Get Updates
Get notified of breaking news, exclusive insights, and must-see stories!

Oscars 2026: ಮೈಕಲ್ ಜೋರ್ಡಾನ್‌ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ 98ನೇ ಅಕಾಡೆಮಿ ಪ್ರಶಸ್ತಿ (Oscars 2026) ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ವೈಭವದಿಂದ ಜರುಗಿತು. ಖ್ಯಾತ ಲೇಟ್-ನೈಟ್ ಶೋ ನಿರೂಪಕ ಕೋನನ್ ಒಬ್ರೇನ್ ಈ ಬಾರಿಯೂ ಸಮಾರಂಭದ ನಿರೂಪಣೆ ಮಾಡಿದರು. ವಿಶೇಷವೆಂದರೆ, ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಅವರು ನಟ ಜೇವಿಯರ್ ಬಾರ್ಡೆಮ್ ಅವರೊಂದಿಗೆ ಸೇರಿ "ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ" ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ 4:30ಕ್ಕೆ ಈ ಅದ್ಧೂರಿ ಸಮಾರಂಭ ಆರಂಭವಾಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಸಿನಿಮಾ ಪ್ರೇಮಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರಕ್ಕೆ 6 ಪ್ರಶಸ್ತಿ

ಈ ಬಾರಿಯ ಆಸ್ಕರ್‌ನಲ್ಲಿ "ಒನ್ ಬ್ಯಾಟಲ್ ಆಫ್ಟರ್ ಅನದರ್" (One Battle After Another) ಸಿನಿಮಾ ಅತಿ ದೊಡ್ಡ ವಿಜೇತವಾಗಿ ಹೊರಹೊಮ್ಮಿದೆ. ಈ ಚಿತ್ರವು ಪ್ರತಿಷ್ಠಿತ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ಪಾಲ್ ಥಾಮಸ್ ಆಂಡರ್ಸನ್), ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ, ಅತ್ಯುತ್ತಮ ಎಡಿಟಿಂಗ್ ಮತ್ತು ಅತ್ಯುತ್ತಮ ಕಾಸ್ಟಿಂಗ್ ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿದೆ.

Oscars 2026

16 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಈ ವರ್ಷದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ರಿಯಾನ್ ಕೂಗ್ಲರ್ ನಿರ್ದೇಶನದ 'ಸಿನ್ನರ್ಸ್' (Sinners) ಚಿತ್ರ ಕೇವಲ 4 ಪ್ರಶಸ್ತಿಗಳನ್ನು ಮಾತ್ರ ಗೆದ್ದುಕೊಂಡಿತು. ಆದರೂ ಮೈಕಲ್ ಬಿ ಜೋರ್ಡಾನ್ ಈ ಚಿತ್ರಕ್ಕಾಗಿ "ಅತ್ಯುತ್ತಮ ನಟ" ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ವಿಶೇಷ. ಜೊತೆಗೆ ಅತ್ಯುತ್ತಮ ಮೂಲ ಚಿತ್ರಕಥೆ, ಸ್ಕೋರ್ ಮತ್ತು ಸಿನಿಮಾಟೋಗ್ರಫಿ ವಿಭಾಗಗಳಲ್ಲಿಯೂ ಈ ಚಿತ್ರಕ್ಕೆ ಜಯ ಸಿಕ್ಕಿದೆ.

ಜೆಸ್ಸಿ ಬಕ್ಲಿ (Jessie Buckley) ತಮ್ಮ ಅದ್ಭುತ ನಟನೆಗಾಗಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. 'ಅತ್ಯುತ್ತಮ ನಟಿ' ಪ್ರಶಸ್ತಿ ಗೆದ್ದ ಮೊದಲ ಐರಿಶ್ ನಟಿ ಎಂಬ ಕೀರ್ತಿಗೆ ಜೆಸ್ಸಿ ಬಕ್ಲಿ ಪಾತ್ರರಾಗಿದ್ದಾರೆ. ಫ್ರಾಂಕೆನ್‌ಸ್ಟೈನ್ (Frankenstein) ಈ ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಮಿಂಚಿದ್ದು, ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್, ಹೇರ್‌ಸ್ಟೈಲಿಂಗ್ ಮತ್ತು ಮೇಕಪ್ ಹಾಗೂ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಸೇರಿದಂತೆ ಒಟ್ಟು 3 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

