Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು
Bengaluru Rent: ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಲಕ್ಷಾಂತರ ಜನ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಬಾಡಿಗೆಗೆ ಇರುವವರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮನೆ ಬಾಡಿಗೆಗೆ
Bengaluru Rent: ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಲಕ್ಷಾಂತರ ಜನ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಬಾಡಿಗೆಗೆ ಇರುವವರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮನೆ ಬಾಡಿಗೆಗೆ ಪಡೆದುಕೊಳ್ಳುವ ಮುನ್ನ ಭಾರೀ ಮುಂಗಡ ಹಣವನ್ನು ಪಡೆದುಕೊಳ್ಳುತ್ತಿರುವುದು ಹಾಗೂ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಹೆಚ್ಚುವರಿ ಹಣವನ್ನು ಕಡಿತ ಮಾಡುತ್ತಿರುವುದು ಬಾಡಿಗೆದಾರರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಬಾಡಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಹೊಸ ಬಾಡಿಗೆ ನಿಯಮಗಳು 2026ರ ಜಾರಿಗೆ ತಂದಿದೆ. ಇನ್ನು ಕರ್ನಾಟಕ ಸರ್ಕಾರವೂ ಸಹ ಬಾಡಿಗೆ ನಿಯಮಗಳಿಗೆ ತಿದ್ದುಪಡಿಯನ್ನು ತಂದಿದೆ. ಆದರೆ. ಈ ಹೊಸ ಬದಲಾವಣೆಗಳು ಕೆಳ ಹಂತದಲ್ಲಿ ವಾಸ್ತವದಲ್ಲಿ ಅನುಷ್ಠಾನ ಮಾಡುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆಯೂ ಎದುರಾಗಿದೆ.

10 ತಿಂಗಳ ಮುಂಗಡ ಹಣ ಪಡೆದುಕೊಳ್ಳುವುದು
ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರು / ಬಾಡಿಗೆಗೆ ಇರುವವರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ, ಅತಿ ಹೆಚ್ಚು ಮುಂಗಡ ಹಣವನ್ನು ಪಡೆದುಕೊಳ್ಳುತ್ತಿರುವುದು. ಹೌದು ಬೆಂಗಳೂರಿನಲ್ಲಿ ಕನಿಷ್ಠ ಎಂದರೂ 10 ತಿಂಗಳ ಮುಂಗಡ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಮನೆ ಬಾಡಿಗೆ 10,000 ರೂ. ಆದರೆ ನೀವು ಕನಿಷ್ಠ 1 ಲಕ್ಷ ರೂ.ಯಿಂದ 2 ಲಕ್ಷ ರೂ. ವರೆಗೆ ಮುಂಗಡ ಹಣ ನೀಡಬೇಕು. ಈ ರೀತಿ ಭಾರೀ ಮೊತ್ತದ ಮುಂಗಡ ಹಣವನ್ನು ತೆಗೆದುಕೊಳ್ಳುತ್ತಿರುವುದು ಬಾಡಿಗೆ ಮನೆದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಮಧ್ಯಮ ವರ್ಗದ ಜನ ಈ ಮೊತ್ತವನ್ನು ಹೊಂದಾಣಿಕೆ ಮಾಡುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆ ಖಾಲಿ ಮಾಡುವಾಗಲೂ ಸಮಸ್ಯೆ
