Daily Horoscope: ಈ ರಾಶಿಯವರಿಗೆ ಅನಿರೀಕ್ಷಿತ ಹಣ ಬರುವುದು, ಮದುವೆ ನಿಶ್ಚಯವಾಗುವ ಸಾಧ್ಯತೆ, ಸಂತೋಷ ಹೆಚ್ಚುವುದು
Horoscope June 21: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಾಮಾನ್ಯವಾಗಿ ಸಂಜೆ 04:30 ರಿಂದ 06:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಇಂದು ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸಗಳಿಗೆ ಸಹೋದರ ಸಹೋದರಿಯರಿಂದ ಬೆಂಬಲ ಸಿಗುತ್ತದೆ. ವ್ಯವಹಾರದಲ್ಲಿ ಹೊಸ ಆಲೋಚನೆಗಳು ಲಾಭವನ್ನು ತರಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಖರ್ಚುಗಳನ್ನು ನಿಯಂತ್ರಿಸುವುದು ಅವಶ್ಯಕ. ಕುಟುಂಬದಲ್ಲಿ ಸಂತೋಷ ಶಾಂತಿ ಇರುತ್ತದೆ.

ವೃಷಭ ರಾಶಿ:
ಮಾತನಾಡುವಾಗ ಎಚ್ಚರಿಕೆ ಅಗತ್ಯ. ಭೂಮಿ ಅಥವಾ ವಾಹನ ಖರೀದಿಸುವ ವಿಚಾರಗಳು ಮುಂದುವರಿಯುತ್ತವೆ. ಖರ್ಚುಗಳ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ಸಂಗಾತಿಯಿಂದ ನಿಮಗೆ ಉತ್ತಮ ಬೆಂಬಲ ಸಿಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಮಿಥುನ ರಾಶಿ:
ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುತ್ತವೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಸರ್ಕಾರಿ ಅಥವಾ ಕಾನೂನು ವಿಷಯಗಳು ಅನುಕೂಲಕರವಾಗಿ ಪರಿಣಮಿಸಬಹುದು. ಆರೋಗ್ಯದಲ್ಲಿ ಏರುಪೇರಾಗುವುದು.
ಕಟಕ ರಾಶಿ:
ಇಂದು ನಿಮ್ಮ ಪಾಲಿನ ಶುಭ ದಿನ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಮನೆ, ಭೂಮಿ ಅಥವಾ ವಾಹನ ಖರೀದಿ ಕೆಲಸಗಳು ಪ್ರಗತಿ ಹೊಂದುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆ ಕಾಡಬಹುದು.
ಸಿಂಹ ರಾಶಿ:
ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಹೊಸ ಎಲಸ ಆರಂಭಿಸಬಹುದು. ಸ್ನೇಹಿತರ ಭೇಟಿಯಿಂದ ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ಕನ್ಯಾರಾಶಿ:
ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ಕೆಲಸದ ಹೊರೆ ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಇಂದು ಅದೃಷ್ಟದ ದಿನ. ತಾಳ್ಮೆ ಅಗತ್ಯ.
ತುಲಾ ರಾಶಿ:
ಇಂದು ನಿಮ್ಮ ಪಾಲಿಗೆ ಸಾಮಾನ್ಯ ದಿನವಾಗಿರಲಿದೆ. ವ್ಯವಹಾರದಲ್ಲಿ ಲಾಭ ಮುಂದುವರಿಯುತ್ತದೆ. ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರೂ ಸ್ನೇಹಿತರು ಸಹಾಯ ಮಾಡುವರು. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ:
ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಪಾಲುದಾರಿಕೆಯಲ್ಲಿ ನಡೆಸುವ ವ್ಯವಹಾರದಲ್ಲಿ ಲಾಭವಾಗುವುದು. ಸಂಗಾತಿಯೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆಯಿದೆ. ಉತ್ತಮ ಆರ್ಥಿಕ ಲಾಭಗಳು ಕಂಡುಬರುತ್ತವೆ. ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು.
ಧನು ರಾಶಿ:
ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವಾಗುವುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ.
ಮಕರ ರಾಶಿ:
ಇಂದು, ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ವ್ಯವಹಾರ ವಿಸ್ತರಣೆಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಗೌರವ ಸಿಗುವ ಸೂಚನೆಗಳಿವೆ. ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಕುಂಭ ರಾಶಿ:
ಕೆಲಸದ ಹೊರೆ ಹೆಚ್ಚಿದ್ದರೂ ಯಶಸ್ಸು ಸಿಗುವುದು. ಹೂಡಿಕೆಗಳ ಬಗ್ಗೆ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ತಾಳ್ಮೆಯಿಂದ ವರ್ತಿಸಿ.
ಮೀನ ರಾಶಿ:
ಸಂತೋಷ ಹೆಚ್ಚಾಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಆರ್ಥಿಕವಾಗಿ ಖರ್ಚುಗಳನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications