ಪ್ರವಾಸೋದ್ಯಮಕ್ಕೆ ವಂದೇ ಭಾರತ್ ಮೆರುಗು: ನೀವು ಸುಲಭವಾಗಿ ತಲುಪಬಹುದಾದ 5 ಪ್ರಮುಖ ನಗರಗಳು

ದೇಶಾದ್ಯಂತ ವೇಗದ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕೆ ಹೊಸ ಆಯಾಮ ನೀಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರವಾಸೋದ್ಯಮಕ್ಕೂ ಹೊಸ ಚೈತನ್ಯ ನೀಡಿವೆ. ಮೇ 2026ರ ವೇಳೆಗೆ ದೇಶದಲ್ಲಿ 160ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಅನೇಕ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂಪರ್ಕಿಸುತ್ತಿವೆ. ಈ ಹಿಂದೆ ದೂರದ ಕನಸಾಗಿದ್ದ ಹಲವು ಪ್ರವಾಸಿ ತಾಣಗಳು ಈಗ ಕೆಲವೇ ಗಂಟೆಗಳಲ್ಲಿ ತಲುಪಬಹುದಾದ ಸ್ಥಳಗಳಾಗಿವೆ.

ವಂದೇ ಭಾರತ್ ರೈಲಿನ ಮೂಲಕ ಸುಲಭವಾಗಿ ತಲುಪಬಹುದಾದ ದೇಶದ ಐದು ಜನಪ್ರಿಯ ಪ್ರವಾಸಿ ತಾಣಗಳ ವಿವರ ಇಲ್ಲಿದೆ:

1. ಮೈಸೂರು: ಸಾಂಸ್ಕೃತಿಕ ಪರಂಪರೆ ಮತ್ತು ಅರಮನೆಗಳ ನಗರಿ

ಅರಮನೆಗಳ ನಗರ ಎಂದೇ ಖ್ಯಾತಿ ಪಡೆದಿರುವ ಮೈಸೂರು ತನ್ನ ಐತಿಹಾಸಿಕ ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ದಸರಾ ಉತ್ಸವಕ್ಕಾಗಿ ವಿಶ್ವದ ಗಮನ ಸೆಳೆದಿದೆ. ಇಲ್ಲಿನ ಭವ್ಯ ಮೈಸೂರು ಅರಮನೆ ಮತ್ತು ಚಾಮುಂಡಿ ಬೆಟ್ಟ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುವ ಪ್ರಮುಖ ಆಕರ್ಷಣೆಗಳಾಗಿವೆ. ವಂದೇ ಭಾರತ್ ರೈಲಿನ ವೇಗದ ಸಂಪರ್ಕದಿಂದಾಗಿ ಬೆಂಗಳೂರು ಮತ್ತು ಇತರ ನಗರಗಳಿಂದ ಪ್ರವಾಸಿಗರು ಈಗ ಅತ್ಯಂತ ಕಡಿಮೆ ಸಮಯದಲ್ಲಿ ಈ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಬಹುದಾಗಿದೆ.

* ರೈಲು: ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ: 20607 (ಹಿಂತಿರುಗುವ ರೈಲು: 20608)
* ಪ್ರಯಾಣದ ಸಮಯ: 6 ಗಂಟೆ 20 ನಿಮಿಷ

IRCTC Vande Bharat Express

2. ವಾರಣಾಸಿ: ಆಧ್ಯಾತ್ಮದ ಅಲೆ ಮತ್ತು ಗಂಗಾ ತಟದ ವೈಭವ

ವಿಶ್ವದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾದ ವಾರಾಣಸಿ, ಗಂಗಾ ನದಿ ತೀರದ ಘಾಟ್‌ಗಳು ಮತ್ತು ಭವ್ಯ ಗಂಗಾ ಆರತಿಗಾಗಿ ಪ್ರಸಿದ್ಧವಾಗಿದೆ. ಆಧ್ಯಾತ್ಮಿಕ ಅನುಭವವನ್ನು ಬಯಸುವವರಿಗೆ ಇದು ಪ್ರಮುಖ ತಾಣವಾಗಿದೆ.

