Get Updates
Get notified of breaking news, exclusive insights, and must-see stories!

2022 ರಲ್ಲಿ ಎಚ್‌1ಬಿ ವೀಸಾ ಪಡೆದುಕೊಂಡವರಲ್ಲಿ ಭಾರತೀಯರಿಗೆ ಆಗ್ರಸ್ಥಾನ

ಮುಂಬೈ, ಜೂನ್. 05: 2022 ರ ಹಣಕಾಸು ವರ್ಷದಲ್ಲಿ (ಸೆಪ್ಟೆಂಬರ್ 30, 2022 ಕ್ಕೆ) ಯುನೈಟೆಡ್ ಸ್ಟೇಟ್ಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) ಅನುಮೋದಿಸಿದ ಒಟ್ಟು 4.41 ಲಕ್ಷ ಎಚ್‌1ಬಿ ಅರ್ಜಿಗಳಲ್ಲಿ 3.20 ಲಕ್ಷ ಅಥವಾ 72.6% ರಷ್ಟು ಅರ್ಜಿಗಳು ಭಾರತೀಯರದ್ದಾಗಿವೆ.

ಎಚ್‌1ಬಿ ವೀಸಾ ಪಡೆದುಕೊಂಡ ಮೊದಲ ಸ್ಥಾನದಲ್ಲಿ ಭಾರತವಿದ್ದರೇ, ಎರಡನೇ ದೇಶವೆಂದರೆ ಚೀನಾ, ತುಲನಾತ್ಮಕವಾಗಿ 55,038 ಅಂದರೆ ಒಟ್ಟು 12.5% ವೀಸಾಗಳನ್ನು ಪಡೆದಿದೆ. ಇದರ ಜೊತೆಗೆ ಒಟ್ಟು 4,235 ಯಶಸ್ವಿ ಅಭ್ಯರ್ಥಿಗಳೊಂದಿಗೆ (1%) ಕೆನಡಾ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟು 4.41 ಲಕ್ಷದ ಈ ಅಂಕಿ ಅಂಶವು ಆರಂಭಿಕ ಉದ್ಯೋಗಕ್ಕಾಗಿ ಮತ್ತು ಉದ್ಯೋಗ ಮುಮದುವರೆಸಲು H1B ವೀಸಾಗಳನ್ನು ಪಡೆದಿರುವುದನ್ನು ಸೂಚಿಸಿದೆ.

Total 3.20 lakh Indians H 1B applications were approved by United States

ಈ H-1B ವೀಸಾಗಳನ್ನು ಗರಿಷ್ಠ ಆರು ವರ್ಷಗಳವರೆಗೆ ಅಮೆರಿಕಾದಲ್ಲಿರಲು ಅನುಮತಿ ನೀಡುತ್ತದೆ. ಫಲಾನುಭವಿಯು ಅಂದರೆ ಅಮೆರಿಕನ್ ಕಂಪನಿಯಿಂದ ವೀಸಾವನ್ನು ಪಡೆದ ವ್ಯಕ್ತಿ ಗ್ರೀನ್ ಕಾರ್ಡ್‌ಗಾಗಿ ಟ್ರ್ಯಾಕ್‌ನಲ್ಲಿದ್ದರೆ, ನಿಯತಕಾಲಿಕ ವಿಸ್ತರಣೆಗಳನ್ನು ಅನುಮತಿಸಲಾಗುತ್ತದೆ. ವರದಿಯ ಪ್ರಕಾರ 2022 ರ ಆರ್ಥಿಕ ವರ್ಷದಲ್ಲಿ ಅನುಮೋದಿಸಲಾದ H-1B ಅಪ್ಲಿಕೇಶನ್‌ಗಳ ಸಂಖ್ಯೆಯು 8.6% ರಷ್ಟು ಹೆಚ್ಚಾಗಿದೆ.

ಹಿಂದಿನ ಆರ್ಥಿಕ ವರ್ಷದಲ್ಲಿ, 3.01 ಲಕ್ಷ ಭಾರತೀಯರು ಯಶಸ್ವಿಯಾಗಿ H-1B ವೀಸಾಗಳನ್ನು ಪಡೆದಿದ್ದರು. ಇದು 2021 ರಲ್ಲಿ ಅನುಮೋದಿಸಲಾದ ಒಟ್ಟು ವೀಸಾಗಳ 74.1% ಆಗಿತ್ತು. ಇದಕ್ಕೆ ವಿರುದ್ಧವಾಗಿ, 50,328 ಚೀನಾ ದೇಶದವರು ಒಟ್ಟು ಅನುಮೋದನೆಗಳಲ್ಲಿ 12.4% ರಷ್ಟು H-1B ವೀಸಾಗಳನ್ನು ಪಡೆದಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವರ್ಷಗಳಲ್ಲಿ, USCIS ನೀಡಿದ H-1B ವೀಸಾಗಳಲ್ಲಿ 70% ಕ್ಕಿಂತ ಹೆಚ್ಚು ಭಾರತೀಯರ ಪಾಲಾಗಿದೆ.

