Get Updates
Get notified of breaking news, exclusive insights, and must-see stories!

ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ

ತಮಿಳುನಾಡು ವಿಧಾನಸಭೆ ಚುನಾವಣೆ 2026ಕ್ಕೆ ಸಂಬಂಧಿಸಿದಂತೆ ಮ್ಯಾಟ್ರಿಜ್-ಐಎಎನ್‌ಎಸ್ (Matrize-IANS) ಹೊರಹಾಕಿರುವ ಸಮೀಕ್ಷಾ ವರದಿಯು ಅಚ್ಚರಿ ಭವಿಷ್ಯ ನುಡಿದಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಪ್ರಕಟವಾಗಿರುವ ಹೊಸ ಸಮೀಕ್ಷಾ ವರದಿಯು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟವು (ಎನ್‌ಡಿಎ) ಈ ಬಾರಿ ಬಹುಮತದ ಗಡಿ ದಾಟುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಸೀಟುಗಳ ಅಂದಾಜು

ಒಟ್ಟು ಸ್ಥಾನಗಳು: 234

ಬಹುಮತಕ್ಕೆ ಬೇಕಾದ ಸ್ಥಾನಗಳು: 118

ಮೈತ್ರಿಕೂಟ & ಪಕ್ಷ: ಅಂದಾಜು ಸ್ಥಾನಗಳು

ಬಿಜೆಪಿ+(NDA): 114-127
ಡಿಎಂಕೆ+(SPA): 104-114
ಟಿವಿಕೆ (ನಟ ವಿಜಯ್ ಪಕ್ಷ): 6-12
ಇತರೆ: 1-6

Assembly Elections 2026

ಬಿಜೆಪಿ-ಎಐಎಡಿಎಂಕೆ ಮೈತ್ರಿ: ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟವು ಅಧಿಕಾರದ ಸನಿಹದಲ್ಲಿದೆ. ಇದು ಡಿಎಂಕೆ ಮೈತ್ರಿಕೂಟಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು, ಸರಳ ಬಹುಮತ ಪಡೆಯುವ ನಿರೀಕ್ಷೆಯಿದೆ.

ಡಿಎಂಕೆ ಮೈತ್ರಿಕೂಟ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ಸಮೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಬಿಜೆಪಿ ಮೈತ್ರಿಕೂಟಕ್ಕೆ ಅತ್ಯಂತ ಹತ್ತಿರದಲ್ಲಿದೆ. ಸಣ್ಣ ಪ್ರಮಾಣದ ಮತಗಳ ವ್ಯತ್ಯಾಸವೂ ಫಲಿತಾಂಶವನ್ನು ಬದಲಿಸುವ ಸಾಧ್ಯತೆ ಇದೆ.

ನಟ ವಿಜಯ್ ಅವರ ಎಂಟ್ರಿ: ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು 6ರಿಂದ 12 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಈ ಸಮೀಕ್ಷೆಯ ಪ್ರಕಾರ ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟ ಹಾಗೂ ಬಿಜೆಪಿ ನೇತೃತ್ವದ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡಲಿದ್ದು, ಬಿಜೆಪಿ ಮೈತ್ರಿಕೂಟವು ಅಲ್ಪ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಡಿಎಂಕೆ ನೇತೃತ್ವದ ಮೈತ್ರಿಕೂಟದ ನಡುವೆ ಅತ್ಯಂತ ಸಮೀಪದ ಪೈಪೋಟಿ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ.

Tamil Nadu Assembly Election: ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಏಪ್ರಿಲ್ 23ಕ್ಕೆ ಮತದಾನ, ಬಲಾಬಲ ಹೇಗಿದೆ?
Tamil Nadu Assembly Election: ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಏಪ್ರಿಲ್ 23ಕ್ಕೆ ಮತದಾನ, ಬಲಾಬಲ ಹೇಗಿದೆ?