ಇನ್ನು ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆದುಕೊಳ್ಳುವ ಸಂದರ್ಭದಲ್ಲಿ ಮಾತ್ರವಲ್ಲ, ಮನೆ ಖಾಲಿ ಮಾಡುವಾಗಲೂ ಪರದಾಡುವ ಪರಿಸ್ಥಿತಿ ಇದೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಮುಂಗಡ ಹಣದಲ್ಲಿ ಭಾರೀ ಮೊತ್ತವನ್ನು ಕಡಿತ ಮಾಡಿಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿ ಬದಲಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆ ಪೇಂಟಿಂಗ್‌ಗೆ ಭಾರೀ ಮೊತ್ತವನ್ನು ಮುರಿದುಕೊಳ್ಳಲಾಗುತ್ತಿದೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಒಂದು ತಿಂಗಳ ಬಾಡಿಗೆಯನ್ನು ಕಡಿತ ಮಾಡಿಕೊಳ್ಳಲಾಗುತ್ತಿದೆ. ಇನ್ನು ಕೆಲವು ಆಸ್ತಿದಾರರು ಹೆಚ್ಚುವರಿ ಹಣವನ್ನು ಸಹ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಮನೆ ಪೇಂಟಿಂಗ್‌ನೊಂದಿಗೆ ಮನೆ ದುರಸ್ತಿ ಹಾಗೂ ಸ್ವಚ್ಛತಾ ವೆಚ್ಚವನ್ನೂ ಸೇರಿಸಿ ಅಂದಾಜು 10,000 ದಿಂದ 20,000 ರೂ. ಮುಂಗಡ ಹಣದಿಂದಲೇ ಮುರಿದುಕೊಳ್ಳುತ್ತಿರುವುದು ಬಾಡಿಗೆದಾರರು ಎರಡು ಹಂತದಲ್ಲೂ ಸವಾಲು ಎದುರಿಸುವಂತೆ ಆಗಿದೆ.
ಮಾಂಸಾಹಾರಿಗಳಿಗೆ ಮನೆ ನೀಡುವುದಿಲ್ಲ
ಬೆಂಗಳೂರಿನಂತಹ ನಗರದಲ್ಲಿರುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ, ಮಾಂಸಾಹಾರ ಸೇವಿಸುವವರಿಗೆ ಮನೆ ನೀಡುವುದಿಲ್ಲ ಎನ್ನುವುದು. ಮನೆಯನ್ನು ಬಾಡಿಗೆ ನೀಡುವುದಾದರೆ, ಆ ಬಾಡಿಗೆ ಮನೆಯಲ್ಲಿ ಮಾಂಸಾಹಾರ ಸೇವಿಸುವವರಿಗೆ ಅವಕಾಶ ನೀಡದೆ ಇರುವುದು ಯಾಕೆ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಇನ್ನು ಆನ್‌ಲೈನ್ ವೇದಿಕೆಗಳಲ್ಲಿ ಮನೆ ಖಾಲಿ ಇದೆ ಎಂದು ನೋಡಿಕೊಂಡು ಮನೆ ಹುಡುಕುವವರಿಗೂ ಇದು ಸಮಸ್ಯೆ ಆಗಿದೆ. ಮನೆಗಳನ್ನು ಹುಡುಕುವುದಕ್ಕೆ ಇರುವ ಆನ್‌ಲೈನ್ ವೇದಿಕೆಗಳಲ್ಲಿ ಸಸ್ಯಹಾರ ಸೇವಿಸುವವರಿಗೆ ಮಾತ್ರ ಮನೆ ಬಾಡಿಗೆಗೆ ನೀಡಲಾಗುವುದು ಎನ್ನುವ ಅಂಶ ಇಲ್ಲದೆ ಇರುವುದರಿಂದ ಸ್ಥಳಕ್ಕೆ ಹೋಗಿ ನೋಡುವಾಗ ಮನೆ ಬಾಡಿಗೆಗೆ ಹುಡುಕುತ್ತಿರುವವರು ಪೇಚಾಡುವ ಪರಿಸ್ಥಿತಿ ಇದೆ.

