ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಬೆಂಬಲಿಗ, ಕುಖ್ಯಾತ ಗ್ಯಾಂಗ್‌ಸ್ಟರ್ ಹತ್ಯೆ- ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಘಟನೆ
ನವದೆಹಲಿ, ಸೆಪ್ಟೆಂಬರ್ 21: ಮೊಗಾ ಜಿಲ್ಲೆಯ ದಾವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖ್ದೂಲ್ ಸಿಂಗ್ ಅಲಿಯಾಸ್ ಸುಖಾ ದುನೆಕೆಯನ್ನು ಬುಧವಾರ ರಾತ್ರಿ ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ. ಎರಡು ಗ್ಯಾಂಗ್‌ಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗ್ಯಾಂಗ್‌ಸ್ಟರ್ ಸುಖ್ದೂಲ್ ಸಿಂಗ್‌ನನ್ನು ಕೊಲ್ಲಲ್ಪಟ್ಟಿದ್ದಾನೆ. ಭಾರತ-ಕೆನಡಾ ಸಂಘರ್ಷದ ನಡುವೆಯೇ ಈ ಘಟನೆ ನಡೆದಿದೆ.
ಕೆನಡಾ ಗುಪ್ತಚರ ಮಾಹಿತಿ ಪ್ರಕಾರ, ಜೂನ್ 19 ರಂದು ಸರ್ರೆಯಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೊಂದಂತೆಯೇ ಸುಖ್ದೂಲ್ ಸಿಂಗ್‌ನನ್ನು ಕೊಲ್ಲಲಾಗಿದೆ. ಸುಖ್ದೂಲ್ ಸಿಂಗ್ ದೇಹದಲ್ಲಿ ಸುಮಾರು 15 ಗುಂಡುಗಳು ಹೊಕ್ಕಿವೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಸುಖ್ದೂಲ್ ಸಿಂಗ್ 2017 ರಲ್ಲಿ ನಕಲಿ ದಾಖಲೆಗಳ ಮೂಲಕ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದ. ಆತನ ವಿರುದ್ಧ ಭಾರತದಲ್ಲಿ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪಂಜಾಬ್ ಮತ್ತು ಸುತ್ತಮುತ್ತಲಿನ 29 ಕುಖ್ಯಾತ ಗ್ಯಾಂಗ್‌ಸ್ಟರ್‌ಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಭಾರತದ ಹೊರಗೆ ಆಶ್ರಯ ಪಡೆದಿದ್ದಾರೆ. ಅವರು ಭಾರತದ ಪಾಸ್‌ಪೋರ್ಟ್‌ಗಳಲ್ಲಿ ನಕಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಗ್ಯಾಂಗ್‌ಸ್ಟರ್‌ಗಳು ನೇಪಾಳ ಮಾರ್ಗದ ಮೂಲಕ ಭಾರತವನ್ನು ತೊರೆದಿದ್ದಾರೆ. ಈ ಹಂತಕರಿಗೆ ಕೆನಡಾ ದೇಶವು ಆಶ್ರಯ ನೀಡುತ್ತಿದೆ. ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ (ಕೆಟಿಎಫ್) ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೂಡೋ ಹೇಳಿದ್ದಾರೆ.
