ತಾಯಿಯಿಲ್ಲದ ಒಂದೂವರೆ ವರ್ಷದ ತಮ್ಮನನ್ನು ಶಾಲೆಗೆ ತಂದ 9ನೇ ತರಗತಿ ವಿದ್ಯಾರ್ಥಿನಿ: ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು

ತಾಯಿಯ ಪ್ರೀತಿಗೆ ಸಾಟಿಯಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಆದರೆ, ಆಟವಾಡುವ ಎಳೆ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರೆ ಆ ಮಕ್ಕಳ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಪ್ರಪಂಚದ ಬಗ್ಗೆ ಅರಿವಿರದ ಕಂದಮ್ಮ ಕುಟುಂಬದ ಜವಬ್ದಾರಿ ಹೋರುವುದು ಸಾಧ್ಯವೇ? ಹೌದು, ಇಲ್ಲೊಂದು ಕಡೆ 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು, ತನ್ನ ಒಂದೂವರೆ ವರ್ಷದ ಪುಟ್ಟ ತಮ್ಮನನ್ನು ಶಾಲೆಗೆ ಕರೆದುಕೊಂಡು ಬಂದಿದ್ದಾಳೆ. ತಾಯಿಯನ್ನು ಕಳೆದುಕೊಂಡ ಆ ಬಾಲಕಿ, ತನ್ನ ತಮ್ಮನಿಗೆ ತಾಯಿಯಾಗಿ ಜವಾಬ್ದಾರಿ ಹೊತ್ತುಕೊಂಡಿರುವ ಈ ಘಟನೆ ಇದೀಗ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ.

ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಈ ಬಾಲಕಿಯ ಹೆಸರು ಅಸ್ಮಿತಾ ತಮಾಂಗ್. ಆಕೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ದುರದೃಷ್ಟವಶಾತ್, ಇತ್ತೀಚೆಗಷ್ಟೇ ಈ ಮಕ್ಕಳ ತಾಯಿ ಮೃತಪಟ್ಟಿದ್ದಾರೆ. ತಾಯಿಯ ಸಾವಿನ ನಂತರ ಮನೆಯ ಜವಾಬ್ದಾರಿ ಹಾಗೂ ಪುಟ್ಟ ತಮ್ಮನನ್ನು ನೋಡಿಕೊಳ್ಳುವ ಸಂಪೂರ್ಣ ಹೊಣೆ ಈ ಚಿಕ್ಕ ಬಾಲಕಿಯ ಹೆಗಲೇರಿದೆ.

Class 9 Girl

ಅಸ್ಮಿತಾ ತಂದೆ ಪ್ರತಿದಿನ ಹಗಲು ಹೊತ್ತಿನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಅವರು ಕೆಲಸಕ್ಕೆ ಹೋದ ಮೇಲೆ ಮನೆಯಲ್ಲಿ ಈ ಪುಟ್ಟ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಮನೆಯಲ್ಲಿ ಮಗುವನ್ನು ಒಬ್ಬಂಟಿಯಾಗಿ ಬಿಡಲು ಸಾಧ್ಯವಾಗದ ಕಾರಣ, ಬೇರೆ ದಾರಿಯಿಲ್ಲದೆ ಅಸ್ಮಿತಾ ತನ್ನ ಒಂದೂವರೆ ವರ್ಷದ ತಮ್ಮನನ್ನು ತನ್ನ ಜೊತೆಗೇ ಶಾಲೆಗೆ ಕರೆದುಕೊಂಡು ಬಂದಿದ್ದಾಳೆ. ಶಾಲೆಯ ಬೆಂಚ್ ಮೇಲೆ ಆಕೆ ತನ್ನ ತಮ್ಮನನ್ನು ಮಲಗಿಸಿಕೊಂಡು ಪಾಠ ಕೇಳುತ್ತಿರುವ ದೃಶ್ಯ ಎಂತಹವರ ಮನಸ್ಸನ್ನೂ ಕರಗಿಸುವಂತಿದೆ.

