Get Updates
Get notified of breaking news, exclusive insights, and must-see stories!

Bengaluru: ಬೆಂಗಳೂರಲ್ಲಿ ಟೀ ಶಾಪ್‌ನಲ್ಲಿ 10 ಭಾಷೆ ಮಾತನಾಡುವವರು ಸಿಗ್ತಾರೆ: ನಾರ್ಥಿ ಯುವತಿ ವೈರಲ್ ಪೋಸ್ಟ್‌

Bengaluru: ಬೆಂಗಳೂರು ಎಂದರೆ ಒಂದು ಜಗತ್ತು. ಇಲ್ಲಿ ಟೀ ಶಾಪ್‌ನಲ್ಲಿ ಕುಂತರೂ ನಿಮಗೆ 10 ಭಾಷೆ ಕೇಳಿಸುತ್ತೆ ಎನ್ನುವ ಯುವತಿಯೊಬ್ಬರ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

ಬೆಂಗಳೂರಿನ ಭಾಷ್ಯಾ ವೈವಿಧ್ಯತೆಯ ಬಗ್ಗೆ ಯುವತಿಯೊಬ್ಬರು ಮಾಡಿರುವ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು - ಕರ್ನಾಟಕಕ್ಕೆ ಬರುವ ಪರಭಾಷೆ / ಅನ್ಯರಾಜ್ಯದವರು ಕನ್ನಡದ ಬಗ್ಗೆ ಟೀಕೆ ಮಾಡುವುದು ಹಾಗೂ ಕನ್ನಡಿಗರನ್ನು ಕೆಣಕುವುದೇ ಸುದ್ದಿಯಾಗುತ್ತಿತ್ತು. ಈ ನಡುವೆ ಯುವತಿಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿರುವ ಬರಹವು ಗಮನ ಸೆಳೆದಿದೆ.

Bengaluru

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಬಗ್ಗೆ ಕೆಟ್ಟದಾಗಿ ಅಥವಾ ಕೆಣಕುವ ರೀತಿಯಲ್ಲೇ ಪೋಸ್ಟ್‌ಗಳು ಬರುತ್ತಿದ್ದವು. ಕನ್ನಡಿಗರು ಆಕ್ರೋಶ ಹೊರ ಹಾಕಿದ ಮೇಲೆ ಕ್ಷಮೆ ಕೇಳಲಾಗುತ್ತಿತ್ತು. ಇದೀಗ ಬೆಂಗಳೂರಲ್ಲಿ ಇಡೀ ಭಾರತವನ್ನೇ ನೋಡಿದಂತೆ ಆಗುತ್ತದೆ. ಬೆಂಗಳೂರಿನ ಬೇರೆ ಯಾವ ನಗರದಲ್ಲೂ ಈ ರೀತಿ ಇಲ್ಲ ಎಂದು ನಾರ್ಥಿ ಯುವತಿಯೊಬ್ಬರು ಬರೆದುಕೊಂಡಿದ್ದಾರೆ.

ಯುವತಿಯ ವೈರಲ್ ಪೋಸ್ಟ್‌ನಲ್ಲಿ ಏನಿದೆ ?

ಪ್ರಾಂಜಲಿ (Pranjali) ಎನ್ನುವ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ಇದೀಗ ವೈರಲ್ ಆಗುತ್ತಿದೆ. ಒಂದೇ ಕಾಫಿ ಶಾಪ್‌ನಲ್ಲಿ 10 ವಿಭಿನ್ನ ಭಾಷೆಗಳನ್ನು ಕೇಳಬಹುದಾದ ಏಕೈಕ ನಗರ ಬೆಂಗಳೂರು ಆಗಿರಬಹುದು. ಪ್ರತಿಯೊಂದು ರಾಜ್ಯದ ಜನರು ಇಲ್ಲಿ ವಾಸಿಸುತ್ತಾರೆ, ಕೆಲಸ ಮಾಡುತ್ತಾರೆ ಮತ್ತು ಕನಸು ಕಾಣುತ್ತಾರೆ. ಬೆಂಗಳೂರು ಕೇವಲ ಒಂದು ನಗರವಲ್ಲ. ಇದೊಂದು ಮಿನಿ ಇಂಡಿಯಾ 🇮🇳 ಎಂದು ಪ್ರಾಂಜಲಿ ಅವರು ಬರೆದುಕೊಂಡಿದ್ದಾರೆ. ಬೆಂಗಳೂರಿನ ಭಾಷಾ ವೈವಿಧ್ಯತೆ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಬಗ್ಗೆ ಇವರು ಬರೆದುಕೊಂಡಿರುವ ಪೋಸ್ಟ್‌ ಇದೀಗ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Bengaluru ನೆಟ್ಟಿಗರು ಹೇಳಿದ್ದೇನು ?