ಪ್ರಮುಖ ಎರಡು ಮೈತ್ರಿಕೂಟಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೂ, ಸಣ್ಣ ಪಕ್ಷಗಳು ಸೀಮಿತ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಮೂಲಕ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರುವ ಸಾಧ್ಯತೆಯನ್ನು ಸಮೀಕ್ಷೆ ಅಲ್ಲಗಳೆಯುವಂತಿಲ್ಲ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಸ್ತುತ ಹೊರಬಿದ್ದಿರುವ ಈ ಸಮೀಕ್ಷೆ ವರದಿಯು ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸ್ಟಾಲಿನ್ ನೇತೃತ್ವದ ಡಿಎಂಕೆಗೆ ಬಿಜೆಪಿ ಮೈತ್ರಿಕೂಟವು ಪ್ರಬಲ ಸವಾಲೊಡ್ಡಿರುವುದು ಸ್ಪಷ್ಟವಾಗಿದೆ.

ಕೇರಳ: ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್‌ಡಿಎಫ್ ಮುನ್ನಡೆ

ಕೇರಳದ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಇತರ ಮೈತ್ರಿಕೂಟಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಚುನಾವಣೆಗೆ ಅತ್ಯಂತ ವ್ಯವಸ್ಥಿತವಾಗಿ ಸಜ್ಜಾಗಿರುವ ಎಲ್‌ಡಿಎಫ್, ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ವೇಗವನ್ನು ಪ್ರದರ್ಶಿಸುತ್ತಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಸಿಪಿಐ ಪಾತ್ರವಾಗಿದೆ. ತನ್ನ ಪಾಲಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಎಲ್‌ಡಿಎಫ್ ಮೈತ್ರಿಕೂಟದಲ್ಲಿ ಚಟುವಟಿಕೆಗೆ ಚಾಲನೆ ನೀಡಿದೆ.

Assembly Elections 2026

ಮೈತ್ರಿಕೂಟದ ಪ್ರಬಲ ಪಕ್ಷವಾದ ಸಿಪಿಎಂ, ತಾನು ಸ್ಪರ್ಧಿಸಲಿರುವ ಒಟ್ಟು 86 ಕ್ಷೇತ್ರಗಳ ಪೈಕಿ ಈಗಾಗಲೇ 75 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಉಳಿದ 11 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ. ರಾಜ್ಯದ ಮೂರು ಪ್ರಮುಖ ಮೈತ್ರಿಕೂಟಗಳ ಪೈಕಿ ಎಲ್‌ಡಿಎಫ್ ಅತ್ಯಂತ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತಿದೆ. ಚುನಾವಣಾ ದಿನಾಂಕ ಹತ್ತಿರವಾಗುತ್ತಿರುವಂತೆಯೇ ಎಲ್‌ಡಿಎಫ್ ತನ್ನ ಬಲವನ್ನು ಪ್ರದರ್ಶಿಸುತ್ತಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.

ಬಂಗಾಳ ರಣಕಣ: ಮತದಾರರ ಸೆಳೆಯಲು ಮಮತಾ ಬ್ಯಾನರ್ಜಿ ಹೊಸ ತಂತ್ರ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಅವಧಿಗೆ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ, 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷಗಳ ನಡುವೆ, ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ತಮ್ಮ ಹಳೆಯ 'ಬೀದಿ ಹೋರಾಟಗಾರ್ತಿ'ಯ ರೂಪಕ್ಕೆ ಮರಳಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿಯಾಗಿದ್ದೂ ವಿರೋಧ ಪಕ್ಷದ ನಾಯಕಿಯಂತೆ ಬೀದಿಗಿಳಿದು ಹೋರಾಟ ಮಾಡುವ ಮಮತಾ ಅವರ ಶೈಲಿ, ಬಂಗಾಳದ ಜನರ ಮೇಲೆ ಹೊಸ ಪ್ರಭಾವ ಬೀರುತ್ತಿದೆ. ಸಾಂಪ್ರದಾಯಿಕವಾಗಿ ಟಿಎಂಸಿ (TMC) ಪಕ್ಷದ ಭದ್ರಕೋಟೆಯಾಗಿರುವ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಜನಸಂಖ್ಯಾ ಸಮತೋಲನ ಬದಲಾಗುತ್ತಿರುವುದು ಮಮತಾ ಅವರಿಗೆ ಹೊಸ ಸವಾಲೊಡ್ಡಿದೆ. 2026ರ ಚುನಾವಣೆ ಕೇವಲ ಅಧಿಕಾರದ ಪ್ರಶ್ನೆಯಲ್ಲ, ಬದಲಾಗಿ ಬಂಗಾಳದ ಅಸ್ಮಿತೆ ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆಯ ದೊಡ್ಡ ಪರೀಕ್ಷೆಯಾಗಿ ಮಮತಾ ಬ್ಯಾನರ್ಜಿ ಅವರಿಗೆ ಎದುರಾಗಿದೆ.

