ಚೀನಾದ ನಿಗೂಢ ಬಾಹ್ಯಾಕಾಶ ನೌಕೆ ಭೂಮಿಗೆ ಬಂದಿದ್ದು ಎಲ್ಲಿಂದ?
ಬೀಜಿಂಗ್: ಚೀನಾ ಯಾವುದ್ರಲ್ಲಿ ಮುಂದೆ ಇಲ್ಲ ಹೇಳಿ? ಅಮೆರಿಕ ಕೂಡ ಚೀನಾ ಹಿಂದೆ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಿಪ್ಪ ಚೀನಾ ತನ್ನ ಬಾಹ್ಯಾಕಾಶ ಯೋಜನೆಗಳಿಗೆ ಭಾರಿ ಮುತುವರ್ಜಿ ವಹಿಸುತ್ತಿದೆ. ಆ ಕಾರಣಕ್ಕೆ ಹಣವನ್ನ ನೀರಿನಂತೆ ಖರ್ಚು ಮಾಡುತ್ತಿದೆ. ಈಗ ಚೀನಾಗೆ ಬಂದಿಳಿದಿರುವ ನಿಗೂಢ ಬಾಹ್ಯಾಕಾಶ ನೌಕೆ ಬಂದಿದ್ದು ಎಲ್ಲಿಂದ? ತಿಳಿಯೋಣ ಬನ್ನಿ.
ಒಂದು ಅಂದಾಜಿನ ಪ್ರಕಾರ ಮುಂದಿನ ದಿನಗಳಲ್ಲಿ ಅಮೆರಿಕದ ನಾಸಾ ಮೀರಿಸುವಷ್ಟು ಯೋಜನೆಗಳನ್ನ ನೆರೆ ರಾಷ್ಟ್ರ ಚೀನಾ ಈಗಾಗಲೇ ಹಾಕಿಕೊಂಡಿದೆ. ಇನ್ನು ಅದಕ್ಕೆ ಬೇಕಾದ ತಯಾರಿ ಮೂಲಕ ಸಾಕಷ್ಟು ದುಡ್ಡನ್ನು ಖರ್ಚು ಮಾಡುತ್ತಿದೆ. ಆದರೆ ಈಗ ಜಗತ್ತಿನ ಗಮನ ಸೆಳೆದಿರುವುದು ಚೀನಾಗೆ ಬಂದಿರುವ ನಿಗೂಢ ನೌಕೆ. ಈ ಬಾಹ್ಯಾಕಾಶ ನೌಕೆ ಸುಮಾರು 276 ದಿನಗಳ ಕಾಲ ಬಾಹ್ಯಾಕಾಶದಲ್ಲಿ ರೌಂಡ್ ಹಾಕಿ ಈಗ ಚೀನಾ ನೆಲವನ್ನು ತಲುಪಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಮಾಹಿತಿ ಮುಂದೆ ಇದೆ.

ಮತ್ತೆ ಮತ್ತೆ ಬಳಸಬಲ್ಲ ಬಾಹ್ಯಾಕಾಶ ನೌಕೆ!
ಹೌದು, ಚೀನಾದಲ್ಲಿ ಈಗ ಬಂದಿಳಿದಿರುವ China Spacecraft ಸುಮಾರು 276 ದಿನ ಬ್ಯಾಕಾಶದಲ್ಲೇ ರೌಂಡ್ ಹಾಕಿರುವುದು ಮಾತ್ರವಲ್ಲ. ಭೂಮಿಗೆ ಬಂದಿಳಿದ ಬಳಿಕ ಮತ್ತೊಮ್ಮೆ ಇದನ್ನ ಬಳಕೆ ಮಾಡುವುದಕ್ಕೆ ಸಾಧ್ಯ ಎನ್ನಲಾಗುತ್ತಿದೆ. ಇದೇ ಗುರಿಯನ್ನ ಹಾಕಿಕೊಂಡು ಚೀನಾ ಯೋಜನೆ ಸಿದ್ಧಪಡಿಸಿತ್ತು. ಈಗ ಯೋಜನೆ ಪೂರ್ತಿ ಆದಂತೆ ಕಾಣುತ್ತಿದೆ. ಇಷ್ಟೆಲ್ಲಾ ಮಾಹಿತಿಯನ್ನ ಚೀನಾದ ಸುದ್ದಿ ವಾಹಿನಿ ನೀಡಿದ್ದರೂ, ಅಮೆರಿಕ ಮತ್ತು ಚೀನಾ ಶತ್ರು ರಾಷ್ಟ್ರಗಳಿಗೆ ಏನೋ ಅನುಮಾನ ಕಾಡುತ್ತಿದೆ.
ನಿಗೂಢ ನೌಕೆ ನೋಡಿ ಬೆಚ್ಚಿದ ಜಗತ್ತು
ಹೌದು, ಚೀನಾ ನೆಲಕ್ಕೆ ವಾಪಸ್ ಬಂದು ಇಳಿದಿರುವ ನಿಗೂಢ ಬಾಹ್ಯಾಕಾಶ ನೌಕೆಯನ್ನ ಯಾವಾಗ ಹಾರಿ ಬಿಟ್ಟಿದ್ದರು? ಈ ಬಾಹ್ಯಾಕಾಶ ನೌಕೆಯನ್ನ ಏಕೆ ಹಾರಿ ಬಿಡಲಾಗಿತ್ತು? ಉದ್ದೇಶ ಏನು? ಎಷ್ಟು ಎತ್ತರ ಹಾರಿತ್ತು? ಎಂಬುದರ ಬಗ್ಗೆ ಮಾಹಿತಿಯೇ ಇಲ್ಲವಂತೆ. ಇದಿಷ್ಟೇ ಅಲ್ಲ ಕಕ್ಷೆಯ ವಿವರಗಳೇನು? ಎಂಬುದು ಮಾಹಿತಿಯೂ ಯಾವುದೇ ದೇಶದ ಬಳಿ ಇಲ್ಲ. ಇದೇ ಕಾರಣಕ್ಕೆ ಇದನ್ನ ನಿಗೂಢ ನೌಕೆ ಎಂದು ಕರೆಯಲಾಗುತ್ತಿದೆ. ಅದ್ರಲ್ಲೂ ಅಮೆರಿಕಗೆ ಈ ಬಗ್ಗೆ ಕುತೂಹಲ ಸ್ವಲ್ಪ ಜಾಸ್ತಿನೇ ಇದೆ.
ಎಲ್ಲಿ ಬಂದು ಇಳಿದಿತ್ತು ನೌಕೆ?
ವಾಯವ್ಯ ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರಕ್ಕೆ ಯಶಸ್ವಿಯಾಗಿ ಬಂದಿಳಿದಿರುವ ಬಾಹ್ಯಾಕಾಶ ನೌಕೆ ಕಳೆದ ಆಗಸ್ಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿತ್ತು ಎನ್ನಲಾಗಿದೆ. ಶ್ರೀಲಂಕಾ ನೆಲದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಿ, ಭಾರತದ ಮೇಲೆ ಚೀನಾ ಕಣ್ಣಿಡಲು ಯೋಜಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಜೊತೆಗೆ ಬಾಹ್ಯಾಕಾಶ ನೌಕೆಗಳ ಮೂಲಕವೂ ಭಾರತದ ಮೇಲೆ ಚೀನಾ ಕಣ್ಣಿಡುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಈ ಹೊತ್ತಲ್ಲೇ ನಿಗೂಢ ನೌಕೆ ಜಗತ್ತಿನ ಗಮನ ಸೆಳೆದಿದೆ.