ತರಗತಿಯಲ್ಲಿ ಮಗುವಿನೊಂದಿಗೆ ಕುಳಿತಿದ್ದ ಅಸ್ಮಿತಾಳನ್ನು ನೋಡಿದ ಶಾಲೆಯ ಶಿಕ್ಷಕರು, ಆಕೆಯ ಬಳಿ ಹೋಗಿ 'ಏನಮ್ಮ ವಿಷಯ? ಮಗುವನ್ನು ಏಕೆ ಶಾಲೆಗೆ ತಂದಿದ್ದೀಯಾ?' ಎಂದು ಪ್ರೀತಿಯಿಂದ ವಿಚಾರಿಸಿದ್ದಾರೆ. ಶಿಕ್ಷಕರು ಹೀಗೆ ಕಳಕಳಿಯಿಂದ ಕೇಳುತ್ತಿದ್ದಂತೆಯೇ, ತನ್ನೊಳಗಿನ ನೋವನ್ನು ತಡೆದುಕೊಳ್ಳಲಾಗದ ಬಾಲಕಿ ತರಗತಿಯಲ್ಲೇ ಎಲ್ಲರೆದುರು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಭಾವುಕ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಲಕ್ಷಾಂತರ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ತಾಯಿಯಿಲ್ಲದ ಮಗುವಿಗೆ ಅಕ್ಕನೇ ತಾಯಿಯಾಗಿದ್ದಾಳೆ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೇವಲ 9ನೇ ತರಗತಿಯಲ್ಲಿರುವ ಈ ಬಾಲಕಿ, ತನ್ನ ಓದಿನ ಜೊತೆಗೆ ಮನೆಯ ಜವಾಬ್ದಾರಿಯನ್ನೂ ನಿಭಾಯಿಸುತ್ತಿರುವ ಬಗ್ಗೆ ಜನರು ಅಪಾರ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ತನ್ನ ತಮ್ಮನನ್ನು ಬಿಟ್ಟುಕೊಡದ ಅಸ್ಮಿತಾಳ ಈ ನಿಸ್ವಾರ್ಥ ಪ್ರೀತಿ ಹಾಗೂ ಆಕೆಯ ಧೈರ್ಯವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇದು ಕೇವಲ ಅಸ್ಮಿತಾಳ ಕಥೆಯಲ್ಲ, ನಮ್ಮ ಸಮಾಜದಲ್ಲಿ ಇಂತಹ ಅನೇಕ ಮಕ್ಕಳಿದ್ದಾರೆ. ಕೌಟುಂಬಿಕ ಸಮಸ್ಯೆಗಳು, ಬಡತನ ಅಥವಾ ಹೆತ್ತವರ ಅಕಾಲಿಕ ಮರಣದಿಂದಾಗಿ ಎಷ್ಟೋ ಮಕ್ಕಳು ತಮ್ಮ ಬಾಲ್ಯವನ್ನೇ ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲೇ ಮನೆ ನಿಭಾಯಿಸುವ ಜವಾಬ್ದಾರಿಗೆ ಸಿಲುಕುತ್ತಿದ್ದಾರೆ. ಅಸ್ಮಿತಾಳ ಈ ವಿಡಿಯೋ, ಇಂತಹ ಅಸಹಾಯಕ ಮಕ್ಕಳ ಪರವಾಗಿ ಸರ್ಕಾರ ಹಾಗೂ ಸಮಾಜ ಹೆಚ್ಚು ಗಮನ ಹರಿಸಬೇಕಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಕಷ್ಟದಲ್ಲಿರುವ ಇಂತಹ ಮಕ್ಕಳಿಗೆ ಸೂಕ್ತ ಶಿಕ್ಷಣ ಹಾಗೂ ಆಸರೆ ಸಿಗುವಂತಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+