ಹ್ಯೂಸ್ಟನ್ ಹೌಡಿ: ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡ

Recommended Video

      ಮೋದಿ ಸಮ್ಮುಖದಲ್ಲಿ ನೆಹರೂ ಗುಣಗಾನ ಮಾಡಿದ ಅಮೆರಿಕ ಮುಖಂಡ

      ಹ್ಯೂಸ್ಟನ್, ಸೆ 23: ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಭಾನುವಾರ (ಸೆ 22) ನಡೆದ 'ಹೌಡಿ ಮೋದಿ' ಕಾರ್ಯಕ್ರಮ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಐವತ್ತು ಸಾವಿರದಷ್ಟು ಕಿಕ್ಕಿರಿದು ತುಂಬಿದ್ದ ಭಾರತೀಯ ಸಮುದಾಯದವರನ್ನು ಉದ್ದೇಶಿ ಪ್ರಧಾನಿ ಮೋದಿ ಮಾಡಿದ ಭಾಷಣವೂ ಉತ್ತೇಜನಕಾರಿಯಾಗಿತ್ತು.

      ಮೋದಿ ಭಾಷಣ ಮಾಡುವ ಮುನ್ನ, ವೇದಿಕೆಗೆ ಅವರನ್ನು ಸ್ವಾಗತಿಸಿ ಅಮೆರಿಕಾದ ಹಿರಿಯ ಮುಖಂಡ ಮತ್ತು ಹೌಸ್ ಮೆಜಾರಿಟಿ ನಾಯಕ, ಸ್ಟೇನಿ ಹೋಯರ್ ಮಾತನಾಡುತ್ತಿದ್ದರು. ಅವರ ಪಕ್ಕದಲ್ಲಿ ಮೋದಿ ನಿಂತಿದ್ದರು.

      ಭಾರತದ ಇತಿಹಾಸದ ಬಗ್ಗೆ ಮತ್ತು ಭಾರತದ ಪ್ರಧಾನಿಯನ್ನು ಪರಿಚಯಿಸುತ್ತಾ, 'ಮಹಾತ್ಮ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ' ಅವರನ್ನು ಹೋಯರ್ ಸ್ಮರಿಸಿಕೊಂಡರು.

      Howdy Modi Event In Houston: US Leader Praises Nehru Vision Of Secularism

      " ಅಮೆರಿಕಾದಂತೆ ಭಾರತ ಕೂಡಾ ತನ್ನ ಪ್ರಾಚೀನ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿಯವರ ಬೋಧನೆ ಮತ್ತು ನೆಹರೂ ಅವರ ದೂರದೃಷ್ಟಿಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತಿದೆ". " ಅದು, ಪ್ರತಿಯೊಬ್ಬರ ಮಾನವ ಹಕ್ಕುಗಳನ್ನು ಕಾಪಾಡುತ್ತದೆ" ಎಂದು ಹೋಯರ್ ಸಭೆಯಲ್ಲಿ ಹೇಳಿದರು.

      ಮುಂದುವರಿಯುತ್ತಾ, " ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಮಧ್ಯರಾತ್ರಿ ದೇಶವನ್ನು ಉದ್ದೇಶಿಸಿ ನೆಹರೂ ಭಾಷಣ ಮಾಡಿದ್ದರು. ಆಗ, ಗಾಂಧೀಜಿಯವರ ಹೇಳಿಕೆಯನ್ನು ನೆಹರೂ ಉಲ್ಲೇಖಿಸಿದ್ದರು".

      " ಕಣ್ಣೀರು ಮತ್ತು ಸಂಕಟಗಳು ಇರುವವರೆಗೆ ನಮ್ಮ ಕೆಲಸಗಳು ಮುಗಿಯುವುದಿಲ್ಲ ಎಂದು ಗಾಂಧೀಜಿಯವರ ಹೇಳಿಕೆಯನ್ನು ನೆಹರೂ ತಮ್ಮ ಭಾಷಣದಲ್ಲಿ ಹೇಳಿದ್ದರು" ಎಂದು ಹೋಯರ್ ತಮ್ಮ ಭಾಷಣದಲ್ಲಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+