Aashirwad Sooryavanshi: ಆಶೀರ್ವಾದ್ ಸೂರ್ಯವಂಶಿ ಡಬಲ್ ಶತಕ.. ಅಣ್ಣ ವೈಭವ್ ಹಾದಿ ಹಿಡಿದ ತಮ್ಮ

Aashirwad Sooryavanshi: ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಭಾರತ ಎ ತಂಡದ ಗೆಲುವಿಗೆ ವೈಭವ್ ಸೂರ್ಯವಂಶಿ ಅವರು ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರು ಟೀಮ್ ಇಂಡಿಯಾ ಹಿರಿಯರ ಟಿ20 ತಂಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೆಯೇ ಅವರ ಸಹೋದರ ಮತ್ತೊಮ್ಮೆ ಶತಕ ಸಿಡಿಸಿ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಟೀಮ್ ಇಂಡಿಯಾದ ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆಕ್ರಮಣ ಬ್ಯಾಟಿಂಗ್ ಪ್ರದರ್ಶನದ ಬೆನ್ನಲ್ಲೇ ಇದೀಗ ಅವರ 10 ವರ್ಷದ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಲು ಆರಂಭಿಸಿದ್ದಾರೆ. ಬಿಹಾರದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿರುವ ಈ ಬಾಲಕ ಕೇವಲ 119 ಎಸೆತಗಳಲ್ಲಿ 168 ರನ್ ಚಚ್ಚುವ ಮೂಲಕ ಕ್ರಿಕೆಟ್‌ ಲೋಕದ ಗಮನ ಸೆಳೆದಿದ್ದಾರೆ.

Vaibhav Sooryavanshi Brother Ashirwad Scores 168 Runs Another Cricket Star From Bihar Emerges

ಮತ್ತೊಮ್ಮೆ ಶತಕ ಸಿಡಿಸಿದ ವೈಭವ್ ತಮ್ಮ

ಸ್ಥಳೀಯ ಬಿಹಾರ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ರಿಷವ್ XI ತಂಡವನ್ನು ಪ್ರತಿನಿಧಿಸಿ ಅಭ್ಯಾಸ ಪಂದ್ಯವೊಂದರಲ್ಲಿ ಕಣಕ್ಕಿಳಿದ ಆಶೀರ್ವಾದ್, ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರ ಈ ಆಕ್ರಮಣಕಾರಿ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ, 6 ಸಿಕ್ಸರ್‌ಗಳು ಸೇರಿವೆ. 141.18ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಅಣ್ಣನಂತೆ ತಾನೂ ಕೂಡ ಭಯವಿಲ್ಲದ ಕ್ರಿಕೆಟ್ ಆಡಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿಶೇಷ ಅಂದ್ರೆ ಕೇವಲ ಆರು ತಿಂಗಳ ಹಿಂದೆಯಷ್ಟೇ ಕ್ರಿಕೆಟ್ ತರಬೇತಿ ಆರಂಭಿಸಿರುವ ಈ ಬಾಲಕ, ಕೆಲವೇ ವಾರಗಳ ಅಂತರದಲ್ಲಿ ಬಾರಿಸುತ್ತಿರುವ ಎರಡನೇ ಶತಕ ಇದಾಗಿದೆ. ಇದಕ್ಕೂ ಮುನ್ನ ತಾಜ್‌ಪುರ ಕ್ರಿಕೆಟ್ ಅಕಾಡೆಮಿ ಪರ ಆಡಿದ್ದ ಆಶೀರ್ವಾದ್ ಸೂರ್ಯವಂಶಿ ಅವರು, ಕೇವಲ 87 ಎಸೆತಗಳಲ್ಲಿ 103 ರನ್ ಗಳಿಸಿ ಮಿಂಚಿದ್ದರು.

ಸಹೋದರನಿಗೆ ಶುಭ ಕೋರಿದ ಅಣ್ಣ ವೈಭವ್

ಸದ್ಯ ಐರ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಹಿರಿಯರ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ, ಬೆಲ್ಫಾಸ್ಟ್‌ನಿಂದಲೇ ತಮ್ಮ ಕಿರಿಯ ಸಹೋದರನ ಈ ಅಪ್ರತಿಮ ಸಾಧನೆಯನ್ನು ಕೊಂಡಾಡಿದ್ದಾರೆ. ಆಶೀರ್ವಾದ್ ಗಳಿಸಿದ ರನ್‌ಗಳ ಸ್ಕೋರ್ ಕಾರ್ಡ್ ಅನ್ನು ವೈಭವ್ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ಸದ್ದು ಮಾಡುತ್ತಿದೆ.

ವೈಭವ್ ಎಡಗೈ, ತಮ್ಮ ಆಶೀರ್ವಾದ್ ಬಲಗೈ ಬ್ಯಾಟರ್..

ಸೂರ್ಯವಂಶಿ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಉದಯಿಸುತ್ತಿರುವುದನ್ನು ಕಂಡು ಕ್ರಿಕೆಟ್ ವಿಶ್ಲೇಷಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಆದರೆ ಇಬ್ಬರ ಆಟದ ಶೈಲಿಯಲ್ಲಿ ಭಿನ್ನತೆ ಇದೆ. ಅಣ್ಣ ವೈಭವ್ ಎಡಗೈ ಬ್ಯಾಟರ್ ಆದರೆ, ತಮ್ಮ ಆಶೀರ್ವಾದ್ ಬಲಗೈ ಬ್ಯಾಟರ್ ಜೊತೆಗೆ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದಾರೆ. ತನಗೊಬ್ಬ ಪರಿಪೂರ್ಣ ಆಲ್ ರೌಂಡರ್ ಆಗುವ ಆಸೆಯಿದೆ ಎಂದು ಆಶೀರ್ವಾದ್ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಐಪಿಎಲ್ 2026ರಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ಬರೆದಿರುವ ವೈಭವ್ ಹಾದಿಯಲ್ಲೇ ಸಾಗುತ್ತಿರುವ ಆಶೀರ್ವಾದ್ ಅವರ ಬ್ಯಾಟಿಂಗ್ ಜಾದೂ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಮತ್ತೊಂದು ದೊಡ್ಡ ತಾರೆ ಬಿಹಾರದಿಂದ ಅರಳುತ್ತಿರುವುದರ ಮುನ್ಸೂಚನೆ ನೀಡಿದೆ. ಇದೀಗ ಐಪಿಎಲ್‌ನಲ್ಲಿ ಎಲ್ಲಾ ಫ್ರಾಂಚೈಸಿಗಳ ಕಣ್ಣು ಆಶೀರ್ವಾದ್ ಸೂರ್ಯವಂಶಿ ಮೇಲೆ ನೆಟ್ಟಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+