ಜಾತಿ ಕೇಳುವವರೂ ಇದ್ದಾರೆ
ಇದು ಅಚ್ಚರಿ ಎನಿಸಿದರೂ ನಿಜ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇಂದಿಗೂ ಕೆಲವು ಆಸ್ತಿದಾರರು ಮನೆಗಳನ್ನು ಬಾಡಿಗೆ ನೀಡುವ ಸಂದರ್ಭದಲ್ಲಿ ಜಾತಿ ಕೇಳುವುದು ಇದೆ. ಕೆಲವರು ಯಾವ ಜಾತಿ ಎಂದು ಪರೋಕ್ಷವಾಗಿ ಕೇಳುವುದು ಸಹ ಇದೆ. ನಿಮ್ಮ ಮನೆ ದೇವರು ಯಾವುದು, ನೀವು ಯಾವ ಊರಿನವರು ಅಥವಾ ನಿಮ್ಮ ಹಿನ್ನೆಲೆ, ಪೂರ್ಣ ಹೆಸರು ಎಂದೆಲ್ಲ ಸೂಚ್ಯಕವಾಗಿ ಬಾಡಿಗೆದಾರರನ್ನು ಕೇಳುವ ಆಸ್ತಿ ಮಾಲೀಕರು ಇದ್ದಾರೆ. ಕೆಲವು ನಿರ್ದಿಷ್ಟ ಜಾತಿಯವರಿಗೆ, ಅನ್ಯ ಸಮುದಾಯದವರಿಗೆ ಮನೆಗಳನ್ನು ಬಾಡಿಗೆಗೆ ಕೊಡುವುದನ್ನು ನಿರಾಕರಿಸುವುದು ಸಹ ಇದೆ. ಆದರೆ ನೀವು ಈ ಜಾತಿಯವರು ಹೀಗಾಗಿ, ನಾವು ಮನೆ ಬಾಡಿಗೆಗೆ ಕೊಡುವುದಿಲ್ಲ ಎಂದು ನೇರವಾಗಿ ಹೇಳುವುದಿಲ್ಲ.
ತುಂಬಿದ ಕುಟುಂಬಕ್ಕೆ ಮನೆ ಕೊಡಲ್ಲ
ಬೆಂಗಳೂರಿನಲ್ಲಿ ದಂಪತಿಗಳಿದ್ದರೆ ಮನೆ ಕೊಡುವವರು, ಮಗು ಇದ್ದರೆ ಮನೆ ಕೊಡದೆ ಇರುವವರೂ ಇದ್ದಾರೆ. ಮಗು ಇದ್ದರೆ ಅಥವಾ ಮನೆಯಲ್ಲಿ ಹಿರಿಯರು ಸೇರಿದಂತೆ ಹೆಚ್ಚು ಜನರಿದ್ದರೆ, ಹೆಚ್ಚು ಬಾಡಿಗೆ ಕೇಳುವುದು ಸಹ ಇದೆ. ಇನ್ನೂ ಕೆಲವರು ಹೆಚ್ಚು ಜನ ಅಥವಾ ತುಂಬಿದ ಕುಟುಂಬಗಳಿಗೆ ಮನೆ ಬಾಡಿಗೆಗೆ ನೀಡುವುದಿಲ್ಲ ಈ ವಿಚಾರದಲ್ಲಿ ಆಸ್ತಿದಾರರ ವಾದವೆಂದರೆ ಹೆಚ್ಚು ನೀರು ಖರ್ಚಾಗುತ್ತದೆ, ಗಲಾಟೆ ಆಗುತ್ತದೆ ಎನ್ನುವುದು.
ಆಸ್ತಿದಾರರು ಹೇಳುವುದೇನು
ಇನ್ನು ಮನೆಗಳನ್ನು ಬಾಡಿಗೆಗೆ ನೀಡುವಾಗಲೇ ನಿಯಮಗಳನ್ನು ಹೇಳಿರುತ್ತೇವೆ. ಇಷ್ಟವಾದರೆ ಬಾಡಿಗೆಗೆ ಬರಬಹುದು, ನಾವು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಮನೆ ಬಾಡಿಗೆ ನೀಡುವಾಗಲೇ ಮನೆ ಖಾಲಿ ಮಾಡುವಾಗ ಒಂದು ತಿಂಗಳ ಬಾಡಿಗೆ ಹಣವನ್ನು ಮನೆ ಪೇಂಟಿಂಗ್‌ಗೆ ಕೊಡಬೇಕು ಎಂದು ಹೇಳಿರುತ್ತೇವೆ. ಹೆಚ್ಚು ಮನೆಗಳು ಇರುವ ಜಾಗದಲ್ಲಿ ಹೆಚ್ಚು ಜನ ವಾಸವಿದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಡಿಮೆ ಜನ ಇರುವ ಕುಟುಂಬಗಳಿಗೆ ಮನೆ ಬಾಡಿಗೆಗೆ ನೀಡುತ್ತೇವೆ ಎನ್ನುವುದು ಇನ್ನೂ ಕೆಲವು ಆಸ್ತಿದಾರರ ವಾದವಾಗಿದೆ.
