಗುವಿನ ಮನಮುಟ್ಟುವಂತೆ ಮಾಡುವುದು ಹೇಗೆ?

ಮಕ್ಕಳಿದ್ದ ಮನೆ ಚಂದ. ಮಕ್ಕಳ ಆಟ, ಮಾತು, ನೋಟ ಎಲ್ಲವೂ ಅಂದ. ಮಕ್ಕಳಿದ್ದಲ್ಲಿ ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಸಾಕುವುದು ಕೂಡಾ ಪೋಷಕರಿಗೆ ಸವಾಲಾಗಿ ಪರಿಣಮಿಸಿದೆ.ಎದುರು ಮಾತನಾಡುವುದು, ಸಣ್ಣ ಸಣ್ಣ ವಿಚಾರಗಳಿಗೂ ಸಿಟ್ಟು ಸಿಡುಕು, ಕೂಗಾಟ ಕಿರುಚಾಟ ಪ್ರತೀ ಮಕ್ಕಳ ಸಾಮಾನ್ಯ ನಡವಳಿಕೆಯಾಗಿ ಬಿಟ್ಟಿದೆ. ಈ ಸಂದರ್ಭದಲ್ಲಿ ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ತಿಳಿಸುವ ಭರಾಟೆಯಲ್ಲಿ ಹೆತ್ತವರು ಕೂಡಾ ಕಿರುಚಾಡಿ ಬಿಡುತ್ತಾರೆ.

ಮಕ್ಕಳು ತಪ್ಪು ಮಾಡಿದಾಗ ಸಾಂದರ್ಭಿಕವಾಗಿ ಆಕ್ರೋಶಗೊಳ್ಳುವುದು ಸಾಮಾನ್ಯ. ಆದರೆ ಮಕ್ಕಳ ಮೇಲೆ ಪದೇ ಪದೇ ಕಿರುಚಾಡುವುದು, ಕೂಗಾಡುವುದು, ಬೈಯ್ಯುವುದು ಅವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಅಂಶ ಬಹುತೇಕ ಮಂದಿಗೆ ತಿಳಿದೇ ಇರುವುದಿಲ್ಲ. ಅಥವಾ ಅರಿತುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ.

Parenting Tips

ಮುಂಬೈನ ನಾರಾಯಣ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಸಲಹೆಗಾರರಾದ ಡಾ. ಶೋರೋಖ್ ಮೋಟ್ವಾನಿ ಪ್ರಕಾರ, ಮಕ್ಕಳನ್ನು ನಿರಂತರವಾಗಿ ಬೈಯುವುದು ಅಥವಾ ಜೋರಾಗಿ ಮಾತನಾಡುವುದರಿಂದ ಮಕ್ಕಳ ಮನಸ್ಸಿನಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ.ಇದು ಅವರಲ್ಲಿ ಭಯ, ಅಸುರಕ್ಷಿತ ಭಾವ ಅಥವಾ ಒಂಟಿತನ ಅನುಭವಿಸುವಂತೆ ಮಾಡುತ್ತದೆ. ದೀರ್ಘಕಾಲದವರೆಗೆ ಇದೇ ರೀತಿ ಮುಂದುವರಿದರೆ, ಅದು ಯೋಚನಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು.

NEET-UG ಗೊಂದಲಕ್ಕೆ ವಿದ್ಯಾರ್ಥಿ ಬಲಿ: ಕಣ್ಣೀರಿಟ್ಟ ಖಾನ್ ಸರ್; ಈ ಕಠಿಣ ಸ್ಥಿತಿಯಲ್ಲಿ ಪೋಷಕರು ಮಾಡಬೇಕಾದ 3 ಮುಖ್ಯ ಕರ್ತವ್ಯಗಳು
NEET-UG ಗೊಂದಲಕ್ಕೆ ವಿದ್ಯಾರ್ಥಿ ಬಲಿ: ಕಣ್ಣೀರಿಟ್ಟ ಖಾನ್ ಸರ್; ಈ ಕಠಿಣ ಸ್ಥಿತಿಯಲ್ಲಿ ಪೋಷಕರು ಮಾಡಬೇಕಾದ 3 ಮುಖ್ಯ ಕರ್ತವ್ಯಗಳು

ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮ:

ಬಾಲ್ಯದಲ್ಲಿ ಮಕ್ಕಳ ಮೆದುಳು ವೇಗವಾಗಿ ಬೆಳೆಯುತ್ತದೆ. ಪದೇ ಪದೇ ಕಿರುಚುವುದು ಅಥವಾ ಕಠಿಣ ಪದಗಳನ್ನು ಅವರ ಮೇಲೆ ಬಳಸುವುದರಿಂದ ಅದು ಅವರ ಮೆದುಳಿನ ಭಾಗಗಳಾದ ನೆನಪು, ಕಲಿಕೆ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತವೆ. ಪದೇ ಪದೇ ಯಾವ ಮಗುವಿನ ಮೇಲೆ ಹೆತ್ತವರು ಕಿರುಚಾಡುತ್ತಿರುತ್ತಾರೆಯೋ ಅವರು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಾರೆಯಂತೆ.

