ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡೆ ಹಿಂದೆ ಅವಿತವರ ಪತ್ತೆಗೆ ಸೇನೆಯಿಂದ ಹೊಸ ಆಯುಧ 'ದಿವ್ಯಚಕ್ಷು'

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜೂನ್ 9: ಗೋಡೆ ಹಿಂದೆ ಅವಿತಿರುವ ಉಗ್ರರನ್ನು ಪತ್ತೆ ಹಚ್ಚಲು ಭಾರತೀಯ ಸೇನೆ ಹೊಸ ಆಯುಧವೊಂದನ್ನು ಕಂಡು ಹುಡುಕಿದೆ. ಇದೇ ದಿವ್ಯಚಕ್ಷು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರಿಗೆ ಇದು ಉಪಯೋಗಕ್ಕೆ ಬರಲಿದೆ.

ಮನೆಯಲ್ಲಿ, ಗಲ್ಲಿಗಳಲ್ಲಿ ಅವಿತಿರುವ ಉಗ್ರರ ನಿರ್ಧಿಷ್ಟ ಸ್ಥಳವನ್ನು ಇದು ಪತ್ತೆ ಹಚ್ಚಲಿದೆ. ಇದರಿಂದ ನಾಗರೀಕರ ಮೇಲೆ ನಡೆಯುವ ಸಾಂಭಾವ್ಯ ದಾಳಿಗಳನ್ನೂ ತಪ್ಪಿಸಬಹುದಾಗಿದೆ. ಜತೆಗೆ ಉಗ್ರರನ್ನೂ ನಿಖರವಾಗಿ ಪತ್ತೆ ಹಚ್ಚಿ ದಾಳಿ ಮಾಡಲು ಸಹಾಯಕವಾಗಿದೆ.

ಹಲವು ಸಂದರ್ಭಗಳಲ್ಲಿ ಉಗ್ರರು ಮರೆಯಲ್ಲಿ ಕುಳಿತು ಸೈನಿಕರನ್ನು ಕೊಂದಿದ್ದಿದೆ. ಗೋಡೆ ಹಿಂದೆ ಅವಿತಿರುವವರ ಪತ್ತೆಗೆ ಸೇನೆ ಯಾವತ್ತೂ ಹರಸಾಹಸ ಪಡುತ್ತದೆ. ಆದರೆ ದಿವ್ಯಚಕ್ಷು ಬಳಕೆಯಿಂದ ಈ ಸಮಸ್ಯೆಗಳು ಇರುವುದಿಲ್ಲ ಎಂದು ಸೇನೆ ಹೇಳಿದೆ.

Divyachakshu: Indian Army's new tool to detect terrorists hiding behind walls

ಗೋಡೆಯಾಚೆಗಿನ ವಸ್ತುಗಳನ್ನೂ ಪತ್ತೆ ಹಚ್ಚುವ ರಾಡಾರ್ ಗಳು ಇವಾಗಿದ್ದು ಸೈನಿಕರಿಗೆ ಉಪಯೋಗಕ್ಕೆ ಬರಲಿವೆ.

ದಿವ್ಯಚಕ್ಷು ಕೆಲಸ ಮಾಡುವುದು ಹೀಗೆ

25-30 ಸೆಂಟಿ ಮೀಟರ್ ದಪ್ಪದ ಗೋಡೆಯನ್ನು ಸೀಳಿಕೊಂಡು ಹೋಗಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಇವು ಹೊಂದಿವೆ. ಶಾರ್ಟ್ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ.

ಒಂದೊಮ್ಮೆ ಮನುಷ್ಯರು ಅಡಗಿಕೊಂಡಿದ್ದಲ್ಲಿ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್ ನಲ್ಲಿ ಬದಲಾವಣೆಗಳನ್ನು ಗುರುತಿಸಬಹುದು. ಸಣ್ಣ ಉಸಿರಾಟದ ವ್ಯತ್ಯಾಸವನ್ನೂ ಇದರಲ್ಲಿ ಪತ್ತೆಹಚ್ಚಬಹುದಾಗಿದೆ.

ಇದರಿಂದ ನಿಖರವಾಗಿ ಉಗ್ರರು ಎಲ್ಲಿ ಅಡಗಿಕೊಂಡಿದ್ದಾರೆ, ಯಾವ ಕಡೆ ಚಲಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬಹುದು. ಸದ್ಯಕ್ಕೆ ಈ ರೀತಿಯ ಕೆಲವು ರಡಾರ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಇನ್ನು ಇದೇ ರೀತಿಯ ರಡಾರ್ ಗಳ ಅಭಿವೃಧ್ಧಿಯಲ್ಲಿ ಸೇನೆಯ ಎಲೆಕ್ಟ್ರಾನಿಕ್ ಮತ್ತು ರಾಡಾರ್ ಅಭಿವೃದ್ಧಿ ವಿಭಾಗ ಹಾಗೂ ಡಿಆರ್'ಡಿಒ ತೊಡಗಿಸಿಕೊಂಡಿದೆ. ಆದರೆ ಇಲ್ಲಿಯವರಗೆ ಯಶಸ್ಸು ಸಾಧಿಸಿಲ್ಲ. (ಒನ್ ಇಂಡಿಯಾ ಸುದ್ದಿ)

English summary
Divyachakshu or the divine eye is the new technology that the Indian Army will use to detect terrorists hiding behind walls or false ceilings. This would be a crucial tool for the Indian Army in counter-insurgency operations especially in the Kashmir Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X