ಕೆನಡಾದಲ್ಲಿ ನೆಲೆ ಪಡೆದಿರುವ ಗ್ಯಾಂಗ್‌ಸ್ಟಾರ್‌ಗಳ ಪಟ್ಟಿ ಇಲ್ಲಿದೆ
1- ಮೊಗಾದ ಅರ್ಷದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ
2- ಬರ್ನಾಲಾದ ಚಾರಂಜೀತ್ ಸಿಂಗ್ ಅಲಿಯಾಸ್ ರಿಂಕು ಬಿಹ್ಲಾ
3- ಲುಧಿಯಾನದ ಗುರ್ಪಿಂದರ್ ಸಿಂಗ್ ಅಲಿಯಾಸ್ ಬಾಬು ದಾಲಾ
4- ತರ್ನ್ ತರನ್‌ನ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ
5- ಫಿರೋಜ್‌ಪುರದ ರಮಣದೀಪ್ ಸಿಂಗ್ ಅಲಿಯಾಸ್ ರಾಮನ್
6- ಫಾಜಿಲಿಕಾದ ಸತ್ವೀರ್ ಸಿಂಗ್ ವಾರಿಂಗ್ ಅಲಿಯಾಸ್ ಸ್ಯಾಮ್
7- ಅಮೃತಸರದ ಸ್ನೋವರ್ ಧಿಲಿಯನ್
8- ಮೋಗಾದ ಸುಖ್ದೂಲ್ ಸಿಂಗ್ ಅಲಿಯಾಸ್ ಸುಖ ದಿಯುನೆಕಾ
ಅಮೆರಿಕದಲ್ಲಿ ನೆಲೆ ಪಡೆದಿರುವ ಗ್ಯಾಂಗ್‌ಸ್ಟರ್‌ಗಳು
1- ಕಪುರ್ತಲಾದ ಅಮೃತ್ ಬಾಲ್
2- ಫಾಜಿಲಿಕಾದ ಅನ್ಮೋಲ್ ಬಿಷ್ಣೋಯ್
3- ಅಮೃತಸರದ ದರ್ಮಂಜಿತ್ ಸಿಂಗ್
4- ಚಂಡೀಗಢದ ಗೌರವ್ ಪಟ್ಯಾಲ್
5- ತರ್ನ್ ತರನ್‌ನ ಗುರ್ಜಂತ್ ಸಿಂಗ್
6- ಅಬೋಹರ್‌ದ ಹರ್ಜೋತ್ ಸಿಂಗ್
7- ಲೂಧಿಯಾನದ ಕರಣ್ವೀರ್ ಸಿಂಗ್
8- ಕಿಂದರ್ಬೀರ್ ಸಿಂಗ್
9- ಎಸ್ ಬಿ ಎಸ್ ನಗರದ ರಕಜೇಶ್ ಕುಮಾರ್
10- ತರ್ನ್ ತರನ್‌ನ ರಶ್ಪಾಲ್ ಸಿಂಗ್
11- ಮುಖ್ತ್ಸರ್ ಸಾಹಿಬ್‌ನ ಸತಿಂದರ್ಜಿತ್ ಸಿಂಗ್ ಅಕಾ ಗೋಲ್ಡಿ ಬ್ರಾರ್
ಆಸ್ಟ್ರೇಲಿಯಾದಲ್ಲಿ ನೆಲೆ ಕಂಡುಕೊಂಡಿರುವ ಗ್ಯಾಂಗ್‌ಸ್ಟರ್‌ಗಳು
1- ಫತೇಘರ್ ಸಾಹಿಬ್‌ನ ಗುರ್ಜಂತ್ ಸಿಂಗ್ ಅಲಿಯಾಸ್ ಜನತಾ
2- ಲೂಧಿಯಾನದ ಗಗನ್‌ದೀಪ್ ಸಿಂಗ್
ಪಾಕಿಸ್ತಾನದಲ್ಲಿ ನೆಲೆ ಕಂಡುಕೊಂಡಿರುವ ಗ್ಯಾಂಗ್‌ಸ್ಟರ್‌ಗಳು
1- ನಾಂದೇಡ್‌ನ ಹರ್ವಿಂದರ್ ಸಿಂಗ್ ಸಂಧು ಅಕಾ ರಿಂದಾ
ಮಲೇಷ್ಯಾದಲ್ಲಿ ನೆಲೆ ಕಂಡುಕೊಂಡಿರುವ ಗ್ಯಾಂಗ್‌ಸ್ಟರ್‌ಗಳು
1- ಮೊಗಾದ ಜಕ್ಪಾಲ್ ಸಿಂಗ್ ಅಲಿಯಾಸ್ ಲಾಲಿ ಧಲಿವಾಲ್
2- ಲೂಧಿಯಾನದ ಜಗಜೀತ್ ಸಿಂಗ್
ಯುಎಇ ಅಲ್ಲಿ ನೆಲೆ ಕಂಡುಕೊಂಡಿರುವ ಗ್ಯಾಂಗ್‌ಸ್ಟರ್‌ಗಳು
1- ಎಸ್‌ಬಿಎಸ್ ನಗರದಿಂದ ಕುಲದೀಪ್ ಸಿಂಗ್
ಹಾಂಗ್ ಕಾಂಗ್
1- ಭಟಿಂಡಾದಿಂದ ರಾಮಂಜಿತ್ ಸಿಂಗ್












Click it and Unblock the Notifications