Holiday Plan: ಉದ್ಯೋಗಿಗಳಿಗೆ ರಜೆ ಹಬ್ಬ: ಪ್ಲ್ಯಾನ್ ಮಾಡಿದ್ರೆ ಮಾರ್ಚ್‌ನಲ್ಲಿ ಎರಡು ಬಾರಿ ಪಡೆಯಬಹುದು ಸತತ 5 ದಿನಗಳ ಹಾಲಿಡೇ
Holiday: ಕೆಲಸದ ಜಂಜಾಟದಿಂದ ಕೊಂಚ ಬಿಡುವು ಬಯಸುವ ಉದ್ಯೋಗಿಗಳಿಗೆ ಹಾಗೂ ವಾರಾಂತ್ಯದ ಪ್ರವಾಸಕ್ಕೆ ಸಜ್ಜಾಗುತ್ತಿರುವವರಿಗೆ ಮಾರ್ಚ್ ತಿಂಗಳು ಸಿಹಿ ಸುದ್ದಿ ಹೊತ್ತು ತಂದಿದೆ. ಈ ತಿಂಗಳ ಮೂರನೇ ವಾರದ ಬಳಿಕ ಸಾಲು ಸಾಲು ಹಬ್ಬಗಳು ಹಾಗೂ ಸರ್ಕಾರಿ ರಜೆಗಳಿದ್ದು, ಸರಿಯಾಗಿ ಪ್ಲ್ಯಾನ್ ಮಾಡಿಕೊಂಡರೆ ಸತತ ಐದು ದಿನಗಳ ಕಾಲ ರಜೆ ಪಡೆಯುವ ಅಪರೂಪದ ಅವಕಾಶ ನಿಮ್ಮದಾಗಲಿದೆ. ಯುಗಾದಿಯಿಂದ ದೇವರ ದಾಸೀಮಯ್ಯ ಜಯಂತಿವರೆಗೆ ಹಾಗೂ ಶ್ರೀರಾಮನವಮಿಯಿಂದ ಮಹಾವೀರ ಜಯಂತಿವರೆಗೆ ಇರುವ ಈ ರಜೆಗಳ ಪಟ್ಟಿ ಇಲ್ಲಿದೆ.
ಸತತ ರಜೆಗಳಿಗಾಗಿ ಕಾಯುತ್ತಿರುವ ಪ್ರವಾಸಿ ಪ್ರಿಯರಿಗೆ ಮತ್ತು ಉದ್ಯೋಗಿಗಳಿಗೆ ಇದು ಸುವರ್ಣಾವಕಾಶ. ಮಾರ್ಚ್ ತಿಂಗಳಾಂತ್ಯದಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಬರುತ್ತಿದ್ದು, ಸರಿಯಾಗಿ ಪ್ಲಾನ್ ಮಾಡಿದರೆ ಸತತ 5 ದಿನಗಳ ರಜೆಯನ್ನು ನೀವು ಪಡೆಯಬಹುದು. ಇದು ಹೇಗೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಯುಗಾದಿ ಟು ದೇವರ ದಾಸೀಮಯ್ಯ ಜಯಂತಿ
* ಮಾರ್ಚ್ 19 (ಗುರುವಾರ): ಯುಗಾದಿ ಹಬ್ಬ (ಸಾರ್ವತ್ರಿಕ ರಜೆ)
* ಮಾರ್ಚ್ 20 (ಶುಕ್ರವಾರ): ರಂಜಾನ್ (ಪರಿಮಿತ ರಜೆ - RH)
* ಮಾರ್ಚ್ 21 (ಶನಿವಾರ): ರಂಜಾನ್ (ಸಾರ್ವತ್ರಿಕ ರಜೆ)
* ಮಾರ್ಚ್ 22 (ಭಾನುವಾರ): ನಾಲ್ಕನೇ ಶನಿವಾರ (ಸರ್ಕಾರಿ ರಜೆ)
* ಮಾರ್ಚ್ 23 (ಸೋಮವಾರ): ದೇವರ ದಾಸಿಮಯ್ಯ ಜಯಂತಿ (ಪರಿಮಿತ ರಜೆ - RH)
ಮಾರ್ಚ್ ಕೊನೆಯ ವಾರದಲ್ಲೂ ಕೂಡ ಭಾನುವಾರ ಸೇರಿ ಶ್ರೀರಾಮನವಮಿ ಮತ್ತು ಮಹಾವೀರ ಜಯಂತಿಯಂದು ರಜೆಗ ಇದ್ದು, ಇಲ್ಲೂ ಕೂಡ ಒಂದು ದಿನ ರಜೆ ಹಾಕಿದರೆ ಸಾಕು, ಮತ್ತೆ ಐದು ದಿನ ರಜೆ ಸಿಗಲಿದೆ. ಅದರಲ್ಲೂ ಬ್ಯಾಂಕ್ ಉದ್ಯೋಗಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ. ಇನ್ನುಳಿದಂತೆ ಬಹುತೇಕ ಕಂಪನಿಗಳ ಉದ್ಯೋಗಿಗಳು ಈ ಅವಕಾಶವನ್ನು ಪಡೆಯಲು ಎರಡು ದಿನ ರಜೆ ಹಾಕಬೇಕಾಗುತ್ತದೆ. ಹಾಗಾದ್ರೆ ರಜೆ ಪ್ಲ್ಯಾನ್ ಮಾಡಿಕೊಳ್ಳುವವರು ಇಲ್ಲಿ ನೀಡಲಾಗಿರುವ ಪಟ್ಟಿಯನ್ನು ಗಮನಿಸಿ.
