ನೀತಾ ಅಂಬಾನಿಗೆ ನ್ಯೂಯಾರ್ಕ್ ನ ಮ್ಯೂಸಿಯಂನಿಂದ ಗೌರವ!

Posted By:
Subscribe to Oneindia Kannada

ನ್ಯೂಯಾರ್ಕ್, ಜನವರಿ 26: ನೀತಾ ಅಂಬಾನಿ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ರಿಲಯನ್ಸ್ ಫೌಂಡೇಶನ್, ಅವರನ್ನು ಪ್ರತಿಷ್ಠಿತ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (ದಿ ಮೆಟ್) ನ್ಯೂಯಾರ್ಕ್ ನನಲ್ಲಿ ಗೌರವಿಸಿದೆ.

ಶಿಕ್ಷಣ, ಕ್ರೀಡೆ, ಆರೋಗ್ಯಸೇವೆ, ಗ್ರಾಮೀಣ ರೂಪಾಂತರ, ನಗರ ನವೀಕರಣ, ವಿಪತ್ತು ನಿರ್ವಹಣೆ, ಮಹಿಳಾ ಸಬಲೀಕರಣ ಮತ್ತು ಕಲೆಗೆ ಉತ್ತೇಜನದ ಕ್ಷೇತ್ರಗಳಲ್ಲಿ ನೀತಾ ಅಂಬಾನಿಯವರ ವಿಸ್ತಾರವಾದ ಪರೋಪಕಾರಿ ಕಾರ್ಯಗಳನ್ನು ಗುರುತಿಸಿ ಈ ವಿಶೇಷ ಗೌರವ ನೀಡಲಾಗಿದೆ. ಈ ವಿಶೇಷ ಗೌರವವನ್ನು ಸ್ವೀಕರಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಇವರು ಎಂಬುದು ಹೆಗ್ಗಳಿಕೆಯಾಗಿದೆ.

 Nita Ambani honoured The Metropolitan Museum of Art New York

ಶ್ರೀಮತಿ ಅಂಬಾನಿಯವರ ನೇತೃತ್ವದ ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ವ್ಯಾಪಕ ಹಾಗೂ ಬೃಹತ್ ಪ್ರಮಾಣದ ಕಾರ್ಯದಿಂದ ದಿ ಮೆಟ್ ಪ್ರಭಾವಿತಗೊಂಡಿದೆ. ರಿಲಯನ್ಸ್ ಫೌಂಡೇಶನ್ 10 ಮಿಲಿಯನ್ ಭಾರತೀಯರಿಗೆ ಅನುಕೂಲ ಕಲ್ಪಿಸಿದೆ, 10,500ಕ್ಕೂ ಹೆಚ್ಚು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರನ್ನು ತಲುಪಿದೆ.

ಈ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಅಂಬಾನಿಯವರು, 'ರಿಲಯನ್ಸ್ ಫೌಂಡೇಶನ್‍ನಲ್ಲಿನ ನಮ್ಮ ಕಾರ್ಯಕ್ಕೆ ನೀಡಲಾದ ಈ ಗೌರವ ನನಗೆ ಖುಷಿ ತಂದಿದೆ ಮತ್ತು ವಿನೀತಳಾಗಿದ್ದೇನೆ. ಇದು ಶಿಕ್ಷಣ, ಕ್ರೀಡೆ, ಆರೋಗ್ಯ ಮತ್ತು ಗ್ರಾಮೀಣ ರೂಪಾಂತರದ ಮೂಲಕ ಲಕ್ಷಾಂತರ ಜನರ ಮುಖದಲ್ಲಿ ನಗು ಮೂಡಿಸುವ ನಮ್ಮ ಪ್ರಯತ್ನಕ್ಕೆ ಸಂದ ನಿಜವಾದ ಪ್ರತಿಫಲವಾಗಿದೆ.

 Nita Ambani honoured The Metropolitan Museum of Art New York

'ದಿ ಮೆಟ್ ನಂತಹ ಪ್ರತಿಷ್ಠಿತ ಜಾಗತಿಕ ಸಂಸ್ಥೆಯಿಂದ ದೊರಕುತ್ತಿರುವ ಈ ಗೌರವವು ಸುಸ್ಥಿರ ಅಭಿವೃದ್ಧಿ ಹಾಗೂ ಸಾಮಾಜಿಕ ಸಬಲೀಕರಣದತ್ತ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಲಿದೆ ಮತ್ತು ರಿಲಯನ್ಸ್ ಫೌಂಡೇಶನ್‍ನಲ್ಲಿನ ಪ್ರತಿಯೊಬ್ಬರಿಗೂ ಮುಂದಿನ ಪೀಳಿಗೆಗಾಗಿ ಉತ್ತಮ ಕಾರ್ಯ ಮಾಡಲು ಸ್ಫೂರ್ತಿ ನೀಡಲಿದೆ'' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mrs. Nita Ambani, Founder and Chairperson, Reliance Foundation, was honoured by the prestigious Metropolitan Museum of Art (The Met) in New York. This special honour recognises Mrs. Ambani’s expansive philanthropic work in the areas of Education, Sports, Healthcare, Rural Transformation, Urban Renewal, Disaster Response, Women Empowerment and Promotion of the Arts. She is the first South Asian to receive this distinguished accolade.
Please Wait while comments are loading...