Assembly Elections 2026

ಬಿಜೆಪಿಗೆ ವರದಾನ

ಪಶ್ಚಿಮ ಬಂಗಾಳದಲ್ಲಿ ಕೇವಲ ಎರಡು ಹಂತಗಳಲ್ಲಿ ಚುನಾವಣೆ ನಡೆಸುವ ನಿರ್ಧಾರವು ಬಿಜೆಪಿ ಪಾಲಿಗೆ ವರದಾನವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಈ ಬದಲಾವಣೆಯು ತಮಗೆ ದೊಡ್ಡ ಮಟ್ಟದ ಚುನಾವಣಾ ಲಾಭ ತಂದುಕೊಡಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಕಳೆದ ಚುನಾವಣೆಗಳಲ್ಲಿ ಹಂತಗಳು ಹೆಚ್ಚಿದ್ದಾಗ, ಮತದಾನ ಮುಗಿದ ಪ್ರದೇಶಗಳಿಂದ ಟಿಎಂಸಿ ಕಾರ್ಯಕರ್ತರು ಮುಂದಿನ ಹಂತದ ಮತದಾನ ನಡೆಯುವ ಪ್ರದೇಶಗಳಿಗೆ ತೆರಳಿ ಪಕ್ಷದ ಪರ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ದಕ್ಷಿಣ ಬಂಗಾಳ ಮತ್ತು ಉತ್ತರ ಬಂಗಾಳದಲ್ಲಿ ಕೇವಲ ಎರಡು ಹಂತಗಳಲ್ಲಿ ಚುನಾವಣೆ ನಡೆಯುವುದರಿಂದ, ಒಂದೆಡೆಯಿಂದ ಮತ್ತೊಂದೆಡೆಗೆ ಕಾರ್ಯಕರ್ತರ ಸಂಚಾರ ಕಷ್ಟವಾಗಲಿದೆ.

ಹಂತಗಳು ಕಡಿಮೆಯಾದ ಕಾರಣ, ಬಿಜೆಪಿಯ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಬಂಗಾಳದಲ್ಲಿ ಹೆಚ್ಚು ಸಮಯ ಪ್ರಚಾರ ಮಾಡಲು ಅವಕಾಶ ಸಿಗಲಿದೆ. ಐತಿಹಾಸಿಕವಾಗಿ ದಕ್ಷಿಣ ಬಂಗಾಳದಲ್ಲಿ ಬಿಜೆಪಿ ಕೊಂಚ ಹಿನ್ನಡೆಯಲ್ಲಿದ್ದು, ಈ ಬಾರಿ ಅಲ್ಲಿ ಹೆಚ್ಚಿನ ಶಕ್ತಿ ತುಂಬಲು ಈ ವೇಳಾಪಟ್ಟಿ ಪೂರಕವಾಗಿದೆ. ಏಪ್ರಿಲ್ ಅಂತ್ಯದಲ್ಲಿ ಚುನಾವಣೆ ಇರುವುದರಿಂದ ಬಿಜೆಪಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಮತ್ತು ಪ್ರಚಾರದ ಕಾರ್ಯತಂತ್ರ ರೂಪಿಸಲು ಹೆಚ್ಚಿನ ಸಮಯ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+