ತಮಿಳುನಾಡು ಅಖಾಡದಲ್ಲಿ ಬಿಜೆಪಿ ಗೆಲುವಿಗೆ ನಾನಾ ತಂತ್ರ, ದಕ್ಷಿಣ ಜಯಕ್ಕಾಗಿ ಭರ್ಜರಿ ಪ್ಲಾನ್ | Tamil Nadu Election

ತಮಿಳುನಾಡು ಚುನಾವಣೆ ಅಖಾಡ ರಂಗೇರಿದ್ದು, ಗೆಲುವಿಗೆ ಭರ್ಜರಿ ಲೆಕ್ಕಾಚಾರ ಆರಂಭ ಆಗುತ್ತಿದೆ. ಒಂದು ಕಡೆ ಡಿಎಂಕೆ ಪಕ್ಷ ಅಧಿಕಾರದಲ್ಲಿ ಇದ್ದು, ಮತ್ತೊಂದು ಬಾರಿ ಭರ್ಜರಿ ಗೆಲುವು ದಾಖಲಿಸಲು ಹವಣಿಸುತ್ತಿದೆ. ಇದೇ ಸಮಯದಲ್ಲಿ ನಟ ವಿಜಯ್ ಅವರ ಟಿವಿಕೆ ಪಾರ್ಟಿ ಕೂಡ ವಿಜಯ ಪತಾಕೆ ಹಾರಿಸಲು ಕಾಯುತ್ತಿದ್ದು, ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದರೂ ವಿಜಯ್ ಹಾವಾ ಈ ಸಮಯದಲ್ಲಿ ಜೋರಾಗಿದೆ. ಇಷ್ಟೆಲ್ಲದರ ನಡುವೆ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ತಮಿಳುನಾಡು ಚುನಾವಣೆ ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ. ಅದರಲ್ಲೂ ಈ ಬಾರಿ ಚುನಾವಣೆಯಲ್ಲಿ ಗೆಲುವಿಗೆ ನಾನಾ ತಂತ್ರ ಹೆಣೆದಿದ್ದಾರೆ ಬಿಜೆಪಿ ನಾಯಕರು.

ಆಂಧ್ರ ಪ್ರದೇಶ ಬಿಟ್ಟು ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಪಕ್ಷಗಳು ಅಧಿಕಾರದಲ್ಲಿ ಇಲ್ಲ. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಎರಡೆರಡು ಬಾರಿ ಅಧಿಕಾರವನ್ನು ನಡೆಸಿರುವ ಬಿಜೆಪಿ ನಾಯಕರಿಗೆ ಕಳೆದ ವಿಧಾನಸಭೆ ಚುನಾವಣೆ ಕೈಕೊಟ್ಟ ಕಾರಣ ದೊಡ್ಡ ಸವಾಲು ಕೂಡ ಎದುರಾಗಿತ್ತು. ಇನ್ನುಳಿದಂತೆ ನೆರೆಯ ತಮಿಳುನಾಡು ರಾಜ್ಯದಲ್ಲಿ ಹೇಗಾದರೂ ದೊಡ್ಡ ಜಯ ದಾಖಲಿಸಬೇಕು ಎಂಬ ಗುರಿಯೊಂದಿಗೆ ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದಾರೆ ಬಿಜೆಪಿ ಲೀಡರ್ಸ್. ಇದೇ ಕಾರಣಕ್ಕೆ ಕಳೆದ ಹಲವು ತಿಂಗಳಿಂದ ನಿರಂತರವಾಗಿ ತಮಿಳುನಾಡು ರಾಜ್ಯದಲ್ಲಿ ತಂತ್ರಗಳನ್ನು ಹೆಣೆಯಲಾಗಿತ್ತು.

Tamil Nadu Election 2026

ನಟ ವಿಜಯ್ ಯಾರ ಜೊತೆಗೆ?

ಈ ಬಾರಿ ನಟ ವಿಜಯ್ ಜೊತೆಯಲ್ಲೂ ಈ ಬಗ್ಗೆ ಮಾತುಕತೆ ಶುರುವಾಗಿದೆ ಎಂಬ ಸುದ್ದಿ ಕೂಡ ಎಲ್ಲಾ ಕಡೆ ಹಬ್ಬಿದೆ. ಇಷ್ಟೆಲ್ಲದರ ನಡುವೆ ಅಖಾಡ ಸಜ್ಜುಗೊಳಿಸಿರುವ ಬಿಜೆಪಿ ನಾಯಕರು ಬೇರೆಯದ್ದೇ ಆದ ಲೆಕ್ಕಾಚಾರ ಶುರು ಮಾಡಿದ್ದು, ಗೆದ್ದು ಬೀಗುವ ಹುಮ್ಮಸ್ಸಿನಲ್ಲಿ ಇದ್ದಾರೆ. ಹಾಗಾದರೆ ಬಿಜೆಪಿ ಲೀಡರ್ಸ್ ಲೆಕ್ಕಾಚಾರ ಏನು? 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಈ ಲೆಕ್ಕಾಚಾರ ಬಲವನ್ನ ತುಂಬಲಿದೆಯಾ? ಎಂಬ ಚರ್ಚೆ ನಡೆಯುವಾಗಲೇ, ನಟ ವಿಜಯ್ ಬಿಜೆಪಿ ಒಕ್ಕೂಟಕ್ಕೆ ಸಾಥ್ ನೀಡಿದರೆ ದೊಡ್ಡ ಬಿರುಗಾಳಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಮಾತುಕತೆ ಕೂಡ ಶುರುವಾಗಿದೆ ಈಗ.

ಬಿಜೆಪಿ ಮತ್ತು ಎಐಎಡಿಎಂಕೆ ಒಗ್ಗಟ್ಟು

ತಮಿಳುನಾಡು ಚುನಾವಣೆ ಗೆಲುವಿಗೆ ಈಗ ಬಿಜೆಪಿ & ಎಐಎಡಿಎಂಕೆ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಾ ಮುಂದೆ ನುಗ್ಗಿದ್ದಾರೆ. ಡಿಎಂಕೆ ಸರ್ಕಾರ ಮಾಡಿಕೊಂಡ ಎಡವಟ್ಟುಗಳನ್ನೇ ಪ್ರಜೆಗಳು ಹಾಗೂ ಮತದಾರರ ಮುಂದೆ ಇಟ್ಟು ಮತ ಕೇಳುತ್ತಿದ್ದಾರೆ. ಹಾಗೇ ಚುನಾವಣೆ ಗೆದ್ದು ಸರ್ಕಾರ ರಚನೆ ಮಾಡಿದ ನಂತರ ದೊಡ್ಡ ದೊಡ್ಡ ಉಡುಗೊರೆ ಕೊಡುವ ಭರವಸೆ ಕೂಡ ನೀಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಪ್ರಧಾನಿ ಮೋದಿ ಅವರ ಸಮೇತ ಬಿಜೆಪಿ ಪಕ್ಷದಿಂದ ಕೇಂದ್ರದ ಘಟಾನುಘಟಿ ನಾಯಕರೇ ನೇರವಾಗಿ ತಮಿಳುನಾಡಿಗೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಬಿಜೆಪಿಗೆ ಗೆದ್ದು ಬೀಗಲು ಹೊಸ ಹುಮ್ಮಸ್ಸು ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+