ಮುಂದಿನ ವಾರದಲ್ಲಿ ಮತ್ತೆ ಮೂರು ದಿನ ರಜೆ
* ಮಾರ್ಚ್ 27 (ಶುಕ್ರವಾರ): ಶ್ರೀರಾಮನವಮಿ (ಸಾರ್ವತ್ರಿಕ ರಜೆ)
* ಮಾರ್ಚ್ 28: ಎರಡನೇ ಶನಿವಾರ (ಒಂದು ದಿನ ರಜೆ ಹಾಕಿಕೊಂಡರೆ)
* ಮಾರ್ಚ್ 29 (ಭಾನುವಾರ): ಸರ್ಕಾರಿ ರಜೆ
* ಮಾರ್ಚ್ 30 (ಸೋಮವಾರ): ರಜೆ ಇರುವುದಿಲ್ಲ
* ಮಾರ್ಚ್ 31 (ಮಂಗಳವಾರ): ಮಹಾವೀರ ಜಯಂತಿ (ಸಾರ್ವತ್ರಿಕ ರಜೆ)
ಮಾರ್ಚ್ 30 ಸೋಮವಾರ ಅಧಿಕೃತ ರಜೆ ಇರುವುದಿಲ್ಲ. ಆದರೆ ಸೋಮವಾರ ಒಂದು ದಿನ ರಜೆ ಪಡೆದರೆ, ಶ್ರೀರಾಮನವಮಿಯಿಂದ ಮಹಾವೀರ ಜಯಂತಿಯವರೆಗೆ ಸತತ 5 ದಿನಗಳ ಕಾಲ ರಜೆ ಎಂಜಾಯ್ ಮಾಡಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ, ಬಹುತೇಕ ಕಂಪನಿಗಳ ಉದ್ಯೋಗಿಗಳಿಗೆ ಎರಡನೇ ಶನಿವಾರ ಕೂಡ ಕೆಲಸ ಇರಲಿದ್ದು, ಆ ದಿನ ಸೇರಿಸಿ ಸೋಮವಾರ ರಜೆ ಹಾಕಿದರೆ, ಐದು ದಿನಗಳ ರಜೆ ಎಂಜಾಯ್ ಮಾಡಬಹುದು.
ಎರಡು ಹಂತದ ರಜೆ ಪ್ಲ್ಯಾನ್ ಬಗ್ಗೆ ಮಾಹಿತಿ
ಸತತ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಒಂದರ ಬೆನ್ನಲ್ಲೊಂದು ಬರುತ್ತಿದ್ದು, ಸ್ವಲ್ಪ ಜಾಣ್ಮೆಯಿಂದ ರಜೆ ಅಪ್ಲೈ ಮಾಡಿದರೆ ದೀರ್ಘಕಾಲದ ವಿರಾಮ ನಿಮ್ಮದಾಗಲಿದೆ. ಮೊದಲ ಹಂತದಲ್ಲಿ ಮಾರ್ಚ್ 19ರ ಯುಗಾದಿಯಿಂದ 23ರ ದಾಸೀಮಯ್ಯ ಜಯಂತಿಯವರೆಗೆ ಒಟ್ಟು ಐದು ದಿನಗಳ ಕಾಲ ಆಫೀಸ್ ಕೆಲಸದ ಜಂಜಾಟದಿಂದ ದೂರವಿರಬಹುದು. ಅದು ಪ್ಲ್ಯಾನ್ ಮಾಡಿಕೊಂಡರೆ ಮಾತ್ರ.
ಅದೇ ರೀತಿ, ಮಾರ್ಚ್ 27ರ ಶ್ರೀರಾಮನವಮಿಯಿಂದ ಆರಂಭಿಸಿ ಮಾರ್ಚ್ 31ರ ಮಹಾವೀರ ಜಯಂತಿಯವರೆಗೆ ಮತ್ತೊಂದು ಸುವರ್ಣಾವಕಾಶವಿದೆ. ಇಲ್ಲಿ ಮಾರ್ಚ್ 30ರ ಸೋಮವಾರದಂದು ಒಂದು ದಿನ ರಜೆ ಮಂಜೂರು ಮಾಡಿಸಿಕೊಂಡರೆ, ಸತತ ಐದು ದಿನಗಳ ಕಾಲ ಪ್ರವಾಸ ಅಥವಾ ವಿಶ್ರಾಂತಿಗೆ ಸಮಯ ಸಿಗಲಿದೆ. ಸಾಲು ಸಾಲು ರಜೆಗಳ ಈ ಅವಕಾಶವು ಕುಟುಂಬದೊಂದಿಗೆ ಸಮಯ ಕಳೆಯಲು ಅಥವಾ ಬೇಸಿಗೆಯ ಪ್ರವಾಸ ಕೈಗೊಳ್ಳಲು ಸೂಕ್ತವಾಗಿದೆ ಎಂದು ಹೇಳಬಹುದು.












Click it and Unblock the Notifications