ಹ್ಯೂಸ್ಟನ್ ಹೌಡಿ-ಮೋದಿ ಐತಿಹಾಸಿಕ ಸಂಭ್ರಮದ ಸುತ್ತಾ ಮುತ್ತಾ
ಮೋದಿ ಅವರು ಅಮೆರಿಕದ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಹೌಡಿ-ಮೋದಿ ಎಂದು ಕರೆಯಲಾಗುತ್ತಿದ್ದು, ಸೆ. 22 ರಂದು ಹೌಸ್ಟನ್ ನಗರದ ಎನ್ಆರ್‌ಜಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ 50 ಸಾವಿರ ಭಾರತೀಯರು ಟಿಕೆಟ್ ರಿಸರ್ವ್ ಮಾಡಿಸಿಕೊಂಡಿದ್ದಾರೆ.
ಸಾಕಷ್ಟು ಜನರಿಗೆ ಹೌಡಿ ಎಂದರೆ ಗೊತ್ತಿಲ್ಲ. ಹೌಡಿ ಎಂದರೆ ದಕ್ಷಿಣ ಪೂರ್ವ ಅಮೆರಿಕದಲ್ಲಿ ನಿತ್ಯ ಬಳಕೆಯ ಸಾಮಾನ್ಯ ಪದ ಆಗಿದ್ದು 'ಹೌ ಡು ಯು ಡೂ' ಎಂಬುದನ್ನು ಸಂಕ್ಷಿಪ್ತವಾಗಿ ಹೌಡಿ ಎಂದು ಕರೆಯಲಾಗುತ್ತಿದೆ. ಈ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೂಡ ಪಾಲ್ಗೊಳ್ಳಲಿರುವುದು ವಿಶೇಷ. ಅಮೇರಿಕಾ ದ ಅದ್ಯಕ್ಷ ಟ್ರಂಪ್ ಅವರ ಚುನಾವಣಾ ಪ್ರಚಾರ ಭಾಷಣಗಳಿಗೂ ಇಷ್ಟೊಂದು ದೊಡ್ಡ ಪ್ರಮಾಣದ ಜನಸಂದಣಿ ಸೇರುತ್ತಿರಲಿಲ್ಲ.
ಐದು ವರ್ಷದ ಹಿಂದೆ ಕೂಡ ಮೋದಿ ಅಮೇರಿಕದ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆ ಸಮಾರಂಭ ನಡೆದಿದ್ದು ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಿನಲ್ಲಿ. ಆಗ ಸೇರಿದ್ದ ಜನರ ಒಟ್ಟು ಸಂಖ್ಯೆ 20 ಸಾವಿರ ಆಗಿದ್ದು ಈಗ ಅದರ ಮೂರು ಪಟ್ಟು ಹೆಚ್ಚು ಜನ ಸೇರುತ್ತಿರುವುದು ಮೋದಿ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ.
ಮುಂದಿನ ವರ್ಷ ಅಮೆರಿಕದಲ್ಲಿ ಅದ್ಯಕ್ಷರ ಚುನಾವಣೆ ನಡೆಯಲಿದ್ದು ಡೆಮೊಕ್ರಾಟಿಕ್ ಪಕ್ಷದ ಅದ್ಯಕ್ಷೀಯ ಅಭ್ಯರ್ಥಿ ಮೊದಲ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರು ಹೌಡಿ ಮೋದಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದು ಇದರಲ್ಲಿ ಪಾಲ್ಗೊಳ್ಳಲಾಗದಿದ್ದಕ್ಕೆ ವಿಷಾದಿಸಿದ್ದಾರೆ.