ಇನ್ನು ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಾಂಜಲಿ, "ಮಿನಿ ಇಂಡಿಯಾ" ಇಲ್ಲ. ನಿಮ್ಮ ಹಿರಿಯರು ಕೈಗಾರಿಕೆ ಮತ್ತು ಸುರಕ್ಷತೆಯೊಂದಿಗೆ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಗಳನ್ನು ಸೃಷ್ಟಿಸುವಲ್ಲಿ ವಿಫಲರಾದರು. ಬದಲಾಗಿ, ಅವರು ನಿಜವಾದ ಅಭಿವೃದ್ಧಿಯ ಬದಲು ಬಿಮಾರು ರಾಜ್ಯಗಳಿಂದ (ನಮ್ಮ ನಿಜವಾದ ತವರು) ಬೆಂಗಳೂರಿಗೆ ಗರೀಬ್ ರಥ ರೈಲುಗಳನ್ನು ಪರಿಚಯಿಸಿದರು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಮನೋಜ್ ಎನ್ನುವವರು, ಪ್ರತಿಯೊಬ್ಬ ವಲಸಿಗರೂ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕೆಂದು ಹಾರೈಸುತ್ತೇನೆ, ಧನ್ಯವಾದಗಳು. ಬೆಂಗಳೂರು ಮತ್ತು ಕನ್ನಡಿಗರ ಬಗ್ಗೆ ಅನಗತ್ಯ ದ್ವೇಷವನ್ನು ಹರಡುವುದು ಸ್ವೀಕಾರಾರ್ಹವಲ್ಲ. ಕರ್ನಾಟಕವು ಜನಾಂಗೀಯ ಕನ್ನಡಿಗರ ತಾಯ್ನಾಡು. ಉಳಿದವರು ಭೇಟಿ ನೀಡುತ್ತಿರುವಿರಿ, ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುತ್ತಾ ಹಾಗೆಯೇ ಇರಿ. ಇದು ಮಿನಿ ಭಾರತವಾಗಿರಬಹುದು, ಆದರೆ ಆಳದಲ್ಲಿ ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದೆ, ಇದರ ಅಧಿಕೃತ ಭಾಷೆ ಕನ್ನಡ, ತುಳು, ಕೊಡವ.

ನಾವು, ಕನ್ನಡಿಗರು ಎಲ್ಲರನ್ನೂ ಮುಕ್ತ ತೋಳುಗಳಿಂದ ಸ್ವಾಗತಿಸುವಲ್ಲಿ ಅತ್ಯಂತ ಉದಾರರಾಗಿದ್ದೇವೆ. ಆದರೆ, ಇಲ್ಲಿಗೆ ಬರುವ ಜನರು ನಮ್ಮ ಸಂಸ್ಕೃತಿಯೊಂದಿಗೆ ಬೆರೆಯುವ ಬದಲು ತಮ್ಮ ಸಿದ್ಧಾಂತಗಳನ್ನು ನಮ್ಮ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ ಮತ್ತು ಭಾಷಾ ಯುದ್ಧದ ಹೆಸರಿನಲ್ಲಿ ಕಿರಿಕಿರಿಯನ್ನು ಸೃಷ್ಟಿಸುತ್ತಲೇ ಇರುತ್ತಾರೆ, ಆಗ ಸಮಸ್ಯೆ ಪ್ರಾರಂಭವಾಗುತ್ತದೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅಷ್ಟೇ 💛❤️
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಎಂದಿದ್ದಾರೆ. ಇನ್ನು ಈ ವಿಷಯವಾಗಿ ಪರ - ವಿರೋಧ ಚರ್ಚೆಗಳು ನಡೆದಿವೆ. ಕೆಲವು ಹಿಂದಿಕಾರರು ಇದಕ್ಕೆ ನೆಗೆಟಿವ್‌ ಕಾಮೆಂಟ್‌ ಸಹ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+