ಎಚ್1ಬಿ ವೀಸಾವು ಜನಪ್ರಿಯ ಕೆಲಸದ ವೀಸಾವಾಗಿದ್ದು, ವಿಶೇಷವಾಗಿ ಭಾರತೀಯ ತಂತ್ರಜ್ಞಾನ ವೃತ್ತಿಪರರಲ್ಲಿ ಹೆಚ್ಚು ಬೇಡಿಕಯಿದೆ. ಕಂಪ್ಯೂಟರ್-ಸಂಬಂಧಿತ ಉದ್ಯೋಗಗಳಲ್ಲಿನ ಕೆಲಸಗಾರರಿಗೆ ಆರ್ಥಿಕ ವರ್ಷ 2022 ರಲ್ಲಿ ಅನುಮೋದಿಸಲಾದ ಎಚ್1ಬಿ ಅರ್ಜಿಗಳ ಒಟ್ಟು ಸಂಖ್ಯೆಯು 2.91 ಲಕ್ಷ ಅಥವಾ ಒಟ್ಟು ಅನುಮೋದಿತ ಅರ್ಜಿಗಳ 66% ಆಗಿದೆ.

Total 3.20 lakh Indians H 1B applications were approved by United States

'ಆರಂಭಿಕ ಉದ್ಯೋಗ'ಕ್ಕಾಗಿ ಎಚ್1ಬಿ ವೀಸಾ ಅರ್ಜಿಗಳನ್ನು ಅಮೆರಿಕಾದಲ್ಲಿ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಸಲ್ಲಿಸಲಾಗುತ್ತದೆ. ಆರಂಭಿಕ ಉದ್ಯೋಗಕ್ಕಾಗಿ ಸುಮಾರು 1.32 ಲಕ್ಷ ಅರ್ಜಿಗಳನ್ನು 2022 ರ ಆರ್ಥಿಕ ವರ್ಷದಲ್ಲಿ ಅನುಮೋದಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 1.23 ಲಕ್ಷ ಅರ್ಜಿಗಳಿಗೆ ಅನುಮೋದನೆ ಸಿಕ್ಕಿತ್ತು. 2022 ರ ಕೊನೆಯಲ್ಲಿ ಮತ್ತು 2023 ರ ಮೊದಲ ಕೆಲವು ತಿಂಗಳುಗಳಲ್ಲಿ ಅಮೆರಿಕಾದ ಹಲವು ಕಂಪನಿಗಳು ತಮ್ಮ ಕೆಲಸಗಾರರನ್ನು ವಜಾ ಮಾಡಿವೆ.

2022 ರ ಆರ್ಥಿಕ ವರ್ಷದಲ್ಲಿ, ಸುಮಾರು 77,673 ಭಾರತ ಮೂಲದ ವ್ಯಕ್ತಿಗಳು ಹೊಸ ಉದ್ಯೋಗಕ್ಕಾಗಿ ಎಚ್1ಬಿ ವೀಸಾವನ್ನು ಪಡೆದುಕೊಂಡಿದ್ದಾರೆ (ಇದು ಒಟ್ಟು 58.7% ಆಗಿದೆ). ಚೀನಾದಲ್ಲಿ ಜನಿಸಿದವರ ಅಂಕಿಅಂಶವು 18,911 (ಅಥವಾ ಒಟ್ಟು 14,3%) ಇದೆ. 2021 ರ ಆರ್ಥಿಕ ವರ್ಷದಲ್ಲಿ, ಆರಂಭಿಕ ಉದ್ಯೋಗಕ್ಕಾಗಿ ಭಾರತೀಯರು 75,858 (61.5%) ವೀಸಾಗಳನ್ನು ಪಡೆದಿದ್ದಾರೆ. ಆಗ 15.2% ರಷ್ಟು ವೀಸಾಗಳನ್ನು ಚೀನಿಯರು ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+