ಕೇಂದ್ರ ಸರ್ಕಾರದ ಹೊಸ ಬಾಡಿಗೆ ನಿಯಮಗಳು 2026
ಬಾಡಿಗೆದಾರರು ಹಾಗೂ ಆಸ್ತಿದಾರರ ರಕ್ಷಣೆಗಾಗಿ ಬಾಡಿಗೆ ನಿಯಮಗಳು - 2026 ಜಾರಿಗೆ ತರಲಾಗಿದೆ. ಈ ಹೊಸ ನಿಯಮಗಳಿಂದ ಆಸ್ತಿದಾರರು ಬಾಡಿಗೆದಾರರಿಂದ ವಿಪರೀತವಾಗಿ ಮುಂಗಡ ಹಣ ಪಡೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.
1. ಡಿಜಿಟಲ್ ಬಾಡಿಗೆ ಒಪ್ಪಂದ ಕಡ್ಡಾಯ
ಹೊಸ ಬಾಡಿಗೆ ನಿಯಮಗಳು 2026ರ ಪ್ರಕಾರ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಡಿಜಿಟಲ್ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಈ ಒಪ್ಪಂದವನ್ನು ಕನಿಷ್ಠ 60 ದಿನಗಳೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದನ್ನು ಸಹ ಕಡ್ಡಾಯ ಮಾಡಲಾಗಿದೆ. ಡಿಜಿಟಲ್ ಸ್ಟ್ಯಾಂಪ್ ಮಾಡಿ ಸರ್ಕಾರದ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಈ ನಿಯಮ ಉಲ್ಲಂಘನೆ ಮಾಡಿದರೆ 5,000 ರೂ. ವರೆಗೂ ದಂಡ ವಿಧಿಸುವುದಕ್ಕೆ ಅವಕಾಶ ಇರಲಿದೆ.
2. ಮುಂಗಡ ಹಣ ಪಡೆಯುವುದಕ್ಕೆ ಮಿತಿ
ಹೊಸ ನಿಯಮದ ಪ್ರಕಾರ ಮನೆಗಳನ್ನು ಬಾಡಿಗೆ ನೀಡುವಾಗ ಕೇವಲ 2 ತಿಂಗಳ ಬಾಡಿಗೆ ಮಾತ್ರ ಮುಂಗಡ ಹಣವನ್ನು ಪಡೆದುಕೊಳ್ಳಬಹುದಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಗರಿಷ್ಠ 6 ತಿಂಗಳ ಬಾಡಿಗೆ ಮಾತ್ರ ಮುಂಗಡ ಹಣ ಪಡೆದುಕೊಳ್ಳುವುದಕ್ಕೆ ಅವಕಾಶ ಇರಲಿದೆ.
3. ಬಾಡಿಗೆ ಹೆಚ್ಚಳಕ್ಕೆ ಹೊಸ ನಿಯಮಗಳು
ಮನೆ ಮಾಲೀಕರು 12 ತಿಂಗಳಿಗಿಂತ ಮುಂಚೆ ಬಾಡಿಗೆ ಹೆಚ್ಚಳ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಅಲ್ಲದೆ ಬಾಡಿಗೆ ಹೆಚ್ಚಳ ಮಾಡಲು ಕನಿಷ್ಠ 90 ದಿನಗಳ ಮುಂಚಿತವಾಗಿ ಲಿಖಿತ ಸೂಚನೆ ನೀಡಬೇಕಾಗುತ್ತದೆ. ಬಾಡಿಗೆ ಹೆಚ್ಚಳದ ವಿವರಗಳು ಒಪ್ಪಂದದಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿರಬೇಕು.
