ಹ್ಯೂಸ್ಟನ್ ನಲ್ಲಿ ಭಾರತೀಯ ಮೂಲದ ವಕೀಲನಿಂದ ಶೂಟೌಟ್: 9 ಮಂದಿಗೆ ಗಾಯ

Posted By:
Subscribe to Oneindia Kannada

ಹ್ಯೂಸ್ಟನ್, ಸೆಪ್ಟೆಂಬರ್ 27: ಭಾರತೀಯ ಮೂಲದ ವಕೀಲನೊಬ್ಬ ಸೋಮವಾರ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆಸಿದ ಶೂಟೌಟ್ ನಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಆ ನಂತರ ಪೊಲೀಸರು ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಥಾನ್ ದೇಸಾಯಿ, ಸೇನಾ ದಿರಿಸಿನಲ್ಲಿ ನಾಜಿ ಚಿಹ್ನೆಗಳನ್ನು ಧರಿಸಿದ್ದ. ಸುಮಾರು ಇಪ್ಪತ್ತು ನಿಮಿಷ ರಸ್ತೆ ಮೇಲೆ ಹೋಗುತ್ತಿದ್ದ ಕಾರುಗಳ ಮೇಲೆ ಗುಂಡು ಹಾರಿಸಿದ್ದಾನೆ. ಅತ ಯಾಕೆ ಜನರ ಮೇಲೆ ಈ ರೀತಿ ದಾಳಿ ಮಾಡಿದ ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.[ಮ್ಯೂನಿಕ್ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ, 3 ಸಾವು]

Indian origin lawyer killed 9 people in shootout

ಗಾಯಾಳುಗಳ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಐವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವಕೀಲನ ತಂದೆ ಪ್ರಕಾಶ್ ದೇಸಾಯಿ ಮಾತನಾಡಿ, ಮಗನ ವಕೀಲಿಕೆ ವೃತ್ತಿ ಚೆನ್ನಾಗಿ ನಡೆಯುತ್ತಿರಲಿಲ್ಲ. ಆ ಬಗ್ಗೆ ಅವನು ಚಿಂತೆ ಮಾಡ್ತಿದ್ದ ಎಂದು ಹೇಳಿದ್ದಾರೆ.

46 ವರ್ಷದ ನಥಾನ್ ದೇಸಾಯಿ ಬಳಿ ಹಲವು ಗನ್ ಗಳಿದ್ದವು. ಅತನ ಕಕ್ಷಿದಾರರಿಂದ ರಕ್ಷಿಸಿಕೊಳ್ಳುವುದಕ್ಕೆ ಅವುಗಳನ್ನು ಇಟ್ಟುಕೊಂಡಿದ್ದ. ಅವನ ಕಕ್ಷಿದಾರರ ಪೈಕಿ ಕೆಲವರು ವಿಚಿತ್ರ ಜನರಿದ್ದರು, ಕ್ರಿಮಿನಲ್ ಮನಸ್ಥಿತಿಯವರಿದ್ದರು ಎಂದು ನಿವೃತ್ತ ಜಿಯಾಲಜಿಸ್ಟ್ ಪ್ರಕಾಶ್ ದೇಸಾಯಿ ತಿಳಿಸಿದ್ದಾರೆ.[ಡಲ್ಲಾಸ್ ಪ್ರತಿಭಟನೆ ವೇಳೆ ಗುಂಡಿನ ದಾಳಿ: 5 ಅಧಿಕಾರಿಗಳು ಬಲಿ]

ನಥಾನ್ ದೇಸಾಯಿಯ ಪೋರ್ಶೆ ಕಾರಿನಲ್ಲಿ ಥಾಮ್ಸನ್ ಸಬ್ ಮೆಷಿನ್ ಗನ್, ಪಾಯಿಂಟ್ 45 ಹ್ಯಾಂಡ್ ಗನ್ ಪತ್ತೆಯಾಗಿದೆ. ಅದನ್ನು ದೇಸಾಯಿ ಪೊಲೀಸರ ವಿರುದ್ಧವೇ ಬಳಸಿದ್ದ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದಲ್ಲಿ ಶೂಟೌಟ್ ಮಾಡುತ್ತಿರುವ ಎರಡನೇ ಪ್ರಕರಣವಿದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian origin lawyer, Nathan desai killed nine people on Monday in US Houston city. He shooted towards cars which were passing on roads. Police killed him.
Please Wait while comments are loading...