ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಮೂಲದ ವಿವೇಕ್, ಅಮೆರಿಕದ ಪ್ರಧಾನ ಸರ್ಜನ್

By Mahesh
|
Google Oneindia Kannada News

ವಾಷಿಂಗ್ಟನ್‌, ಡಿ.16: ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್‌ ಹಲ್ಲೇಗೆರೆ ಮೂರ್ತಿ (37) ಅವರು ಅಮೆರಿಕದ ಸರ್ಜನ್‌ ಜನರಲ್‌ ಆಗಿ ನೇಮಕಗೊಂಡಿದ್ದಾರೆ. ವಿವೇಕ್ ನೇಮಕಕ್ಕೆ ಯುಎಸ್ ಸೆನೆಟ್ ನಲ್ಲಿ ಅನುಮೋದನೆ ಸಿಕ್ಕಿದೆ.

ವಿವೇಕ್ ಮೂರ್ತಿ ಅವರ ಆಯ್ಕೆಯನ್ನು ಸೆನೆಟ್‌ ಅನುಮೋದಿಸಿದ್ದು, ವಿವೇಕ್‌ ಅಮೆರಿಕದ ಅತ್ಯಂತ ಕಿರಿಯ ಸರ್ಜನ್‌ ಜನರಲ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಯುಎಸ್ ನ 19ನೇ ಸರ್ಜನ್ ಜನರಲ್ ಆಫ್ ಅಮೆರಿಕವನ್ನು ಆಯ್ಕೆಯಾಗಿದ್ದು ವಿವೇಕ್ ಪರ 51 ಮತಗಳು ಬಂದಿವೆ ಎಂದು ಯುಎಸ್ ಕಾಂಗ್ರೆಸ್ ಮೇಲ್ಮನವಿಯಿಂದ ಸುದ್ದಿ ಬಂದಿದೆ.

ಆದರೆ ಮೂರ್ತಿ, ಆಯ್ಕೆ ಸುಲಭವಾಗಿರಲಿಲ್ಲ. ಮೂರ್ತಿ ಆಯ್ಕೆ ವಿರುದ್ಧ ಅಮೆರಿಕದ ಪ್ರಭಾವಿ ಗನ್‌ ಲಾಬಿNational Rifle Association (NRA) ತೊಡೆತಟ್ಟಿ ನಿಂತಿತ್ತು. 2013ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಉನ್ನತ ಹುದ್ದೆಗೆ ಆಯ್ಕೆ ಮಾಡಿದಾಗಲೂ ಪರ ವಿರೋಧ ದನಿಗಳು ಕೇಳಿ ಬಂದಿತ್ತು.

Indian-origin physician Vivek Murthy becomes US's youngest Surgeon General

ಮೂರ್ತಿ ಅವರು ಆಯ್ಕೆಯಾದರೆ ಸಾವಿರಾರು ಕೋಟಿ ರೂ. ವಹಿವಾಟು ಹೊಂದಿರುವ ಗನ್‌ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. [ಅಮೆರಿಕದ ಸರ್ಜನ್ ಜನರಲ್ ಆಗಿ ವಿವೇಕ್ ಅಧಿಕಾರ ಸ್ವೀಕಾರ]

ಮೂರ್ತಿ ಅವರು ಬೊಜ್ಜು ನಿವಾರಣೆ, ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳ ಬಗ್ಗೆ ಅಪಾರ ಸಂಶೋಧನೆ ನಡೆಸಿದ್ದಾರೆ. ಅಮೆರಿಕದಲ್ಲಿ ಶೇ 84ರಷ್ಟು ಆರೋಗ್ಯ ವೆಚ್ಚವನ್ನು ಈ ಕಾಯಿಲೆಗಳಿಗೆ ವ್ಯಯಿಸಲಾಗುತ್ತಿದೆ. ಇವಕ್ಕೆಲ್ಲ ಒಂದು ಪರಿಹಾರವನ್ನು ಡಾ.ಮೂರ್ತಿ ಅವರಿಂದ ನಿರೀಕ್ಷಿಸಬಹುದು ಎಂದು ಸೆನೆಟರ್ ಡಿಕ್ ಡರ್ಬನ್ ಅವರು ಅಭಿಪ್ರಾಯಪಟ್ಟಿದ್ದಾರೆ.

English summary
37-year-old Indian-American physician Vivek Hallegere Murthy has been confirmed as the 19th Surgeon General of America by US Senate. He is youngest person and first person of Indian-origin to hold the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X