4. ಬಾಡಿಗೆದಾರರ ಹಕ್ಕುಗಳ ರಕ್ಷಣೆ
ಹೊಸ ಕಾನೂನು ಮುಖ್ಯವಾಗಿ ಬಾಡಿಗೆದಾರರು ಹಾಗೂ ಆಸ್ತಿದಾರರ ರಕ್ಷಣೆಯ ಉದ್ದೇಶವನ್ನು ಒಳಗೊಂಡಿದೆ. ಮನೆ ಮಾಲೀಕರು ಬಾಡಿಗೆದಾರರಿಗೆ ಬೆದರಿಕೆ ಹಾಕುವುದು, ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸೇರಿದಂತೆ ಯಾವ ಸಮಸ್ಯೆ ಸೃಷ್ಟಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಮನೆ ಖಾಲಿ ಮಾಡಿಸುವ ಅವಕಾಶ Rent Tribunal ಆದೇಶದ ಮೂಲಕ ಮಾತ್ರ ಅವಕಾಶ ಇರಲಿದೆ. ಆಸ್ತಿದಾರರು ಮನೆ ಪರಿಶೀಲನೆಗೆ / ಅಥವಾ ಬಾಡಿಗೆ ಮನೆಯ ಒಳಗೆ ಬರಬೇಕಾದರೆ 24 ಗಂಟೆಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ಕೊಡಬೇಕಾಗುತ್ತದೆ.
5. ವಿವಾದಗಳನ್ನು ಶೀಘ್ರ ಪರಿಹಾರಿಸಿಕೊಳ್ಳಬಹುದು
ಹೊಸ ನಿಯಮದಿಂದಾಗಿ ಬಾಡಿಗೆ ಸಂಬಂಧಿತ ವಿವಾದಗಳನ್ನು Rent Authority, Rent Court ಅಥವಾ Rent Tribunal ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಪ್ರಕರಣಗಳನ್ನು 60 ದಿನಗಳೊಳಗೆ ಪರಿಹರಿಸುವ ಉದ್ದೇಶ ಇದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಮನೆ ದುರಸ್ತಿ ಸಮಸ್ಯೆ ಇದ್ದರೆ ಮನೆ ಮಾಲೀಕರು 30 ದಿನಗಳಲ್ಲಿ ದುರಸ್ತಿ ಮಾಡಿಕೊಡಬೇಕಾಗುತ್ತದೆ. ಇದನ್ನು ಮನೆ ಬಾಡಿಗೆದಾರರ ಮೇಲೆ ಹಾಕುವುದಕ್ಕೆ ಬರುವುದಿಲ್ಲ.
ಕರ್ನಾಟಕ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ತಂದಿರುವ ಪ್ರಮುಖ ತಿದ್ದುಪಡಿಗಳು
1. ಬಾಡಿಗೆ ಒಪ್ಪಂದ: ಆನ್‌ಲೈನ್‌ನಲ್ಲಿ ನೋಂದಾಯಿಸಲು ಹೊಸ ಪೋರ್ಟಲ್
2. ಮನೆ ಮಾಲೀಕರು ದಿಢೀರ್ ಎಂದು ಮನೆ ಖಾಲಿ ಮಾಡಿಸುವಂತಿಲ್ಲ. ಬಾಡಿಗೆದಾರರಿಗೆ ಅವಕಾಶ ನೀಡಬೇಕು.
3. ಬಾಡಿಗೆದಾರರು ಮನೆ ಖಾಲಿ ಮಾಡಬೇಕಾದರೆ / ಮನೆ ಖಾಲಿ ಮಾಡಿಸಬೇಕಾದರೆ 3 ತಿಂಗಳು ಮೊದಲು ನೋಟಿಸ್ ಕೊಡಬೇಕು.
4. ಮನೆ ಖಾಲಿ ಮಾಡುವಾಗ ಹೆಚ್ಚುವರಿ ಮುಂಗಡ ಹಣ ಮುರಿದುಕೊಳ್ಳುವಂತೆ (ಅಡ್ವಾನ್ಸ್ ಹಣವನ್ನು ಹಿಡಿದುಕೊಳ್ಳುವಂತಿಲ್ಲ) ಇಲ್ಲ.
5. ಬಾಡಿಗೆದಾರರು ಮನೆ ಖಾಲಿ ಮಾಡುವ ಸಂದರ್ಭದಲ್ಲಿಯೇ ಬಾಕಿ ಮೊತ್ತ ಹಿಂದಿರುಗಿಸಬೇಕು.
6. ಬಾಡಿಗೆಗೆ ಮನೆ ಕೊಡುವ ಅಥವಾ ತೆಗೆದುಕೊಳ್ಳುವ ಸಂದರ್ಭದಲ್ಲಿ ಲಿಖಿತ ರೂಪದ ಅಗ್ರಿಮೆಂಟ್ ಕಡ್ಡಾಯ.
7. ಅಗ್ರಿಮೆಂಟ್ ಮಾಡಿಕೊಂಡ 2 ತಿಂಗಳ ಒಳಗೆ ರೆಂಟ್ ಅಥಾರಿಟಿ ಬಳಿ ಜಂಟಿಯಾಗಿ ರಿಜಿಸ್ಟರ್ (ಮನೆ ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರ ಸಹಿ) ಮಾಡುವುದು ಕಡ್ಡಾಯ.
8. ಆನ್‌ಲೈನ್‌ನಲ್ಲೂ ಡಿಜಿಟಲ್ ಸ್ಟ್ಯಾಂಪ್ ರಿಜಿಸ್ಟರ್ ಮಾಡುವ ಅವಕಾಶ: ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅನುಕೂಲ.
9. ಮನೆ ಮಾಲೀಕರು ಬಾಡಿಗೆದಾರರು ಇರುವ ಮನೆಗೆ ಪೂರ್ವ ಅನುಮತಿ ಇಲ್ಲದೆ ಪ್ರವೇಶ ಮಾಡುವುದಕ್ಕೆ ಅವಕಾಶ ಇಲ್ಲ. ಮನೆಗೆ ಬರುವುದಿದ್ದರೆ ಕನಿಷ್ಠ 24 ಗಂಟೆಯ ಮುಂಚೆ ಮೆಸೇಜ್ ಮಾಡಿರಬೇಕು.
10. ಆಸ್ತಿದಾರರು / ಮನೆ ಮಾಲೀಕರು ಬಾಡಿಗೆದಾರರಿಗೆ ಅನವಶ್ಯಕ ಕಿರಿಕಿರಿ ಕೊಡುವಂತೆ ಇಲ್ಲ.
| ವಿಷಯ (Subject) | ಹಳೆಯ ಪದ್ಧತಿ (Old Practice) | ಹೊಸ ನಿಯಮ 2026 (New Rules) |
|---|---|---|
| ಮುಂಗಡ ಹಣ (Advance) | 10 ತಿಂಗಳ ಬಾಡಿಗೆ | ಗರಿಷ್ಠ 2 ತಿಂಗಳು |
| ಒಪ್ಪಂದ (Agreement) | ಕಾಗದದ ಮೇಲೆ | ಡಿಜಿಟಲ್ ನೋಂದಣಿ ಕಡ್ಡಾಯ |
| ಬಾಡಿಗೆ ಹೆಚ್ಚಳ | ಮಾಲೀಕರ ಇಚ್ಛೆಯಂತೆ | 90 ದಿನ ಮುಂಚಿತವಾಗಿ ನೋಟಿಸ್ |
| ಮನೆ ಪ್ರವೇಶ | ಯಾವಾಗ ಬೇಕಾದರೂ | 24 ಗಂಟೆ ಮುಂಚೆ ಮಾಹಿತಿ ನೀಡಬೇಕು |
| ವಿವಾದ ಪರಿಹಾರ | ಸಿವಿಲ್ ಕೋರ್ಟ್ ಅಲೆದಾಟ | 60 ದಿನಗಳಲ್ಲಿ ಟ್ರಿಬ್ಯೂನಲ್ ಮೂಲಕ |
ಬೆಂಗಳೂರಲ್ಲಿ ಬಾಡಿಗೆ ಮನೆ: ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳಿವು
1. ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಎಷ್ಟು ತಿಂಗಳ ಮುಂಗಡ ಹಣ ಪಡೆಯಬಹುದು ?