* ರೈಲು: ನವದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ: 22436 (ಹಿಂತಿರುಗುವ ರೈಲು: 22435)
* ಪ್ರಯಾಣದ ಸಮಯ: 8 ಗಂಟೆ 5 ನಿಮಿಷ

IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ
IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ

3. ಕಟ್ರಾ: ಮಾತೆ ವೈಷ್ಣೋದೇವಿ ದರ್ಶನಕ್ಕೆ ಸುಗಮ ಹಾದಿ

ತ್ರಿಕೂಟ ಪರ್ವತಗಳ ನಡುವೆ ನೆಲೆಸಿರುವ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಕತ್ರಾ ಪ್ರಮುಖ ಕೇಂದ್ರವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

* ರೈಲು: ನವದೆಹಲಿ-ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ: 22439 (ಹಿಂತಿರುಗುವ ರೈಲು: 22440)
* ಪ್ರಯಾಣದ ಸಮಯ: 8 ಗಂಟೆ 20 ನಿಮಿಷ

IRCTC Vande Bharat Express

4. ಪುರಿ: ಜಗನ್ನಾಥನ ಸನ್ನಿಧಿಗೆ ಆಧುನಿಕ ಪಯಣ

ಜಗನ್ನಾಥ ದೇವಾಲಯ ಮತ್ತು ಸುಂದರ ಸಮುದ್ರ ತೀರಗಳಿಗಾಗಿ ಪ್ರಸಿದ್ಧವಾಗಿರುವ ಪುರಿ, ದೇಶದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

* ರೈಲು: ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ: 22895 (ಹಿಂತಿರುಗುವ ರೈಲು: 22896)
* ಪ್ರಯಾಣದ ಸಮಯ: 6 ಗಂಟೆ 40 ನಿಮಿಷ

₹15,600ಕ್ಕೆ ಅಯೋಧ್ಯೆ, ಕಾಶಿ, ಜ್ಯೋತಿರ್ಲಿಂಗ ದರ್ಶನ; IRCTC ವಿಶೇಷ ಭಾರತ್ ಗೌರವ್ ರೈಲು ಯಾತ್ರೆಗಳು
₹15,600ಕ್ಕೆ ಅಯೋಧ್ಯೆ, ಕಾಶಿ, ಜ್ಯೋತಿರ್ಲಿಂಗ ದರ್ಶನ; IRCTC ವಿಶೇಷ ಭಾರತ್ ಗೌರವ್ ರೈಲು ಯಾತ್ರೆಗಳು

5. ಮಡ್ಗಾಂವ್ (ಗೋವಾ): ಕಡಲತೀರಗಳ ನಡುವೆ ರಜೆಯ ಮೋಜು

ಸಮುದ್ರ ತೀರಗಳು, ಪೋರ್ಚುಗೀಸ್ ಶೈಲಿಯ ಕಟ್ಟಡಗಳು, ಐತಿಹಾಸಿಕ ಚರ್ಚ್‌ಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರಾದ ಗೋವಾ ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಾಗಾ, ಕಲಂಗುಟ್, ಪಾಲೋಲೇಂ ಹಾಗೂ ಅಂಜುನಾ ಬೀಚ್‌ಗಳು ಪ್ರವಾಸಿಗರನ್ನು ವರ್ಷಪೂರ್ತಿ ಸೆಳೆಯುತ್ತವೆ. ವಂದೇ ಭಾರತ್ ರೈಲಿನ ಮೂಲಕ ಈಗ ಗೋವಾವನ್ನು ಇನ್ನಷ್ಟು ವೇಗವಾಗಿ ಮತ್ತು ಆರಾಮದಾಯಕವಾಗಿ ತಲುಪಬಹುದಾಗಿದೆ.

* ರೈಲು: ಮುಂಬೈ ಸಿಎಸ್‌ಎಂಟಿ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ: 22229 (ಹಿಂತಿರುಗುವ ರೈಲು: 22230)
* ಪ್ರಯಾಣದ ಸಮಯ: 7 ಗಂಟೆ 45 ನಿಮಿಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+