ಮಳೆ ಭೀತಿ ನಡುವೆ ಹೌಡಿ ಮೋದಿ
ಅಮೆರಿಕದಲ್ಲಿ ಸುಮಾರು 44.5 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇದು ವಿಶ್ವದ ಇತರ ಯಾವುದೇ ದೇಶಗಳಿಗಿಂತ ಜಾಸ್ತಿ ಇದ್ದು ಇಲ್ಲಿನ ಅನಿವಾಸಿ ಭಾರತೀಯರಲ್ಲಿ ಶ್ರೀಮಂತ ವರ್ಗದವರೇ ಹೆಚ್ಚಿದ್ದಾರೆ. ಅಮೇರಿಕಾದಲ್ಲಿ ಇದು ಮೋದಿ ಅವರ ನಾಲ್ಕನೇ ಭಾಷಣ ಆಗಲಿದೆ. ಕಳೆದ ತಿಂಗಳಷ್ಟೇ ಜಮ್ಮು ಮತ್ತು ಕಾಶೀರದಲ್ಲ್ಲಿನ 370 ನೇ ವಿಧಿಯನ್ನು ತೆಗೆದು ಹಾಕಿದ ನಂತರ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಇದು ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ.
ಮೋದಿಯ ಈ ಕಾರ್ಯಕ್ರಮದ ಯಶಸ್ಸಿಗೆ ಸುಮಾರು 1500 ಸ್ವಯಂ ಸೇವಕರು ಹಗಲಿರುಳೂ ಶ್ರಮಿಸುತಿದ್ದಾರೆ. ಆದರೆ ಶುಕ್ರವಾರ ಹ್ಯೂಸ್ಟನ್ ನಗರದಲ್ಲಿ ವ್ಯಾಪಕ ಮಳೆ ಅಗುತ್ತಿದ್ದು, ನಗರದ ವಿಮಾನ ನಿಲ್ದಾಣ ಜಲಾವೃತಗೊಂಡಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಗಳ ಹಾರಾಟಕ್ಕೆ ತೊಂದರೆ ಆಗದಿದ್ದರೂ ಹೊರಗೆ ವಾಹನಗಳ ಓಡಾಟಕ್ಕೆ ರಸ್ತೆಯಲ್ಲಿ ನಿಂತಿರುವ ನೀರು ಅಡ್ಡಿಯಾಗಲಿದೆ.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಅವರೂ ಪಾಲ್ಗೊಳ್ಳುತ್ತಿರುವುದರಿಂದ ಸಹಜವಾಗೇ ಬಾರತ ಸರ್ಕಾರ 370 ನೇ ವಿಧಿಯನ್ನು ತೆಗೆದು ಹಾಕಿರುವುದನ್ನು ಬೆಂಬಲಿಸಿದಂತೆಯೇ ಅಗಲಿದೆ. ಜತೆಗೇ ಅಮೆರಿಕದ ಅಧ್ಯಕ್ಷರು ಭಾರತದೊಂದಿಗಿನ ಸ್ನೇಹ ವೃದ್ದಿಗೆ ಹೆಚ್ಚಿನ ವ್ಯಾಪಾರ -ಒಪ್ಪಂದಗಳನ್ನೂ ಮಾಡಿಕೊಳ್ಳುವ, ಆಮದಾಗುವ ಭಾರತೀಯ ವಸ್ತುಗಳ ಮೇಲಿನ ತೆರಿಗೆ ಕಡಿತವನ್ನೂ ಘೋಷಿಸಿವ ಸಾದ್ಯತೆ ಇದ್ದೇ ಇದೆ.
ಜಮ್ಮು ಕಾಶ್ಮೀರದ ವಿಶೇಷಾಧಿಕಾರದ 370 ನೇ ವಿಧಿಯನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಅಮೆರಿಕದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಮೋದಿ ವಿರುದ್ದ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಅವರಲ್ಲದೆ ಖಾಲಿಸ್ತಾನ ಬೆಂಬಲಿಸುವ ಸಿಖ್ ಸಂಘಟನೆ ಮತ್ತು ಮೋದಿ ವಿರೋದಿ ಗುಂಪು ಇದಕ್ಕಾಗಿ ಪ್ರತಿಭಟನಾಕಾರರನ್ನು ಸೇರಿಸಲು 16 ಮಸೀದಿಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ಚಿಟರ್ ನಲ್ಲಿ ಅದರ ಆಯೋಜಕರು ಪ್ರಕಟಿಸಿದ್ದಾರೆ.

ಅಮೆರಿಕದಲ್ಲಿರುವ ಪಾಕಿಸ್ತಾನದ ನಾಗರಿಕರಿಂದ ಪ್ರತಿಭಟನೆ
ಈ ಪ್ರತಿಭಟನೆಗೆ ಪಾಕಿಸ್ತಾನದ ಐಎಸ್ಐ ಮೂಲಕ ಹಣಕಾಸಿನ ನೆರವು ನೀಡುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಮೆರಿಕದಲ್ಲಿರುವ ಪಾಕಿಸ್ತಾನದ ನಾಗರಿಕರು ಈ ಪ್ರತಿಭಟನೆಯನ್ನು ಬೆಂಬಲಿಸುತಿದ್ದಾರೆ. ಪ್ರಾರ್ಥನಾ ಮಂದಿರಗಳನ್ನು ರಾಜಕೀಯದ ಪ್ರತಿಭಟನೆಗೆ ಬಳಸಿಕೊಳ್ಳುತ್ತಿರುವ ಕುರಿತು ಅಮೇರಿಕನ್ನರಿಂದ ವಿರೋಧವೂ ವ್ಯಕ್ತವಾಗಿದೆ.

ಅಮೆರಿಕದ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ
ಅಮೆರಿಕದ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ದೇಶದ ಬಹುತೇಕ ಟಿವಿ ಚಾನೆಲ್ ಗಳು ನೇರ ಪ್ರಸಾರ ಮಾಡಲಿವೆ. ಅಮೇರಿಕದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿರುವ ಈ ಕಾರ್ಯಕ್ರಮ ( ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30 ಗಂಟೆ)ಮಧ್ಯಾಹ್ನ 2 ಗಂಟೆಯವರೆಗೂ ನಡೆಯಲಿದೆ. ವಿಶ್ವಾದ್ಯಂತ ಭಾರತೀಯರು ಈ ಕಾರ್ಯಕ್ರಮ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
-
ಮಧ್ಯಪ್ರಾಚ್ಯ ದೇಶಗಳಿಗೆ ಸಹಾಯ ಮಾಡುತ್ತಿರುವ ಉಕ್ರೇನ್, ರೊಚ್ಚಿಗೆದ್ದ ಇರಾನ್ ಸೇನೆ | Iran Conflict -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ












Click it and Unblock the Notifications