ಮಮತಾ ಬ್ಯಾನರ್ಜಿಗೆ ಸೋಲಿನ ರುಚಿ ತೋರಿಸಲು ಸಜ್ಜಾದ ಬಿಜೆಪಿ ನಾಯಕರು | West Bengal Election
ಪಶ್ಚಿಮ ಬಂಗಾಳ ಚುನಾವಣೆ ಅಖಾಡದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿಗೆ ಎಲ್ಲಾ ಉಲ್ಟಾ ಆಗ್ತಾ ಇದೆ ಎನ್ನಬಹುದು. ಒಂದು ಕಡೆ ಪಕ್ಷದಲ್ಲೇ ಎದುರಾಗಿರುವ ಆಂತರಿಕ ತಿಕ್ಕಾಟ ಹಾಗೂ ಇಷ್ಟು ವರ್ಷಗಳ ಕಾಲ ಸತತ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿರುವ ಟಿಎಂಸಿ ಪಕ್ಷಕ್ಕೆ ಅದೇ ರಾಜ್ಯದಲ್ಲಿ, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಜೋರಾಗಿದೆ. ಇದು ಸಾಲದು ಎನ್ನುವಂತೆ ಪದೇ ಪದೇ ಈ ರಾಜ್ಯದಲ್ಲಿ ಗಲಾಟೆಗಳು ಕೂಡ ಹೆಚ್ಚಾಗುತ್ತಿವೆ. ಹೀಗಿದ್ದಾಗ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುಣಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇಂತಹ ಸಮಯದಲ್ಲೇ ಮಮತಾ ಬ್ಯಾನರ್ಜಿ & ತಂಡಕ್ಕೆ ಸೋಲಿನ ಮುನ್ಸೂಚನೆ ಸಿಕ್ಕಂತೆ ಕಾಣುತ್ತಿದೆ.
ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕರ ನಡುವೆ ಕಳೆದ ಹಲವು ವರ್ಷಗಳಿಂದ ಕೂಡ ಭಾರಿ ದೊಡ್ಡ ಯುದ್ಧವೇ ನಡೆದುಕೊಂಡು ಬಂದಿದೆ. ಅದರಲ್ಲೂ ಕಳೆದ 2 ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳ ಅತಿದೊಡ್ಡ ಹಿಂಸಾಚಾರಕ್ಕೆ ಸಾಕ್ಷಿ ಆಗಿದೆ ಎಂಬ ಆರೋಪಗಳು ಕೂಡ ಇವೆ. ಈ ಸಮಯದಲ್ಲಿ ಕಾರ್ಯಕರ್ತರ ಗಲಾಟೆ ಕೂಡ ಇಡೀ ದೇಶದ ಗಮನ ಸೆಳೆದಿತ್ತು, ಹಾಗೇ ಒಂದು ಬಾರಿ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಬೇಕು ಎಂಬ ಒನ್‌ಲೈನ್ ಅಜೆಂಡಾ ಮೂಲಕ ಮುನ್ನುಗ್ಗುತ್ತಿದೆ ಬಿಜೆಪಿ ಈ ಬಾರಿ. ಅದರಲ್ಲೂ ಸತತ ಗೆದ್ದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರ ನಡೆಸಿದ್ದು, ಸಹಜವಾಗಿ ಆಡಳಿತ ವಿರೋಧಿ ಅಲೆ ಕೂಡ ಜೋರಾಗಿದೆ. ಇದನ್ನೆಲ್ಲಾ ಬಳಸಿಕೊಂಡು ಮಮತಾಗೆ ಬುದ್ಧಿ ಕಲಿಸಲು ಕಮಲ ಪಡೆ ಸನ್ನದ್ಧವಾಗಿದೆ. ಇಂತಹ ಸಮಯದಲ್ಲೇ, ಮಮತಾ ಬ್ಯಾನರ್ಜಿಗೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ.

ಮತದಾರರ ಪಟ್ಟಿ ಪರಿಷ್ಕರಣೆ ಎಫೆಕ್ಟ್!
ಮಮತಾ ಬ್ಯಾನರ್ಜಿಗೆ ಈಗ ದೊಡ್ಡ ಪೆಟ್ಟು ಏನೆಂದರೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಮತದಾರರ ಪ್ರಮಾಣ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುವ ಆತಂಕ ಕಾಡುತ್ತಿದೆ ಮಮತಾ ಬ್ಯಾನರ್ಜಿ ತಂಡಕ್ಕೆ. ಅದರಲ್ಲೂ ಪ್ರಮುಖ ವಿಧಾನಸಭೆ ಕ್ಷೇತ್ರಗಳ ಪರಿಸ್ಥಿತಿ ಕೂಡ ಕಠಿಣವಾಗಿದ್ದು, ಇಲ್ಲಿ ಗೆಲ್ಲುವುದು ಬಿಡಿ ಠೇವಣಿಗೆ ಕೂಡ ಟಿಎಂಸಿ ಪಕ್ಷ ಒದ್ದಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಬಿಜೆಪಿಯ ನಾಯಕರು ಪಕ್ಕಾ ಪ್ಲಾನ್ ಮಾಡಿ, ಟಿಎಂಸಿ ವಿರುದ್ಧ ರಣತಂತ್ರ ಹೆಣೆದು ಅಭ್ಯರ್ಥಿಗಳ ಪಡೆಯನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುವ ಮುನ್ಸೂಚನೆ ಇದೆ ಎಂಬ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ಮಮತಾ ಬ್ಯಾನರ್ಜಿಗೆ ಒಂದು ಕಡೆ ಆಂತರಿಕ ತಿಕ್ಕಾಟದ ಸಮಸ್ಯೆ ಕಾಡುತ್ತಿದ್ದರೆ, ಇನ್ನೊಂದು ಕಡೆ ಮತದಾರರ ಪಟ್ಟಿ ಪರಿಷ್ಕರಣೆ ಕೂಡ ಸವಾಲು ಸೃಷ್ಟಿಸಿದೆ ಟಿಎಂಸಿ ಪಕ್ಷಕ್ಕೆ. ಹಾಗೇ ಸತತವಾಗಿ ಆಡಳಿತ ನಡೆಸಿರುವ ಕಾರಣಕ್ಕೆ ಆಡಳಿತ ವಿರೋಧಿ ಅಲೆ ಕೂಡ ಸೃಷ್ಟಿಯಾಗಿದ್ದು, ಈ ಬಾರಿ ಎಲೆಕ್ಷನ್ ಮಮತಾ ಬ್ಯಾನರ್ಜಿ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ.












Click it and Unblock the Notifications