ಭಾರತ ಒಂದು ಅದ್ಭುತ ಪ್ರಜಾಪ್ರಭುತ್ವ ದೇಶ: ಮೋದಿ ಭೇಟಿಗೆ ಮುನ್ನ ಅಮೆರಿಕ ಹೊಗಳಿಕೆ
ಭಾರತವು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಅಮೆರಿಕ ಹಾಡಿ ಹೊಗಳಿದೆ. ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯತಂತ್ರದ ಸಂವಹನ ಸಂಯೋಜಕ ಜಾನ್ ಕಿರ್ಬಿ ವಾಷಿಂಗ್ಟನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಭಾರತ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಯಾರಾದರೂ ನವದೆಹಲಿಗೆ ಹೋದರೆ ಅದನ್ನು ಸ್ವತಃ ನೋಡಬಹುದಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿಯ ಬಗ್ಗೆ ಆರೋಗ್ಯಕರ ಚರ್ಚೆಯಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಜಾನ್ ಕಿರ್ಬಿ ಹೇಳಿದರು. ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡುವ ಮೊದಲು ಈ ಹೇಳಿಕೆ ಬಂದಿದೆ.

ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, "ನಾವು ಈ ಬಗ್ಗೆ ಮಾತನಾಡಲೂ ಎಂದೂ ಹಿಂಜರಿಯುವುದಿಲ್ಲ. ನೀವು ಅದನ್ನು ಸ್ನೇಹಿತರೊಂದಿಗೆ ಮಾಡಬಹುದು. ಪ್ರಪಂಚದಲ್ಲಿ ಯಾವುದೇ ದೇಶದ ಮೇಲೆ ನಾವು ಹೊಂದಿರುವ ಕಾಳಜಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈ ಭೇಟಿ ನಿಜವಾಗಿಯೂ ಈಗ ಇರುವ ಸಂಬಂಧವನ್ನು ಮುಂದುವರೆಸುವ ಕುರಿತಾಗಿದೆ ಮುಂದೆಯೂ ಅತ್ಯುತ್ತಮ ಬಾಂಧವ್ಯವನ್ನು ಮುಂದುವರೆಸುವ ಬಗ್ಗೆ ನಾವು ಆಶಿಸುತ್ತೇವೆ" ಎಂದು ಹೇಳಿದರು.
ಭಾರತವು ಅನೇಕ ಹಂತಗಳಲ್ಲಿ ಅಮೆರಿಕ ದೇಶದ ಜೊತೆ ಪಾಲುದಾರ ಎಂದು ಅವರು ಹೇಳಿದರು. ಶಾಂಗ್ರಿ -ಲಾ ಕಾರ್ಯದರ್ಶಿ ಆಸ್ಟಿನ್ ಅವರು ಭಾರತಕ್ಕೆ ಹೆಚ್ಚುವರಿ ರಕ್ಷಣಾ ಸಹಕಾರವನ್ನು ಘೋಷಿಸಿರುವುದನ್ನು ನೀವು ನೋಡಿದ್ದೀರಿ, ಈಗ ನಾವು ಮುಂದುವರಿಸಲಿದ್ದೇವೆ. ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಆರ್ಥಿಕ ವ್ಯವಹಾರ ಇದೆ. ಭಾರತವು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ" ಎಂದು ಅವರು ಹೇಳಿದರು.
ಮೋದಿಗಾಗಿ ಅಮೆರಿಕ ಎದುರು ನೋಡುತ್ತಿದೆ
"ಭಾರತ ಮತ್ತು ಅಮೆರಿಕನಡುವೆ ದ್ವಿಪಕ್ಷೀಯವಾಗಿ ಮಾತ್ರವಲ್ಲ ಬಹುಪಕ್ಷೀಯವಾಗಿ ಹಲವು ಕಾರಣಗಳಿಂದ ಉತ್ತಮ ಬಾಂಧವ್ಯ ಹೊಂದಿವೆ. ಅಮೆರಿಕ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದಾರೆ. ಎಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಲು ಮತ್ತು ಭಾರತ ಅಮೆರಿಕ ಪಾಲುದಾರಿಕೆ ಮತ್ತು ಸ್ನೇಹವನ್ನು ಮುಂದುವರೆಸಲು ಅಮೆರಿಕ ಬದ್ದವಾಗಿದೆ" ಎಂದು ಕಿರ್ಬಿ ಹೇಳಿದರು.
ಜೂನ್ 22ಕ್ಕೆ ಮೋದಿ ಅಮೆರಿಕ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ದೇಶಕ್ಕೆ ತಮ್ಮ ಅಧಿಕೃತ ರಾಜ್ಯ ಪ್ರವಾಸದ ವೇಳೆ ಮಾತನಾಡಲಿದ್ದಾರೆ ಮತ್ತು ಭಾರತದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಉಭಯ ದೇಶಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಕುರಿತು ಮಾತನಾಡಲಿದ್ದಾರೆ.
ಅಧ್ಯಕ್ಷ ಜೋ ಬಿಡೆನ್ ಮತ್ತು ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಜೂನ್ 21-24 ರವರೆಗೆ ಅವರ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಪ್ರಮುಖ ಉದ್ಯಮಿಗಳೊಂದಿಗಿನ ಸಭೆಗಳು ಮತ್ತು ಹಲವಾರು ಸಮುದಾಯ ಕಾರ್ಯಕ್ರಮಗಳನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications