Get Updates
Get notified of breaking news, exclusive insights, and must-see stories!

ಸೇನೆ ಸೇರಲು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಅರ್ಹತೆ

ಬೆಂಗಳೂರು, ಆಗಸ್ಟ್ 23: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಉಚಿತವಾಗಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದೆ.

ಈ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ನಿಗದಿಪಡಿಸಿರುವ ಅರ್ಹತೆಗಳು ಹಾಗೂ ತರಬೇತಿಯ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

indian-army-training

ಕೇಂದ್ರ, ರಾಜ್ಯ ಸರ್ಕಾರದ ಅನುದಾನಿತ ಸಂಸ್ಥೆಗಳ ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳಲ್ಲಿನ ನೌಕರರು ಸದರಿ ಕಾರ್ಯಕ್ರಮದಡಿ ಅರ್ಜಿಸಲ್ಲಿಸಲು ಮತ್ತು ತರಬೇತಿ ಪಡೆಯಲು ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ)ಗೆ ಸೇರಿರಬೇಕು.

ಅರ್ಹತೆ ಮತ್ತು ನಿಬಂಧನೆಗಳ ಮಾಹಿತಿ

* ಜನ್ಮ ದಿನಾಂಕ ಮತ್ತು ವಯಸ್ಸು (10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ) ಡಿಸೆಂಬರ್ 31, 2023 ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸು ಪರಿಗಣಿಸಲಾಗುತ್ತದೆ. ಅಭ್ಯರ್ಥಿಯು 1 ಜನವರಿ 2003 ರಿಂದ 1 ಜುಲೈ 2006 (17 1/2 ವರ್ಷದಿಂದ 21 ವರ್ಷ) ದಿನಾಂಕಗಳ ನಡುವೆ ಜನಿಸಿರಬೇಕು.

* ಈ ಇಲಾಖೆಯಿಂದ ನೀಡುವ ಸದರಿ ತರಬೇತಿಯನ್ನು ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಪಡೆಯಲು ಅರ್ಹರು. ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ರೂ. 2.50 ಲಕ್ಷ, ಪ್ರವರ್ಗ 2 (ಎ), 3 (ಎ) ಮತ್ತು 3 (ಬಿ) ರೂ. 1 ಲಕ್ಷ ರೂ. ನಿಗದಿ ಮಾಡಲಾಗಿದೆ.

* ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುವುದು.

* ಅಭ್ಯರ್ಥಿಗಳು ಮೇಲ್ಕಂಡಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಜಿಲ್ಲೆಯನ್ನು ಮಾತ್ರ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಅದೇ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 15/09/2023 ರೊಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು.

* ಮೇಲ್ಕಂಡ ಮೂರು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಪ್ರತಿ ಜಿಲ್ಲೆಯಲ್ಲಿನ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ 4 ತಿಂಗಳುಗಳಿಗೊಮ್ಮೆ ನಿಯೋಜಿಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಗರಿಷ್ಠ ಭೌತಿಕ ಗುರಿಯು 100 ಆಗಿರುತ್ತದೆ. ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸುವಾಗ ಈ ಕೆಳಗಿನ ಮೀಸಲಾತಿ ಅನುಪಾತ ಪ್ರವರ್ಗ 1 ಶೇ 15, 2ಎ ಶೇ 53, 3ಎ ಶೇ 15, 3 ಬಿ ಶೇ 17 ಆಗಿದೆ.

* ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ಒಂದು ವೇಳೆ ಯಾವುದಾದರೂ ಪ್ರವರ್ಗದಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರೆ ಪವರ್ಗಗಳ ಅಭ್ಯರ್ಥಿಗಳನ್ನು ಮೀಸಲಾತಿಯನ್ವಯ ತರಬೇತಿಗೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತರಬೇತಿ ನೀಡುವ ಸ್ಥಳಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.30 ರಷ್ಟು ಸ್ಥಾನಗಳ ಮೀಸಲಾತಿ ನೀಡಲಾಗುವುದು.

* ಒಂದು ವೇಳೆ ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳನ್ನು ಆ ಸ್ಥಾನಗಳ ತರಬೇತಿಗಾಗಿ ಪರಿಗಣಿಸಲಾಗುವುದು. ತರಬೇತಿ ಅವಧಿಯು ಒಟ್ಟು 4 ತಿಂಗಳುಗಳದ್ದಾಗಿದ್ದು, ವಸತಿ ಸಹಿತವಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇತಿ ಕೇಂದ್ರದಲ್ಲಿಯೇ ಉಳಿದುಕೊಳ್ಳಬೇಕಾಗಿರುತ್ತದೆ.

* ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಈ ಅವಧಿಯಲ್ಲಿ ಉಚಿತ ವಸತಿ ಮತ್ತು ಊಟದ ಸೌಲಭ್ಯವನ್ನು ನೀಡಲಾಗುವುದು. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 4 ತಿಂಗಳುಗಳ ತರಬೇತಿ ಅವಧಿಯಲ್ಲಿ ದೈಹಿಕ ಸಹಿಷ್ಣುತೆ (physical test) ಹಾಗೂ ಲಿಖಿತ ಪರೀಕ್ಷೆಗೆ ಸಂಬಂಧಪಟ್ಟಂತೆ ತರಬೇತಿ ನೀಡಲಾಗುವುದು.

* ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ಜೊತೆ ಟ್ರ್ಯಾಕ್ ಸೂಟ್, ದೈಹಿಕ ತರಬೇತಿಗೆ ಅಗತ್ಯವಾದ ಒಂದು ಜೊತೆ ಸಮವಸ್ತ್ರ ಹಾಗೂ ಒಂದು ಜೊತೆ ಶೂ ಗಳನ್ನು ಉಚಿತವಾಗಿ ವಿತರಿಸಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಅವಧಿಗೆ ಯಾವುದೇ ರೀತಿಯ ಪಯಾಣ ಭತ್ಯೆ, ಶಿಷ್ಯವೇತನ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

* ತರಬೇತಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಉಪಕರಣವನ್ನು ಅಳವಡಿಸಿಕೊಂಡು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳ ಹಾಜರಾತಿಯನ್ನು ನಿರ್ವಹಿಸಲಾಗುವುದು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಶೇ.80 ರಷ್ಟು ಹಾಜರಾತಿಯು ಕಡ್ಡಾಯವಾಗಿರುತ್ತದೆ. ತರಬೇತಿಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

* ಯಾವುದೇ ಅಭ್ಯರ್ಥಿಯು ತರಬೇತಿಯನ್ನು ಪೂರ್ಣಗೊಳಿಸದೇ, ತರಬೇತಿಯನ್ನು ಮೊಟಕುಗೊಳಿಸಿದಲ್ಲಿ, ಅಂತಹ ಅಭ್ಯರ್ಥಿಯ ತರಬೇತಿಗೆ ಮಾಡಿರುವ ವೆಚ್ಚವನ್ನು ಆ ಅಭ್ಯರ್ಥಿ ಮತ್ತು ಅವರ ತಂದೆ/ ತಾಯಿ/ ಪೋಷಕರಿಂದ ವಸೂಲಿ ಮಾಡಲಾಗುವುದು. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಯು ತರಬೇತಿಯನ್ನು ಮೊಟಕುಗೊಳಿಸುವುದಿಲ್ಲ ಎಂಬ ಬಗ್ಗೆ ರೂ. 20 ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ. ಇಲಾಖೆಗೆ ಅಭ್ಯರ್ಥಿಯು ತಪ್ಪು ಮಾಹಿತಿ ನೀಡಿರುವುದು/ ಅನರ್ಹ ಅಭ್ಯರ್ಥಿಯೆಂದು ಯಾವುದೇ ಹಂತದಲ್ಲಿ ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ತರಬೇತಿಗೆ ಮಾಡಿರುವ ವೆಚ್ಚವನ್ನು ಅಂತಹ ಅಭ್ಯರ್ಥಿ ಮತ್ತು ಅವರ ತಂದೆ/ ತಾಯಿ/ ಪೋಷಕರಿಂದ ವಸೂಲಿ ಮಾಡಲಾಗುವುದು.

* ಅಭ್ಯರ್ಥಿಗಳ ಅರ್ಜಿ ಮತ್ತು ಸಲ್ಲಿಸಿರುವ ದಾಖಲೆಗಳ ಪರಿಶೀಲನೆ ನಂತರ ಅಭ್ಯರ್ಥಿಗಳು ತರಬೇತಿಗೆ ಆಯ್ಕೆ ಮಾಡಿಕೊಂಡಿರುವ ಜಿಲ್ಲೆಯನ್ನಾಧರಿಸಿ ನಿಗದಿತ ಸ್ಥಳದಲ್ಲಿ ವೈದ್ಯಕೀಯ/ದೈಹಿಕ ಪರೀಕ್ಷೆಯನ್ನು ಆಯೋಜಿಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

ಸಹಾಯವಾಣಿ ಸಂಖ್ಯೆಗಳು; ದಕ್ಷಿಣ ಕನ್ನಡ ಜಿಲ್ಲೆ 0824-2225078, ಉಡುಪಿ ಜಿಲ್ಲೆ 0820-2574881, ಉತ್ತರ ಕನ್ನಡ 08382-226589, ಕೇಂದ್ರ ಕಛೇರಿ: 8050770004. (ಸಮಯ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ).

ಅರ್ಹ, ಆಸಕ್ತ ಅಭ್ಯರ್ಥಿಗಳು ಇಲಾಖಾ ವೆಬ್-ಸೈಟ್ https://bcwd.karnataka.gov.in ನಲ್ಲಿ ಪಕಟಿಸಿರುವ ಅರ್ಜಿ ನಮೂನೆಯನ್ನು ಡೌನ್-ಲೋಡ್ ಮಾಡಿಕೊಂಡು ನಿಗದಿತ ನಮೂನೆಯಲ್ಲಿಯೇ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+