ಶ್ರೀನಗರ: ಬಾರಾಮುಲ್ಲಾ ಹೈವೇಲಿ IED ಬಾಂಬ್ ಇದ್ದ ಬ್ಯಾಗ್ ಪತ್ತೆ

ಶ್ರೀನಗರ, ಜುಲೈ 31: ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾಗಿದೆ. ಆ ಬ್ಯಾಗ್‌ ಅನ್ನು ಪೊಲೀಸರು ತೆರೆದು ನೋಡಿದಾಗ ಅದರಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆಯಾಗಿದೆ.

ಅದೃಷ್ಟವಶಾತ್ ಬ್ಯಾಗ್‌ನಲ್ಲಿದ್ದ ವಸ್ತು ಸ್ಪೋಟವಾಗದಂತೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಗಿತಗೊಂಡಿದ್ದ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಹಾನಿಯಾಗಿಲ್ಲ ಎಂದು ಸೇನೆಯ ಹಿರಿಯ ಧಿಕಾರಿಗಳು ಮಾಹಿತಿ ನೀಡಿದ್ದಾರೆ.

IED Bomb Detected in Baramulla National Highway in Srinagar, Now Traffic Restored

ಸೋಮವಾರ ಬೆಳಗ್ಗೆ ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ಬ್ಯಾಗ್‌ನ ಕುರಿತು ಮಾಹಿತಿ ಪೊಲೀಸರಿಗೆ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ತಳಿಯಿತು. ಜನರ ಜೀವ ರಕ್ಷಣೆಯ ಹಿತ ದೃಷ್ಟಿಯಿಂದ ಆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ನಂತರ ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಲಾಯಿತು.

ಭಾರತೀಯ ಸೇನೆಯ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿತ್ತು, ಶ್ರೀನಗರದ ಬಾರಾಮುಲ್ಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಪೊಲೀಸ್ ಸಿಬ್ಬಂದಿ, 29RR ಮತ್ತು CRPF ತಂಡವು ಸ್ಥಳಕ್ಕೆ ಧಾವಿಸಿತು. ಬ್ಯಾಗ್‌ನಲ್ಲಿ ಸ್ಪೋಟಕವಿದೆಯೇ ಇಲ್ಲವೆ ಎಂಬುದರ ಖಚಿತತೆಗಾಗಿ ಬಾಂಬ್ ನಿಷ್ಕ್ರಿಯ ದಳ ಕರೆಸಲಾಯಿತು. ಯಾವುದೇ ಹಾನಿಯಾಗದಂತೆ IED ನಿಷ್ಕ್ರೀಯ ಮಾಡಿ ಬ್ಯಾಗ್‌ ಅನ್ನು ತೆರವುಗೊಳಿಸಲಾಯಿತು. ಹೆದ್ದಾರಿಯಲ್ಲಿ ಓಡಾಡುವ ಸವಾರರು, ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ಪಕ್ಕದ ಪಾಕ್‌ನಲ್ಲಿ ಬಾಂಬ್ ಸ್ಪೋಟ: 40 ಸಾವು

ಭಾನುವಾರವಷ್ಟೇ ಭಯೋತ್ಪಾದಕರು ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಪೋಟಿಸುವ ಮೂಲಕ ಭೀಕರ ಕೃತ್ಯ ನಡೆಸಿದ್ದು, ಪರಿಣಾಮವಾಗಿ ಸುಮಾರು 40 ಜನರ ದೇಹಗಳು ಛಿದ್ರಗೊಂಡಿವೆ. ಈ ರಣಭಯಂಕರ ಘಟನೆಯಲ್ಲಿ ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆ ನೂರು ದಾಟಿದೆ.

IED Bomb Detected in Baramulla National Highway in Srinagar, Now Traffic Restored

ಪಾಕಿಸ್ತಾನದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಉಗ್ರರೇ ಹೆಚ್ಚಿರುವ ಪಾಕಿಸ್ತಾನದಲ್ಲಿ ಪಾಕ್‌ನ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಪಾಕಿಸ್ತಾನವು ಅಗತ್ಯ ತನಿಖೆ ಕೈಗೊಳ್ಳಲು ಮುಂದಾಗಿದೆ. ಸಾವು ನೋವುಗಳ ಇನ್ನು ಹೆಚ್ಚಾಗವು ಭೀತಿ ಇದೆ. ಇಡಿ ಪಾಕಿಸ್ತಾನವೇ ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+