Rain In USA: ಅಮೆರಿಕದಲ್ಲಿ ಗುಡುಗು ಸಹಿತ ಮಳೆ, ಕಡಲ ತೀರಗಳಲ್ಲಿ ಪ್ರವಾಹ- 2,600 ಕ್ಕೂ ಹೆಚ್ಚು ವಿಮಾನಗಳ ರದ್ದು
ವಾಷಿಂಗ್ಟನ್, ಜುಲೈ 17: ಅಮೆರಿಕದಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಕಡಲ ತೀರಗಳಲ್ಲಿ ಪ್ರವಾಹ ಉಂಟಾಗಿದೆ. ಗುಡುಗು ಸಹಿತ ಸುರಿಯುತ್ತಿರುವ ಮಳೆಯು ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ 2,600 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 8,000 ವಿಮಾನಗಳು ವಿಳಂಬವಾಗಿವೆ ಎಂದು ವರದಿಯಾಗಿದೆ.
ವಿಮಾನಗಳ ರದ್ದತಿ ಮತ್ತು ವಿಳಂಬಗಳು ಈಶಾನ್ಯ ಅಮೆರಿಕದಲ್ಲಿ ಹೆಚ್ಚು ವರದಿಯಾಗಿವೆ. ಇದೇ ಪ್ರದೇಶದಿಂದ 1320 ವಿಮಾನಗಳನ್ನು ರದ್ದು ಮಾಡಲಾಗಿದೆ. ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 350 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಎನ್‌ಬಿಸಿ ನ್ಯೂಸ್ ಹೇಳಿದೆ.

ತೀವ್ರ ಹವಾಮಾನದ ಹಿನ್ನೆಲೆಯಲ್ಲಿ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣ ಮತ್ತು ಲಾ ಗಾರ್ಡಿಯನ್ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ವಿಮಾನಯಾನ ಸಂಸ್ಥೆಗಳು ಟ್ವಿಟರ್‌ನಲ್ಲಿ ಸಲಹೆಗಳನ್ನು ಪೋಸ್ಟ್ ಮಾಡಿದ್ದು, ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ವಿಮಾನದ ಸಮಯ ಮತ್ತು ಹವಾಮಾನ ಸ್ಥಿತಿಯನ್ನು ಪರಿಶೀಲಿಸುವಂತೆ ಪ್ರಯಾಣಿಕರನ್ನು ಒತ್ತಾಯಿಸಿವೆ.

ಜೆಎಫ್‌ಕೆ ಏರ್‌ಪೋರ್ಟ್‌ನಲ್ಲಿ 318 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 426 ವಿಮಾನಗಳು ವಿಳಂಬವಾಗಿವೆ. ಲಾ ಗಾರ್ಡಿಯಾದಲ್ಲಿ ಏರ್‌ಪೋರ್ಟ್‌ನಲ್ಲಿ 270 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 292 ವಿಮಾನಗಳು ವಿಳಂಬವಾಗಿದೆ. ಬೋಸ್ಟನ್ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 259 ವಿಮಾನಗಳು ರದ್ದಾಗಿದ್ದು, 459 ವಿಳಂಬವಾಗಿದೆ ಎಂದು ವರದಿಯಾಗಿದೆ.
ಈಶಾನ್ಯ ಅಮೆರಿಕದದ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಉಂಟಾಗಿದೆ. ರಾಷ್ಟ್ರೀಯ ಹವಾಮಾನ ಇಲಾಖೆ ಪ್ರಕಾರ, ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್, ಪೆನ್ಸಿಲ್ವೇನಿಯಾ, ಮ್ಯಾಸಚೂಸೆಟ್ಸ್ ಮತ್ತು ವರ್ಮೊಂಟ್‌ನ ಕೆಲವು ಭಾಗಗಳು ಭೀಕರ ಪ್ರವಾಹ ಸಂಭವಿಸಿದೆ.

ಭಾನುವಾರ ಬೆಳಿಗ್ಗೆ ಕನೆಕ್ಟಿಕಟ್, ಮೈನೆ, ಮ್ಯಾಸಚೂಸೆಟ್ಸ್, ನ್ಯೂ ಹ್ಯಾಂಪ್‌ಶೈರ್, ನ್ಯೂಯಾರ್ಕ್ ಮತ್ತು ರೋಡ್ ಐಲೆಂಡ್‌ನ ಭಾಗಗಳಲ್ಲಿ ಬಿರುಗಾಳಿ ಬೀಸುತ್ತಿದೆ. ಇದು ಹಾನಿಯನ್ನು ಉಂಟು ಮಾಡಿದೆ.
ವಿಪರ್ಯಾಸವೆಂದರೆ, ಪಶ್ಚಿಮ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿದೆ.
ನೈಋತ್ಯ, ಪಶ್ಚಿಮ ಗಲ್ಫ್ ಕರಾವಳಿ ಮತ್ತು ದಕ್ಷಿಣ ಫ್ಲೋರಿಡಾದ ಭಾಗಗಳಲ್ಲಿ ಶಾಖದ ಅಲೆಗಳು ಬೀಸುತ್ತಿವೆ. ಮುಂಬರುವ ವಾರದಲ್ಲಿ ತಾಪಮಾನವು ಲಕ್ಷಾಂತರ ಜನರಿಗೆ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗಿದೆ.
ಭಾನುವಾರ ಮಧ್ಯಾಹ್ನದ ಹೊತ್ತಿಗೆ, ಕ್ಯಾಲಿಫೋರ್ನಿಯಾದ ಪ್ರಸಿದ್ಧ ಡೆತ್ ವ್ಯಾಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ವರದಿಯಾಗಿದೆ.












Click it and Unblock the Notifications