ಅಮೆರಿಕದಲ್ಲಿ ಪೊಲೀಸ್‌ ವಾಹನ ಡಿಕ್ಕಿ ಹೊಡೆದು ಭಾರತೀಯ ವಿದ್ಯಾರ್ಥಿ ಸಾವು: ಅಪಘಾತದ ಬಳಿಕ ಗಹಗಹಿಸಿ ನಕ್ಕ ಪೊಲೀಸ್!

ಸಿಯಾಟಲ್‌, ಸೆಪ್ಟೆಂಬರ್‌ 14: ಅಮೆರಿಕದ ಸಿಯಾಟಲ್‌ ನಲ್ಲಿ ಜನವರಿಯಲ್ಲಿ ಪೊಲೀಸ್ ಗಸ್ತು ವಾಹನ ಡಿಕ್ಕಿ ಹೊಡೆದು ಭಾರತೀಯ ಮೂಲದ ಯುವತಿ ಮೃತಪಟ್ಟಿದ್ದರು. ಯುವತಿ ಸಾವಿನ ಬಗ್ಗೆ ಅಮೇರಿಕಾಪೊಲೀಸ್‌ ಅಧಿಕಾರಿಯೊಬ್ಬರು ಅಪಹಾಸ್ಯ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಹೌದು, 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವಿನ ಬಗ್ಗೆ ಅಪಹಾಸ್ಯ ಮಾಡಿರುವುದು ಬಾಡಿ- ವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದು ಬಹಿರಂಗವಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

US Cop Laughs Over Death Of Indian Students Killed By Police Patrol Car,Probe Orderd

ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ವೇಗವಾಗಿ ವಾಹನ ಚಲಾಯಿಸಿಕೊಂಡು ತೆರಳುವಾಗ ಈಶಾನ್ಯ ವಿಶ್ವವಿದ್ಯಾಲಯದ ಸಿಯಾಟಲ್ ಕ್ಯಾಂಪಸ್‌ನಲ್ಲಿ ಜನವರಿ 23 ರಂದು ಅಪಘಾತ ಸಂಭವಿಸಿತ್ತು. 23 ವರ್ಷದ ಜಾಹ್ನವಿ ಕಂದುಲಾ ಸ್ನಾತಕೋತ್ತರ ವಿದ್ಯಾರ್ಥಿನಿ ಯಾಗಿದ್ದರು.

ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್, ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು. ಚಾಲನೆ ವೇಳೆ ಬಾಡಿ- ವೋರ್ನ್ ಕ್ಯಾಮೆರಾ ಮೇಲೆ ಗಮನಿಸಿರಲಿಲ್ಲ. ಪೊಲೀಸ್ ಇಲಾಖೆಯು ರೆಕಾರ್ಡ್ ಆಗಿದ್ದ ಆಡಿಯೋವನ್ನು ಸೋಮವಾರ ಬಿಡುಗಡೆ ಮಾಡಿದೆ. ಸೋಮವಾರ ಬಿಡುಗಡೆಯಾದ ವೀಡಿಯೊದಲ್ಲಿ,ಯುವತಿ ಸಾವಿನ ಬಗ್ಗೆ ಅಪಹಾಸ್ಯವಾಡಿದ್ದ ಪೊಲೀಸ್ ಅಧಿಕಾರಿ, ಒಂದು ಚೆಕ್ ಬರೆದುಕೊಟ್ಟರೆ ಮುಗಿಯಿತು ಎಂದು ಜೋರಾಗಿ ನಕ್ಕಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಸಿಯಾಟಲ್ ಪೊಲೀಸ್ ಆಫೀಸರ್ಸ್ ಗಿಲ್ಡ್‌ನ ಉಪಾಧ್ಯಕ್ಷ ಡೇನಿಯಲ್ ಔಡೆರೆರ್‌, ಜಾಹ್ನವಿ ಕಂಡುಲಾ ಸಾವಿನ ಪ್ರಕರಣದ ಬಗ್ಗೆ ಮಾತನಾಡುತ್ತಾ, ಅವಳು ಸತ್ತಳು, 11 ಸಾವಿರ ಡಾಲರ್‌ನ ಚೆಕ್‌ ಬರೆದು ಬಿಸಾಕೋಣ, ಒಹ್ ಅವಳಿಗೆ 26 ವರ್ಷ ವಯಸ್ಸು ಅಲ್ವಾ, ಹಾಗಾದರೆ ಹೆಚ್ಚಿನ ಬೆಲೆಯಿಲ್ ಎಂದು ನಕ್ಕು ದರ್ಪದಿಂದ ಮಾತನಾಡಿದ್ದು ಪೊಲೀಸ್‌ ಬಾಡಿ ಕ್ಯಾಮ್ ವಿಡಿಯೊದಲ್ಲಿ ದಾಖಲಾಗಿದೆ.

ಪೊಲೀಸ್ ತನಿಖೆಯಲ್ಲಿ ಕಾರು ಚಾಲನೆಯು ಮಾನವಾಗಿ ಗಂಟೆಗೆ 25 ಮೈಲು ವೇಗದ ವಲಯದಲ್ಲಿ ಗಂಟೆಗೆ 74 ಮೈಲು ವೇಗದಲ್ಲಿತ್ತು, ಜಾಹ್ನವಿ ಕಂದುಲಾ ಡಿಕ್ಕಿ ಹೊಡೆದು 100 ಅಡಿಗಳಿಗಿಂತ ಹೆಚ್ಚು ದೂರು ಬಿದ್ದಿದ್ದರು ಎಂದು ಬಹಿರಂಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+