ಭಾರತಕ್ಕೆ ರಾಡಾರ್ ಕಂಟಕ?
ಅಂದಹಾಗೆ ಅಕಸ್ಮಾತ್ ಶ್ರೀಲಂಕಾದಲ್ಲಿ ಚೀನಾ ರಾಡಾರ್ ಕೇಂದ್ರ ಸ್ಥಾಪಿಸಲು ಯಶಸ್ವಿಯಾದರೆ, ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಕೂಡ ಕಣ್ಣು ಇಡುವುದು ಸುಲಭ. ಭಾರತದ ಜಲಾಂತರ್ಗಾಮಿ ನೌಕೆ ಹಾಗೂ ಯುದ್ಧ ನೌಕೆಗಳು ಅಂಡಮಾನ್ & ನಿಕೋಬಾರ್ ದ್ವೀಪದ ಕಡೆ ಚಲಿಸಿದ್ರೂ ಚೀನಾಗೆ ಗೊತ್ತಾಗತ್ತೆ. ಚೀನಾ ಸುಲಭವಾಗಿ ದಕ್ಷಿಣ ಭಾರತದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನ ಗುರುತಿಸಲಿದೆ ಚೀನಾ ಎಂಬ ಆತಂಕ & ಆರೋಪ ತಜ್ಞರಿಂದ ಕೇಳಿಬಂದಿತ್ತು. ಈಗ ನಿಗೂಢ ನೌಕೆ ಜಗತ್ತಿನ ನಿದ್ದೆಗೆಡಿಸುತ್ತಿದೆ.
ಒಟ್ನಲ್ಲಿ ಎಲ್ಲಾ ಏನೇ ಇರಲಿ ಈಗ ಚೀನಾದ ನಿಗೂಢ ಬಾಹ್ಯಾಕಾಶ ನೌಕೆ ಮಾತ್ರ ಎಲ್ಲರ ಗಮನ ಸೆಳೆದಿದೆ. ಚೀನಾ ಮಿತ್ರ ರಾಷ್ಟ್ರಗಳು ಈ ಸಾಧನೆಯಿಂದ ಖಷಿಯಾಗಿದ್ದಾರೆ. ಮತ್ತೊಂದ್ಕಡೆ ಅಮೆರಿಕ ಸೇರಿದಂತೆ ಚೀನಾ ವಿರೋಧಿ ಪಡೆಗಳಿಗೆ ಕೊಂಚ ಕಸಿವಿಸಿ ಆಗುತ್ತಿದೆ. ಆದರೆ ಚೀನಾ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ನೌಕೆ ತಯಾರಿಸುವಲ್ಲಿ ಹೆಚ್ಚು ಗಮನ ಹರಿಸಿದ್ದು, ಇದು ಅದರ ಫಲಶೃತಿ ಎಂಬ ಮಾತುಗಳು ಗಟ್ಟಿಯಾಗಿವೆ.












Click it and Unblock the Notifications