DK Shivakumar: ಡಿಕೆಶಿ ಐಷಾರಾಮಿ ಜೀವನ: ನಿತ್ಯ ಬಳಸುವ ಶಾಲಿನ ಬೆಲೆಯೇ 1 ಲಕ್ಷ ರೂ., ದುಬಾರಿ ವಾಚ್ಗಳ ಕಲೆಕ್ಷನ್
DK Shivakumar: ಕರ್ನಾಟಕದ ಭಾವಿ ಮುಖ್ಯಮಂತ್ರಿ ಹಾಗೂ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ, ಕನಕಪುರ ಬಂಡೇ ಎಂದೇ ಖ್ಯಾತಿ ಗಳಿಸಿರುವ ಡಿ.ಕೆ ಶಿವಕುಮಾರ್ ಅವರ ಐಷಾರಾಮಿ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ರಾಜಕಾರಣಿಗಳಲ್ಲಿ ಹಲವರು ಫ್ಯಾಷನ್ ಮಾಡುವುದು ಕಡಿಮೆ. ಹಲವರು ಐಷಾರಾಮಿ ಜೀವನ ನಡೆಸುವುದು ಇದೆ. ಆದರೆ ಡಿ.ಕೆ ಶಿವಕುಮಾರ್ ಅವರು ಫ್ಯಾಷನ್ ಫಾಲೋ ಮಾಡುವುದರಲ್ಲೂ ಎತ್ತಿದ ಕೈ. ಕರ್ನಾಟಕದಲ್ಲಿ ಈಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಾಗೂ ಡಿ.ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾದ ಮೇಲೆ ಅವರ ಖದರ್ ಬದಲಾಗಿದೆ. ಡಿ.ಕೆ ಶಿವಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಧರಿಸುತ್ತಿರುವ ಶಾಲಿನ ಬೆಲೆಯೇ ಲಕ್ಷದ ವರೆಗೆ ಇದೆ. ದುಬಾರಿ ವಾಚ್ ಹಾಗೂ ಜೀವನ ಶೈಲಿಯಿಂದ ಕರ್ನಾಟಕದ ಭಾವಿ ಮುಖ್ಯಮಂತ್ರಿ ಗಮನ ಸೆಳೆಯುತ್ತಿದ್ದಾರೆ.
ಕೆಲವರ ಟೀಕೆಯ ಹೊರತಾಗಿಯೂ ಡಿ.ಕೆ ಶಿವಕುಮಾರ್ ಅವರು ಐಷಾರಾಮಿ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಗರಿಗರಿ ಶಾಲು ಅವರ ಹೊಸ ಫ್ಯಾಷನ್ ಆಗಿದೆ. ಗಾಢ ಬಣ್ಣದ ನೀಲಿ ಶಾಲನ್ನು ಡಿ.ಕೆ ಶಿವಕುಮಾರ್ ಅವರು ಹೆಚ್ಚು ಇಷ್ಟಪಡುತ್ತಾರೆ. ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಅವರ ಐಷಾರಾಮಿ ಜೀವನದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಮೂಲಸೌಕರ್ಯ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಬಳಿ ಇರುವ ಸಂಪತ್ತು ಬರೋಬ್ಬರಿ 1,413.80 ಕೋಟಿ ರೂ. ಆಗಿದೆ.

ಡಿ.ಕೆ ಶಿವಕುಮಾರ್ ಐಷಾರಾಮಿ ಜೀವನಶೈಲಿ
ಡಿ.ಕೆ ಶಿವಕುಮಾರ್ ಅವರದ್ದು ಐಷಾರಾಮಿ ಜೀವನ ಶೈಲಿ. ಮಾರ್ಡನ್ ಐಡಿಯಾಗಳಿಂದಲೇ ಡಿ.ಕೆ ಶಿವಕುಮಾರ್ ಅವರು ಫೇಮಸ್ ಆಗಿದ್ದಾರೆ. ಕಾರ್ಟಿಯರ್, ರೋಲೆಕ್ಸ್, ಗುಚ್ಚಿ ಹಾಗೂ ಲೂಯಿ ವಿಟಾನ್ ಮಾದರಿಯ ದುಬಾರಿ ಬ್ರ್ಯಾಂಡ್ಗಳ ವಾಚ್ಗಳನ್ನು ಡಿ.ಕೆ ಶಿವಕುಮಾರ್ ಅವರು ಬಳಸುತ್ತಾರೆ. ಮುಂದುವರಿದು ಇತ್ತೀಚಿನ ದಿನಗಳಲ್ಲಿ ಅವರು ಶಾಲು - ಸ್ಕಾರ್ಫ್ಗಳನ್ನು ಬಳಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಟೀಕೆಗಳ ಹೊರತಾಗಿಯೂ ಅವರು ಐಷಾರಾಮಿ ಜೀವನದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಕ್ಯಾಶ್ಮೀರ್ ಸ್ಕಾರ್ಫ್ಗಳು ಹಾಗೂ ಹೊಸ ಮಾದರಿಯ ದುಬಾರಿ ವಾಚ್ಗಳು ಜನರ ಗಮನ ಸೆಳೆದಿದೆ.
