ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸರ್ಜನ್ ಜನರಲ್ ಆಗಿ ಮಂಡ್ಯದ ವಿವೇಕ್

By Mahesh
|
Google Oneindia Kannada News

ವರ್ಜೀನಿಯಾ, ಏ.23: ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್‌ ಹಲ್ಲೇಗೆರೆ ಮೂರ್ತಿ (37) ಅವರು ಅಮೆರಿಕದ ಸರ್ಜನ್‌ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಅವರು ವಿವೇಕ್ ಮೂರ್ತಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಉನ್ನತ ಹುದ್ದೆಗೆ ಏರಲು ನನ್ನ ಅಜ್ಜಿಯ ಆಶೀರ್ವಾದವೇ ಕಾರಣ ಎಂದು ಮೂರ್ತಿ ಇದೇ ಸಂದರ್ಭದಲ್ಲಿ ಹೇಳಿದ್ದು ವಿಶೇಷವಾಗಿತ್ತು.

ಈ ಸಮಾರಂಭದಲ್ಲಿ ಆರೋಗ್ಯ ಕಾರ್ಯದರ್ಶಿ ಸಿಲ್ವಿಯಾ ಬರ್ವೆಲ್ ಸೇರಿದಂತೆ ಅನೇಕ ಪ್ರಮುಖ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾನು ಈ ಉನ್ನತ ಸ್ಥಾನಕ್ಕೇರಲು ನನ್ನ ಅಜ್ಜಿ ಆಶೀರ್ವಾದ, ನನ್ನ ತಂದೆ ನನ್ನಲ್ಲಿಟ್ಟಿರುವ ನಂಬಿಕೆ, ತಾಯಿಯ ಪ್ರೀತಿ, ಸೋದರಿ ಹಾಗೂ ಗೆಳತಿಯ ವಿಶ್ವಾಸ ಕಾರಣವಾಗಿದೆ ಎಂದು ವಿವೇಕ್ ಮೂರ್ತಿ ಹೇಳಿದರು.

Indian-American Vivek Murthy takes oath as US Surgeon General

ನನ್ನ ತಂದೆ ಮಂಡ್ಯದ ರೈತನ ಮಗ, ನಾನು ರೈತನೊಬ್ಬನ ಮೊಮ್ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಮ್ಮ ಕುಟುಂಬ ಭಾರತದಲ್ಲೇ ಉಳಿದಿದ್ದರೆ ನಾನು ರೈತನಾಗಿರುತ್ತಿದ್ದೆ ಎಂದು ವಿವೇಕ್ ಹೆಮ್ಮೆಯಿಂದ ಹೇಳಿದ್ದಾರೆ.

ವಿವೇಕ್ ಮೂರ್ತಿ ಅವರ ಆಯ್ಕೆಯನ್ನು ಈ ಹಿಂದೆ ಸೆನೆಟ್‌ ಅನುಮೋದಿಸಿತ್ತು. ವಿವೇಕ್ ಪರ 51 ಮತಗಳು ಬಂದಿತ್ತ್ತು. ವಿವೇಕ್‌ ಅಮೆರಿಕದ ಅತ್ಯಂತ ಕಿರಿಯ ಸರ್ಜನ್‌ ಜನರಲ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಯುಎಸ್ ನ 19ನೇ ಸರ್ಜನ್ ಜನರಲ್ ಆಫ್ ಅಮೆರಿಕ ಆಗಿದ್ದಾರೆ. [ಅಮೆರಿಕದ ಅತ್ಯಂತ ಕಿರಿಯ ಜನರಲ್ ಸರ್ಜನ್]

ಮೂರ್ತಿ ಅವರು ಬೊಜ್ಜು ನಿವಾರಣೆ, ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳ ಬಗ್ಗೆ ಅಪಾರ ಸಂಶೋಧನೆ ನಡೆಸಿದ್ದಾರೆ. ಅಮೆರಿಕದಲ್ಲಿ ಶೇ 84ರಷ್ಟು ಆರೋಗ್ಯ ವೆಚ್ಚವನ್ನು ಈ ಕಾಯಿಲೆಗಳಿಗೆ ವ್ಯಯಿಸಲಾಗುತ್ತಿದೆ. ಇವಕ್ಕೆಲ್ಲ ಒಂದು ಪರಿಹಾರವನ್ನು ಡಾ.ಮೂರ್ತಿ ಅವರಿಂದ ನಿರೀಕ್ಷಿಸಬಹುದು ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.

Indian-American Vivek Murthy takes oath as US Surgeon General

ಸರ್ಜನ್ ಜನರಲ್ ಹುದ್ದೆ: ಅಮೆರಿಕದ ಸಾರ್ವಜನಿಕರ ಒಟ್ಟಾರೆ ವೈದ್ಯಕೀಯ ಸೇವೆಗಳ ಮುಖ್ಯಸ್ಥ ; ಇವರ ಸೇವಾ ಅವಧಿ 4 ವರ್ಷ. ಸಾರ್ವಜನಿಕ ಆರೋಗ್ಯ ಕುರಿತ ಮುಖ್ಯ ವಕ್ತಾರರಾಗಿರುತ್ತಾರೆ. ಇವರ ಅಧೀನದಲ್ಲಿ 6,500 ಕ್ಕೂ ಹೆಚ್ಚು ವೈದ್ಯರ ಪಡೆಯಿದೆ.

ಇವರೆಲ್ಲಾ ರಾಷ್ಟ್ರದ ಸಾರ್ವಜನಿಕ ವೈದ್ಯಕೀಯ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗುತ್ತಾರೆ. ಡಾ.ವಿವೇಕ್ ಮೂರ್ತಿಯವರು, 'ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಆಪ್ತ ಸರ್ಜನ್ ಜನರಲ್' ಆಗಿಯೂ ನಿಯೋಜಿತರಾಗಿದ್ದಾರೆ. 'ಭಾರತೀಯ ಯೋಗ ಪದ್ಧತಿ'ಯಲ್ಲಿ ವಿವೇಕ್ ಅಪಾರ ಗೌರವ ಹೊಂದಿದ್ದಾರೆ. (ಪಿಟಿಐ)

English summary
Indian-American Vivek Murthy was on Wednesday administered the oath for the top post of US Surgeon General by Vice-President Joe Biden at a ceremonial ceremony here, becoming the youngest-ever in charge of the country’s public health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X