ಭಾರತ, ಅಮೆರಿಕ, ಜಪಾನ್ ನಿಂದ ಒಟ್ಟಿಗೆ ಸಮರಾಭ್ಯಾಸ
ನವದೆಹಲಿ, ಜೂನ್ 15: ಭಾರತ, ಜಪಾನ್ ಮತ್ತು ಅಮೆರಿಕದ ನೌಕಾ ಸೇನೆ, ವಾಯು ಸೇನೆ ಹಾಗೂ ಭೂ ಸೇನೆ ಸೇರಿ ಮಲಬಾರ್ 2017 ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ.
ಇಂಡೋ-ಏಷ್ಯಾ ಪೆಸಿಫಿಕ್ ವಲಯದಲ್ಲಿ ನೌಕಾ ವಲಯದ ರಕ್ಷಣೆಗೆ ಇರುವ ಸವಾಲುಗಳು, ಅವಕಾಶ ಹಾಗೂ ಸಂಕೀರ್ಣತೆಗೆ ಸಂಬಂಧಿಸಿದ ಹಾಗೆ ಮಲಬಾರ್ 2017 ಸಮರಾಭ್ಯಾಸದಲ್ಲಿ ಒತ್ತು ನೀಡಲಾಗುತ್ತದೆ.

ಬಂಗಾಳಕೊಲ್ಲಿಯಲ್ಲಿ ನಡೆಯುವ ಅಭ್ಯಾಸದಲ್ಲಿ ಸಮುದ್ರ ಹಾಗೂ ಹೊರಗೆ ಎರಡೂ ಬಗೆಯದು ಇರುತ್ತವೆ. ಅತ್ಯುನ್ನತ ಮಟ್ಟದ ಯುದ್ಧ ಪರಿಣತ ತರಬೇತಿಗಳು ನಡೆಯುತ್ತವೆ. ವಿಷಯ ತಜ್ಞರು, ವೃತ್ತಿಪರರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಗುಂಪು ಕಾರ್ಯಾಚರಣೆ, ನೌಕಾ ಪಹರೆ, ಸಬ್ ಮರಿನ್ ದಾಳಿಗೆ ಪ್ರತಿರೋಧ, ವೈದ್ಯಕೀಯ ಕಾರ್ಯಾಚರಣೆ, ಡ್ಯಾಮೇಜ್ ಕಂಟ್ರೋಲ್, ಹೆಲಿಕಾಪ್ಟರ್ ಕಾರ್ಯಾಚರಣೆಯೂ ಸೇರಿದ ಹಾಗೆ ಇತರ ಅಭ್ಯಾಸಗಳು ನಡೆಯಲಿವೆ.
ಇಂಡೋ-ಏಷ್ಯಾ ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಭಾರತ, ಜಪಾನ್ ಹಾಗೂ ಅಮೆರಿಕ ಪಡೆಗಳು ಎದುರು ನೋಡುತ್ತಿವೆ. ಇದರಿಂದ ಮೂರು ದೇಶಗಳ ಸೈನ್ಯದ ಮಧ್ಯೆ ಸಹಕಾರ ಬೆಳೆಯುತ್ತದೆ.












Click it and Unblock the Notifications