1. ಅಧ್ಯಯನ ಅಥವಾ ಕೆಲಸದ ಮೇಲೆ ಗಮನಹರಿಸುವಲ್ಲಿ ತೊಂದರೆ
2. ಕಡಿಮೆ ಆತ್ಮವಿಶ್ವಾಸ
3. ಸಣ್ಣ ವಿಷಯಗಳಲ್ಲಿಯೂ ಭಯ ಅಥವಾ ಆತಂಕ
4. ಬೇಗ ಕೋಪಗೊಳ್ಳುವುದು
5. ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದಿರುವುದು

ಬಾಲ್ಯದಲ್ಲಿ ನಿರಂತರವಾಗಿ ಬೈಗುಳ ಕೇಳುವ ಮಕ್ಕಳು ಬೆಳೆದಂತೆ ಅವರಲ್ಲಿ ಆತಂಕ ಮತ್ತು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಬಹುದು ಎಂದು ಕೆಲವು ಸಂಶೋಧನೆಗಳು ತೋರಿಸಿವೆ.

ಸ್ಕಿನ್‌ ಕೇರ್‌ ಎಂದು ನೀವು ಮಾಡುವ ಈ ತಪ್ಪು ಮಗುವಿನ ತ್ಚಚೆಯನ್ನೇ ಹಾಳು ಮಾಡಿಬಿಡಬಹುದು ಎಚ್ಚರ!
ಸ್ಕಿನ್‌ ಕೇರ್‌ ಎಂದು ನೀವು ಮಾಡುವ ಈ ತಪ್ಪು ಮಗುವಿನ ತ್ಚಚೆಯನ್ನೇ ಹಾಳು ಮಾಡಿಬಿಡಬಹುದು ಎಚ್ಚರ!

ಪದೇ ಪದೇ ಮಗುವಿನ ಮೇಲೆ ಕಿರುಚುವುದರಿಂದ ತಾವು ಕೆಟ್ಟವರು ಅಥವಾ ನಿಷ್ಪ್ರಯೋಜಕ ಎನ್ನುವ ಭಾವ ಅವರ ಮನಸ್ಸಿನಲ್ಲಿ ಬೆಳೆಯುತ್ತದೆ. ಇದು ನಿಧಾನವಾಗಿ ಅವರು ಇತರರಿಂದ ದೂರವಾಗುವಂತೆ ಮಾಡಬಹುದು. ಅಥವಾ ಸಣ್ಣ ಸಣ್ಣ ವಿಷಯಗಳಿಗೂ ಕೋಪಗೊಳ್ಳುವಂತೆ ಮಾಡಬಹುದು.

ಮಕ್ಕಳು ಮನೆಯಲ್ಲಿ ಏನು ನೋಡುತ್ತಾರೆಯೋ ಏನನ್ನು ಕೇಳುತ್ತಾರೆಯೋ ಅದನ್ನೇ ಕಲಿಯುತ್ತಾರೆ ಎನ್ನುವುದು ವೈದ್ಯರ ಅಭಿಪ್ರಾಯ. ಮನೆಯ ವಾತಾವರಣವು ನಿರಂತರವಾಗಿ ಕೋಪ ಮತ್ತು ಭಯದಿಂದ ತುಂಬಿದ್ದರೆ, ಮಕ್ಕಳು ತಮ್ಮ ಭಾವನೆಗಳನ್ನು ಅದೇ ರೀತಿಯಲ್ಲಿ ವ್ಯಕ್ತಪಡಿಸಲು ಕಲಿಯಬಹುದು.

ಮಕ್ಕಳು ಹೆತ್ತವರ ಮಾತನ್ನು ಕೇಳುವಂತೆ ಮಾಡುವ ಸರಿಯಾದ ಮಾರ್ಗ:

ಮಕ್ಕಳನ್ನು ಮಾತಿಗೂ ಮಾತಿಗೂ ಗದರುವ ಬದಲು, ಶಾಂತ ಮತ್ತು ಗೌರವಯುತ ರೀತಿಯಲ್ಲಿ ವಿಷಯಗಳನ್ನು ಅವರಿಗೆ ವಿವರಿಸುವುದು ಹೆಚ್ಚು ಪರಿಣಾಮಕಾರಿ. ಪೋಷಕರು ತಮ್ಮ ಮಕ್ಕಳಿಗೆ ಕೆಲವು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು. ಹೆತ್ತವರು ಕೂಡಾ ಆ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕು.

ಪೋಷಕರಿಗೆ ಸಹಾಯ ಮಾಡಬಹುದಾದ ಸರಳ ಹಂತಗಳು:

1.ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಡಿ.
2.ಮಕ್ಕಳೊಂದಿಗೆ ಶಾಂತ ಧ್ವನಿಯಲ್ಲಿ ಮಾತನಾಡಿ
3.ಅವರು ಏನು ಹೇಳುತ್ತಾರೆ ಎನ್ನುವುದನ್ನು ಗಮನವಿಟ್ಟು ಆಲಿಸಿ.
4. ಮಕ್ಕಳ ಒಳ್ಳೆಯ ನಡವಳಿಕೆಯನ್ನು ಶ್ಲಾಘಿಸಿ
5. ಮಕ್ಕಳ ಮುಂದೆ ನಿಂದನೀಯ ಪದಗಳನ್ನು ಬಳಸಬೇಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+