ದುಬಾರಿ ವಾಚ್ಗಳ ಟೀಕೆಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು
ಐಷಾರಾಮಿ ವಾಚ್ಗಳನ್ನು ಧರಿಸುವುದರ ಬಗ್ಗೆ ರಾಜಕೀಯವಾಗಿ ಟೀಕೆ ವ್ಯಕ್ತವಾದ ಮೇಲೆ ಇದಕ್ಕೆ ಡಿ.ಕೆ ಶಿವಕುಮಾರ್ ಅವರು ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಕಾರ್ಟಿಯರ್ ಮತ್ತು ರೋಲೆಕ್ಸ್ ಧರಿಸುವ ವಿಚಾರವಾಗಿ ಈ ಹಿಂದೆ ಡಿ.ಕೆ ಶಿವಕುಮಾರ್ ಅವರು, ನನ್ನ ಆಯ್ಕೆಯ ಕೈಗಡಿಯಾರವನ್ನು ಧರಿಸುವ ಹಕ್ಕು ಸಹ ನನಗಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು.
ಡಿ.ಕೆ ಶಿವಕುಮಾರ್ ಬಳಸುವ ದುಬಾರಿ ವಸ್ತುಗಳು
ಗುಚ್ಚಿ ಜಾಕ್ವಾರ್ಡ್ ಉಣ್ಣೆಯ ಸ್ಕಾರ್ಫ್ - 54,630 ರೂ.
ಲೂಯಿ ವಿಟಾನ್ ರೇಕ್ಜಾವಿಕ್ ಸ್ಕಾರ್ಫ್ - ಸುಮಾರು 1.01 ಲಕ್ಷ ರೂ.
ಕಾರ್ಟಿಯರ್ ಸ್ಯಾಂಟೋಸ್ ವಾಚ್ - ಸುಮಾರು 43 ಲಕ್ಷದಿಂದ 53 ಲಕ್ಷ ರೂ.
ಫೆಂಡಿ ಟೈಮ್ಲೆಸ್ ಸ್ಕಾರ್ಫ್ - ಸುಮಾರು 70 ಸಾವಿರ ರೂ.
ಬರ್ಬೆರಿ ಕ್ಲಾಸಿಕ್ ಚೆಕ್ ಕ್ಯಾಶ್ಮೀರ್ ಸ್ಕಾರ್ಫ್ - ಸುಮಾರು 52 ಸಾವಿರದಿಂದ 86 ಸಾವಿರ ರೂ.
ಫೆರಾಗಾಮೊ ಗ್ಯಾನ್ಸಿನಿ ಸ್ಕಾರ್ಫ್ - ಸುಮಾರು 35,500ದಿಂದ 52 ಸಾವಿರ ರೂ.
ರೋಲೆಕ್ಸ್ ಕಾಸ್ಮೋಗ್ರಾಫ್ ಡೇಟೋನಾ ವಾಚ್ - ಸುಮಾರು 15.6 ಲಕ್ಷದಿಂದ 1.4 ಕೋಟಿ ರೂ.
ಡಿ.ಕೆ. ಶಿವಕುಮಾರ್ ಅವರು ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 2023ರ ಚುನಾವಣಾ ಅಫಿಡವಿಟ್ ಪ್ರಕಾರ, ಡಿ.ಕೆ ಶಿವಕುಮಾರ್ ಅವರ ಬಳಿ ಒಟ್ಟು 1,413.80 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಇದರಲ್ಲಿ 1,140.38 ಕೋಟಿ ಮೌಲ್ಯದ ಸ್ಥಿರ ಆಸ್ತಿ ಮತ್ತು 273.41 ಕೋಟಿ ಮೌಲ್ಯದ ಚರಾಸ್ತಿ ಸೇರಿದೆ.












Click it and Unblock the Notifications