Get Updates
Get notified of breaking news, exclusive insights, and must-see stories!

Vladimir Putin: ರಷ್ಯಾ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಖಲೆಯ ಗೆಲುವು!

ಮಾಸ್ಕೊ, ಮಾರ್ಚ್ 18: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ರಷ್ಯಾದ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡಿದ್ದಾರೆ. ಮತದಾನ ಕೇಂದ್ರಗಳಲ್ಲಿನ ಪ್ರತಿಭಟನೆಯ ಬಳಿಕವೂ ಬರೋಬ್ಬರಿ 87.8% ಮತಗಳನ್ನು ಗಳಿಸಿ ಬೀಗಿದ್ದಾರೆ.

ಚುನಾವಣೆ ವೇಳೆ ಸಾವಿರಾರು ವಿರೋಧಿಗಳು ಮತದಾನ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮತದಾನವು ಮುಕ್ತ ಮತ್ತು ನ್ಯಾಯಯುತವಾಗಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಆರೋಪಿಸಿದೆ. ಇವೆಲ್ಲದರ ನಡುವೆಯೂ ಸುಮಾರು 88% ಮತಗಳನ್ನು ಪಡೆದು ಮತ್ತೆ ತಾವೇ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ ವ್ಲಾಡಿಮಿರ್ ಪುಟಿನ್!.

Vladimir Putin Wins Russia Presidential Polls With 88 Votes

1999 ರಲ್ಲಿ ಅಧಿಕಾರಕ್ಕೆ ಏರಿದ ವ್ಲಾಡಿಮಿರ್ ಪುಟಿನ್

ಮಾಜಿ ಕೆಜಿಬಿ ಲೆಫ್ಟಿನೆಂಟ್ ಕರ್ನಲ್ ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷರಾಗಿ 1999 ರಲ್ಲಿ ಅಧಿಕಾರಕ್ಕೆ ಏರಿದದ್ದರು. ಅಂದಿನಿಂದ ರಷ್ಯಾ ಮೇಲೆ ಹಿಡಿತ ಆ ಸಾಧಿಸಿರುವ ಅವರ ವಿರುದ್ಧ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೂ, ಗದ್ದುಗೆಯಿಂದ ಕೆಳಗೆ ಇಳಿದಿಲ್ಲ. ಈ ಬಾರಿಯೂ ಅವರೇ ಅಧಿಖಾರ ವಹಿಸಿಕೊಂಡಿದ್ದು, ಮುಂದಿನ ಆರು ವರ್ಷಗಳ ಅವಧಿಯಲ್ಲಿ ಸುಲಭವಾಗಿ ಆಡಳಿತ ನಡೆಸಲಿದ್ದಾರೆ.

ವ್ಲಾಡಿಮಿರ್ ಪುಟಿನ್ ಚುನಾವಣೆಗೆ 87.8% ಮತಗಳನ್ನು ಗಳಿಸಿದ್ದು, ಇದು ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ ಎಂದು ಪೋಲ್ಸ್ಟರ್ ಪಬ್ಲಿಕ್ ಒಪಿನಿಯನ್ ಫೌಂಡೇಶನ್ (FOM) ಸಮೀಕ್ಷೆ ಹೇಳಿದೆ. ರಷ್ಯಾದ ಸಾರ್ವಜನಿಕ ಅಭಿಪ್ರಾಯ ಸಂಶೋಧನಾ ಕೇಂದ್ರ (VCIOM) ವ್ಲಾಡಿಮಿರ್ ಪುಟಿನ್ 87% ಮತ ಗಳಿಸಿದ್ದಾರೆ ಎಂದಿದೆ.

Vladimir Putin Wins Russia Presidential Polls With 88 Votes

ಇನ್ನು, "ಚುನಾವಣೆಗಳು ನಿಸ್ಸಂಶಯವಾಗಿ ಮುಕ್ತ ಮತ್ತು ನ್ಯಾಯಯುತವಾಗಿಲ್ಲ, ವ್ಲಾಡಿಮಿರ್ ಪುಟಿನ್ ಅವರು ರಾಜಕೀಯ ವಿರೋಧಿಗಳನ್ನು ಹೇಗೆ ಬಂಧಿಸಿದ್ದಾರೆ ಮತ್ತು ಇತರರು ಅವರ ವಿರುದ್ಧ ಸ್ಪರ್ಧಿಸದಂತೆ ತಡೆಯುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ" ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಹೇಳಿದ್ದಾರೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮರು ಆಯ್ಕೆ ರಷ್ಯಾದ ಮೇಲೆ ಅವರ ನಿಯಂತ್ರಣವನ್ನು ಎತ್ತಿ ತೋರಿಸುತ್ತಿದೆ. ರಷ್ಯನ್ನರ ಅಗಾಧ ಬೆಂಬಲವನ್ನು ತಾವು ಹೊಂದಿದ್ದಾರೆಂದು ತೋರಿಸಲು ಈ ಚುನಾವಣೆ ಮೂಲಕ ಬಯಸಿದ್ದರು ಎಂದು ತಿಳಿಸಿದೆ. ಮತದಾನ ಮುಕ್ತಾಯವಾದಾಗ ರಾಷ್ಟ್ರವ್ಯಾಪಿ ಮತದಾನವು 74.22% ಆಗಿತ್ತು, 2018 ರ 67.5% ಮತದಾನವಾಗಿತ್ತು. ಅದನ್ನೂ ಈ ಬಾರಿ ಮುರಿದು ಹೊಸ ದಾಖಲೆ ಬರೆದಿದೆ ರಷ್ಯಾ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಆರ್ಕ್ಟಿಕ್ ಜೈಲಿನಲ್ಲಿ ನಿಧನರಾದ ವ್ಲಾಡಿಮಿರ್ ಪುಟಿನ್ ಅವರ ಪ್ರಮುಖ ಎದುರಾಳಿ ಅಲೆಕ್ಸಿ ನವಲ್ನಿ ಅವರ ಬೆಂಬಲಿಗರು, ಭ್ರಷ್ಟ ನಿರಂಕುಶಾಧಿಕಾರಿ ಎಂದು ವ್ಲಾಡಿಮಿರ್ ಪುಟಿನ್ ಅವರನ್ನು ಕರೆದಿದ್ದಾರೆ, ಜೊತೆಗೆ ಅವರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಪ್ರತಿಭಟನೆಗೆ ಬರುವಂತೆ ರಷ್ಯನ್ನರಿಗೆ ಕರೆ ನೀಡಿದ್ದರು.

ಹತ್ತಾರು ಸಾವಿರ ಪೊಲೀಸ್ ಮತ್ತು ಭದ್ರತಾ ಅಧಿಕಾರಿಗಳನ್ನು ಒಳಗೊಂಡ ಅತ್ಯಂತ ಬಿಗಿಯಾದ ಭದ್ರತೆಯ ನಡುವೆ ರಷ್ಯಾದ 114 ಮಿಲಿಯನ್ ಮತದಾರರಲ್ಲಿ ಎಷ್ಟು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬುದಕ್ಕೆ ಯಾವುದೇ ಲೆಕ್ಕವಿಲ್ಲ. ಆದರೂ, ರಾಯಿಟರ್ಸ್ ವರದಿಯಂತೆ ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಯೆಕಟೆರಿನ್‌ಬರ್ಗ್‌ನ ಮತದಾನ ಕೇಂದ್ರಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ ವಿಶೇಷವಾಗಿ ಯುವಜನರು ಸೇರಿದ್ದರು ಎಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+