Sinners ಚಿತ್ರದ ಸಿನಿಮಾಟೋಗ್ರಾಫರ್ ಆಟಮ್ ಡುರಾಲ್ಡ್ ಅರ್ಕಾಪಾವ್ ಅವರು ಆಸ್ಕರ್ ಇತಿಹಾಸದಲ್ಲಿ 'ಅತ್ಯುತ್ತಮ ಸಿನಿಮಾಟೋಗ್ರಫಿ' ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಆಸ್ಕರ್ ಗೆದ್ದ ಮೊದಲ ನಾರ್ವೇಜಿಯನ್ ಚಿತ್ರವಾಗಿ Sentimental Value: ಹೊರಹೊಮ್ಮಿದೆ.

Oscars 2026

ಆಸ್ಕರ್-2026 ಪ್ರಮುಖ ವಿಭಾಗಗಳ ವಿಜೇತರ ಪಟ್ಟಿ

ಅತ್ಯುತ್ತಮ ಸಿನಿಮಾ: One Battle After Another

ಅತ್ಯುತ್ತಮ ನಿರ್ದೇಶಕ: ಪಾಲ್ ಥಾಮಸ್ ಆಂಡರ್ಸನ್ (One Battle After Another)

ಅತ್ಯುತ್ತಮ ನಟ: ಮೈಕಲ್ ಬಿ ಜೋರ್ಡಾನ್ (Sinners)

ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ (Hamnet)

ಅತ್ಯುತ್ತಮ ಪೋಷಕ ನಟ: ಶಾನ್ ಪೆನ್ (One Battle After Another)

ಅತ್ಯುತ್ತಮ ಪೋಷಕ ನಟಿ: ಆಮಿ ಮಡಿಗನ್ (Weapons)

ಅತ್ಯುತ್ತಮ ಅನಿಮೇಟೆಡ್ ಸಿನಿಮಾ: KPop Demon Hunters

ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: Sentimental Value

ಅತ್ಯುತ್ತಮ ಮೂಲ ಚಿತ್ರಕಥೆ: ರಿಯಾನ್ ಕೂಗ್ಲರ್ (Sinners)

ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ಪಾಲ್ ಥಾಮಸ್ ಆಂಡರ್ಸನ್ (One Battle After Another)

ಅತ್ಯುತ್ತಮ ಸಿನಿಮಾಟೋಗ್ರಫಿ: ಆಟಮ್ ಡುರಾಲ್ಡ್ ಅರ್ಕಾಪಾವ್ (Sinners)

ಅತ್ಯುತ್ತಮ ಒರಿಜಿನಲ್ ಸ್ಕೋರ್ಲುಡ್ವಿಗ್ ಗೊರಾನ್ಸನ್ (Sinners)

ಅತ್ಯುತ್ತಮ ಒರಿಜಿನಲ್ ಸಾಂಗ್: Golden"KPop Demon Hunters

ಅತ್ಯುತ್ತಮ ಎಡಿಟಿಂಗ್: One Battle After Another

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: Frankenstein

ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ಕೇಟ್ ಹಾಲೆ: Frankenstein

ಅತ್ಯುತ್ತಮ ಮೇಕಪ್ ಮತ್ತು ಹೇರ್‌ಸ್ಟೈಲಿಂಗ್: Frankenstein

ಅತ್ಯುತ್ತಮ ವಿಶುವಲ್ ಎಫೆಕ್ಟ್ಸ್: Avatar: Fire and Ash

ಅತ್ಯುತ್ತಮ ಸೌಂಡ್: F1

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+