ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಟೀಂ ಇಂಡಿಯಾ
T20 World Cup 2026 Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 255 ರನ್‌ಗಳನ್ನು ಗಳಿಸಿದೆ. ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಮೊತ್ತವಾಗಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನ ನಿರ್ಣಾಯಕ ಫೈನಲ್ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಪಡೆ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿತು.

ಕಿವೀಸ್ ಎದುರು ಭಾರತ ಐತಿಹಾಸಿಕ ದಾಖಲೆ
ನಿಗದಿತ 20 ಓವರ್‌ಗಳಲ್ಲಿ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 255 ರನ್‌ಗಳನ್ನು ಪೇರಿಸಿ, ಎದುರಾಳಿ ನ್ಯೂಜಿಲೆಂಡ್‌ಗೆ ಬೃಹತ್ ಮೊತ್ತದ ಗುರಿಯನ್ನು ನೀಡಿದೆ. ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಮೊತ್ತ ದಾಖಲಾಗಿರುವುದು ಇದೇ ಮೊದಲು. ಈ ಮೂಲಕ ಭಾರತ ತಂಡವು ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ತಂಡದ ಆರಂಭಿಕ ಆಟಗಾರರು ನೀಡಿದ ಸ್ಫೋಟಕ ಅಡಿಪಾಯ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರದ ಹೊಡೆತಗಳು ತಂಡದ ಮೊತ್ತವನ್ನು 250ರ ಗಡಿ ದಾಟುವಂತೆ ಮಾಡಿದವು. ವಿಶೇಷವಾಗಿ ಅಂತಿಮ ಓವರ್‌ಗಳಲ್ಲಿ ಬಂದ ರನ್ ಪ್ರವಾಹವು ಭಾರತಕ್ಕೆ ಈ ಬೃಹತ್ ಸ್ಕೋರ್ ಗಳಿಸಲು ನೆರವಾಯಿತು. ಈಗ ಕಿವೀಸ್ ಪಡೆ ಗೆಲುವಿಗಾಗಿ 256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಬೇಕಿದೆ. ತವರಿನ ಅಂಗಳದಲ್ಲಿ ಟ್ರೋಫಿ ಎತ್ತಿಹಿಡಿಯುವ ಕನಸಿನಲ್ಲಿರುವ ಭಾರತೀಯ ಬೌಲರ್‌ಗಳು, ಈ ಬೃಹತ್ ಸ್ಕೋರ್ ಅನ್ನು ರಕ್ಷಿಸಿಕೊಳ್ಳಲು ಸಜ್ಜಾಗಿದ್ದಾರೆ.












Click it and Unblock the Notifications