ಟೆಕ್ಸಾಸ್ : ಹಾಟ್ ಏರ್ ಬಲೂನ್ ದುರಂತ, 16 ಮಂದಿ ಸಾವು

Posted By:
Subscribe to Oneindia Kannada

ಟೆಕ್ಸಾಸ್, ಜುಲೈ 31: ಹಾಟ್ ಏರ್ ಬಲೂನ್ ನಲ್ಲಿ ಪ್ರಯಾಣಿಸುತ್ತಿದ್ದ 16 ಮಂದಿ ದುರಂತ ಸಾವು ಕಂಡ ಘಟನೆ ಟೆಕ್ಸಾಸ್ ಪ್ರಾಂತ್ಯದ ಲಾಕ್ಹಾರ್ಟ್ ಪ್ರದೇಶದಲ್ಲಿ ಸಂಭವಿಸಿದೆ. ದಕ್ಷಿಣ ಆಸ್ಟಿನ್ ನಗರ ಸಮೀಪದಲ್ಲಿ ನಡೆದ ಈ ದುರಂತದಲ್ಲಿ ಹಾಟ್ ಏರ್ ಬಲೂನ್ ಅವಶೇಷಗಳು ಪತ್ತೆಯಾಗಿದ್ದು, ಎಲ್ಲಾ 16ಜನ ಬೆಂಕಿಗೆ ಆಹುತಿಯಾಗಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ, ಹಾಟ್ ಏರ್ ಬಲೂನ್ ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದು, ವಿವರಗಳನ್ನು ಪಡೆಯಲಾಗುತ್ತಿದೆ ಎಂದು Federal Aviation Administration ಪ್ರಕಟಣೆ ಹೊರಡಿಸಿದೆ.

16 die in hot air balloon crash in Texas

ಅಮೆರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಜರುಗಿದ ಬಹುದೊಡ್ಡ ಹಾಟ್ ಏರ್ ಬಲೂನ್ ದುರಂತ ಇದಾಗಿದ್ದು, ಸ್ಥಳೀಯರು ಬಲೂನು ಬೆಂಕಿಯುಂಡೆಯಂತೆ ಆಕಾಶದಿಂದ ನೆಲಕ್ಕೆ ಅಪ್ಪಳಿಸುವುದನ್ನು ಕಂಡಿದ್ದಾರೆ.

ಮೊದಲಿಗೆ ಯಾವುದೇ ಆಕಾಶಕಾಯ ಎಂದು ತಿಳಿದೆವು ಆದರೆ, ನಂತರ ಇದು ಹಾಟ್ ಏರ್ ಬಲೂನ್ ನ ಅವಶೇಷ ಎಂದು ತಿಳಿದು ಬಂದಿತು ಎಂದು ಹೇಳಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least 16 people were killed on Saturday morning after a hot air balloon caught fire and crashed near Lockhart, a city in the central part of the US state of Texas.
Please Wait while comments are loading...