MLC Election: ಕರ್ನಾಟಕದ 7 ಎಂಎಲ್‌ಸಿ ಸ್ಥಾನಗಳಿಗೆ ಚುನಾವಣಾ ಅಧಿಸೂಚನೆ ಪ್ರಕಟ, ಇಂದಿನಿಂದ ಅರ್ಜಿ ಸಲ್ಲಿಕೆ ಶುರು

ನವದೆಹಲಿ/ಬೆಂಗಳೂರು: ಕರ್ನಾಟಕದ ವಿಧಾನ ಪರಿಷತ್ ಏಳು ಸದಸ್ಯ ಸ್ಥಾನ ಕೇಂದ್ರ ಚುನಾವಣೆ ಆಯೋಗವು (ECI) ಸೋಮವಾರ ಅಧಿಸೂಚನೆ ಪ್ರಕಟಿಸಿದೆ. ಇಂದು ಜೂನ್ 1ರಿಂದಲೇ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಕರ್ನಾಟಕ ಒಳಗೊಂಡಂತೆ ರಾಜ್ಯಸಭೆಯ ಒಟ್ಟು 27 ಸ್ಥಾನ, ಮೂರು ರಾಜ್ಯಗಳ ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಮತ್ತು ಉಪಚುನಾವಣೆ ನಡೆಸುವುದಾಗಿ ಘೋಷಿಸಿದೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಖಾಲಿ ಇರುವ ಏಳು ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ಪ್ರಕ್ರಿಯೆಗಾಗಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ. ಇಂದಿನಿಂದ ಜೂನ್ 8ರ ಮಧ್ಯಾಹ್ನ 3 ಗಂಟೆವರೆಗೆ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ.

ECI

ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ಅದರಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾದ ತಲಾ ಒಂದು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಇನ್ನುಳಿದಂತೆ ಬಿಹಾರ ವಿಧಾನ ಪರಿಷತ್ತಿನ 9 ದ್ವೈವಾರ್ಷಿಕ ಮತ್ತು 1 ಉಪಚುನಾವಣೆ ಪ್ರಕ್ರಿಯೆ ಕುರಿತು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನ, ಯತೀಂದ್ರಗೆ ಡಿಸಿಎಂ! ರಾಹುಲ್ ಗಾಂಧಿ ಆಫರ್‍‌ಗೆ ಸಿದ್ದರಾಮಯ್ಯ ರೆಸ್ಪಾನ್ಸ್
ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನ, ಯತೀಂದ್ರಗೆ ಡಿಸಿಎಂ! ರಾಹುಲ್ ಗಾಂಧಿ ಆಫರ್‍‌ಗೆ ಸಿದ್ದರಾಮಯ್ಯ ರೆಸ್ಪಾನ್ಸ್

ಜೂನ್ 18 ರಂದು ಮತದಾನ, ಸಂಜೆ ಫಲಿತಾಂಶ

ಈ ಚುನಾವಣೆಗಳ ಅಭ್ಯರ್ಥಿಗಳಿಂದ ಸಲ್ಲಿಕೆ ಆಗುವ ನಾಮಪತ್ರಗಳು ಜೂನ್ 9 ರಂದು ಪರಿಶೀಲನೆ ಆಗಲಿವೆ. ಜೂನ್ 11ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶ ಇರುತ್ತದೆ. ಜೂನ್ 18 ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಆತ್ತು ಸಂಜೆಯೇ 5ಗಂಟೆ ಹೊತ್ತಿಗೆ ಚುನಾವಣೆ ಫಲಿತಾಂಶ ಹೊರ ಬೀಳಲಿದೆ ಎಂದು ಕೇಂದ್ರ ಚುನಾವಣೆ ಆಯೋಗದ ಉಪ ನಿರ್ದೇಶಕರಾದ ಪಿ ಪವನ್ ಅವರು ತಿಳಿಸಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ರಾಜಸ್ಥಾನ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಇಂದಿನಿಂದ ಚುನಾವಣಾ ಚುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಯ್ತಾ?

ಕರ್ನಾಟಕದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ವಿಚಾರದಲ್ಲಿ ಸಾಕಷ್ಟು ರಾಜಕಾರಣ ನಡೆಯುತ್ತಿದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಯಾರಾಗ್ತಾರೆ ಮಂತ್ರಿಗಳ ಎಂಬ ಚರ್ಚೆ ಜೋರಾಗಿದೆ. ಈ ಮಧ್ಯೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಸ್ಥಾನಕ್ಕೆ ಯಾರು ಅಭ್ಯರ್ಥಿಗಳು, ವಿಧಾನಪರಿಷತ್ ಸದಸ್ಯರ ಆಯ್ಕೆ ಅಂತಿಮಗೊಂಡಿಲ್ಲ. ರಾಜ್ಯಸಭೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕಳುಹಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+