ಹೊಸ ಬಾಡಿಗೆ ನಿಯಮಗಳು 2026 ಪ್ರಕಾರ ಮನೆ ಬಾಡಿಗೆಗೆ ಗರಿಷ್ಠ 2 ತಿಂಗಳ ಬಾಡಿಗೆಯಷ್ಟೇ ಮುಂಗಡ ಹಣ ಪಡೆಯಲು ಅವಕಾಶ ಇದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಗರಿಷ್ಠ 6 ತಿಂಗಳ ಬಾಡಿಗೆ ಮುಂಗಡವಾಗಿ ಪಡೆಯುವುದಕ್ಕೆ ಹೊಸ ನಿಯಮದಲ್ಲಿ ಅವಕಾಶವಿದೆ.
2. ಮನೆ ಮಾಲೀಕರು ಏಕಾಏಕಿ ಬಾಡಿಗೆದಾರರನ್ನು ಮನೆ ಖಾಲಿ ಮಾಡಿಸಬಹುದೇ ?
ಇಲ್ಲ, ಹೊಸ ನಿಯಮಗಳ ಪ್ರಕಾರ Rent Tribunal ಅಥವಾ Rent Authority ಆದೇಶವಿಲ್ಲದೆ ಮನೆ ಮಾಲೀಕರು ಬಾಡಿಗೆದಾರರನ್ನು ಬಲವಂತವಾಗಿ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ.
3. ಮನೆ ಖಾಲಿ ಮಾಡುವಾಗ ಮುಂಗಡ ಹಣವನ್ನು ಕಡಿತ ಮಾಡಬಹುದೇ?
ಸಾಮಾನ್ಯವಾಗಿ ಮುಂಗಡ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಬೇಕು. ಕೇವಲ ಸ್ಪಷ್ಟವಾದ ಹಾನಿ ಅಥವಾ ಒಪ್ಪಂದದಲ್ಲಿರುವ ಖರ್ಚುಗಳಿದ್ದರೆ ಮಾತ್ರ ಕಡಿತ ಮಾಡಬಹುದು.
4. ಬಾಡಿಗೆ ಒಪ್ಪಂದವನ್ನು ನೋಂದಾಯಿಸುವುದು ಕಡ್ಡಾಯವಾಗಿದೆಯೇ ?
ಹೌದು, 2026ರ ಹೊಸ ನಿಯಮಗಳ ಪ್ರಕಾರ ಡಿಜಿಟಲ್ ರೆಂಟಲ್ ಅಗ್ರಿಮೆಂಟ್ ಮಾಡಿ 60 ದಿನಗಳೊಳಗೆ ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಕಡ್ಡಾಯ. ಇಲ್ಲವಾದರೆ ದಂಡ ವಿಧಿಸುವ ಅವಕಾಶ ಇದೆ.
-
ಕೇರಳ ವಿಧಾನಸಭೆ ಚುನಾವಣೆ: ಸಿಎಂ ಪಿಣರಾಯಿ ವಿಜಯನ್ ನಾಮಪತ್ರ ಸಲ್ಲಿಕೆ, ಒಟ್ಟು ಆಸ್ತಿ ಮೌಲ್ಯ 1,00,00,000 ರೂಪಾಯಿಗೂ ಅಧಿಕ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ














Click it and Unblock the Notifications