ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ

ವಾಷಿಂಗ್ಟನ್, ಸೆಪ್ಟೆಂಬರ್ 23: ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆಯುತ್ತಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕನ್ನಡ ಸೇರಿ ಹತ್ತು ಭಾಷೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

ನಿನ್ನೆ ಸಮಾರಂಭದಲ್ಲಿ ನೆರೆದಿದ್ದ ಬೃಹತ್ ಸಂಖ್ಯೆಯ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, 'ನನ್ನ ಹೌಡಿ ಮೋದಿ ಎಂದು ಕೇಳಲಾಗುತ್ತಿದೆ, ಇದಕ್ಕೆ ಉತ್ತರ ಭಾರತದಲ್ಲಿ ಎಲ್ಲ ಚೆನ್ನಾಗಿದೆ'' ಎಂದು ಹೇಳಿದರು.

ಹೌಡಿ ಮೋದಿ ಎಂಬುದು 'ಹೌ ಡು ಯು ಡು ಮೋದಿ' (ಹೇಗಿದ್ದೀರ ಮೋದಿ) ಎಂಬುದರ ಹೃಸ್ವ ರೂಪ. ಹಾಗಾಗಿ ಇದಕ್ಕೆ ಭಾರತದಲ್ಲಿ ಬಳಸಲಾಗುವ ಪ್ರಮುಖ ಹತ್ತು ಭಾಷೆಯಲ್ಲಿ ಉತ್ತರಿಸಿದ ಮೋದಿ, 'ಭಾರತದಲ್ಲಿ ಎಲ್ಲ ಚೆನ್ನಾಗಿದೆ' ಎಂದು ಹೇಳಿದರು.

Narendra Modi Talked In 10 Languages in America

'ನಾನು ಏನು ಮಾತನಾಡಿದ್ದೇನೆಂದು ಅಮೆರಿಕದ ಗೆಳೆಯರಿಗೆ ಗೊತ್ತಾಗಿರಲಿಕ್ಕಿಲ್ಲ, ನಾನು ಹೇಳಿದ್ದಿಷ್ಟೆ, 'ಭಾರತದಲ್ಲಿ ಎಲ್ಲ ಚೆನ್ನಾಗಿದೆ' ಎಂದು ಮೋದಿ ಹೇಳಿದರು.

ಅಮೆರಿಕ- ಭಾರತದ ಗಟ್ಟಿ ಬಂಧ, ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್

ಹೌಡಿ ಮೋದಿ ಕಾರ್ಯಕ್ರಮವು ಜಗತ್ತಿನ ದುಬಾರಿ ಕಾರ್ಯಕ್ರಮವಾಗಿದ್ದು, ಅಮೆರಿಕ-ಭಾರತ ಬಾಂದವ್ಯವನ್ನು ಕಾರ್ಯಕ್ರಮವು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+