ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಸಾತ್ವಿಕ್ ಹೆಗಡೆ!

ಹ್ಯೂಸ್ಟನ್, ಸೆಪ್ಟೆಂಬರ್ 23: ಅಮೆರಿಕದ ಹ್ಯೂಸ್ಟನ್ ನಲ್ಲಿ ಪ್ರಧಾನಿ ನರೇದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಫೋಟೊ ಕ್ಲಿಕ್ಕಿಸಿಕೊಂಡ ಹುಡುಗನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಬಟ್ಟೆ ಫೇಮಸ್ ಆಗಿದ್ದಾನೆ.

ವೇದಿಕೆಯ ಮೇಲೆ ನಡೆದು ಹೋಗುತ್ತಿದ್ದ ಮೋದಿ ಮತ್ತು ಟ್ರಂಪ್ ರ ಬಳಿ ಮನವಿ ಮಾಡಿಕೊಂಡು, ಜೇಬಿನಿಂದ ಫೋನ್ ತೆಗೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಹುಡುಗ ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ಆತ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಸಾತ್ವಿಕ್ ಹೆಗಡೆ ಎಂಬುದು ತಿಳಿದುಬಂತು.

Satvik Hegde, who clicked selfie with Narendra Modi and Donald Trump

ಸಾತ್ವಿಕ್ ಹೆಗಡೆಯವರ ಸಂಬಂಧಿಯೊಬ್ಬರನ್ನು 'ಒನ್ ಇಂಡಿಯಾ ಕನ್ನಡ' ಸಂಪರ್ಕಿಸಿದಾಗ ಆತ ಮೂಲತಃ ಉತ್ತರ ಕನ್ನಡ ಜಿಲ್ಲೆಯವನು ಎಂಬುದು ತಿಳಿದುಬಂದಿದೆ. ಪ್ರಭಾಕರ ಹೆಗಡೆ ಮತ್ತು ಮೇಧಾ ಹೆಗಡೆ ಎಂಬುವವರ ಪುತ್ರ ಸಾತ್ವಿಕ್ ಹೆಗಡೆ ಹ್ಯೂಸ್ಟನ್ ನಲ್ಲಿಯೇ ಒಂಬತ್ತನೇ ತರಗತಿ ಓದುತ್ತಿದ್ದಾನೆ.

ಆತನ ತಂದೆ-ತಾಯಿ ಹಲವು ವರ್ಷಗಳಿಂದಲೂ ಹ್ಯೂಸ್ಟನ್ ನಲ್ಲೇ ನೆಲೆಸಿದ್ದು, ಯೋಗಪಟುವಾಗಿರುವ ಸಾತ್ವಿಕ್ ಹೆಗಡೆ ಯೋಗಪ್ರದರ್ಶನ ಮಾಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಮೋದಿ ಮತ್ತು ಟ್ರಂಪ್ ರನ್ನು ಭೇಟಿಯಾದರು.

ಸೆಪ್ಟೆಂಬರ್ 22 ರಂದು ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ಮನರಂಜನಾ ಕಾರ್ಯಕ್ರದಲ್ಲಿ ಯೋಗ ಪ್ರದರ್ಶನ ನಡೆಸಿದ ತಂಡದಲ್ಲಿ ಸಾತ್ವಿಕ್ ಹೆಗಡೆ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+