ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ನೆಲದಲ್ಲಿ ಹೊಸ ಸಮಸ್ಯೆ | Ukraine And Russia
ಪ್ರಪಂಚ ಮತ್ತೆ ಶಾಂತವಾಗಬೇಕು, ಇದಕ್ಕಾಗಿ ಯುದ್ಧಗಳು ನಿಲ್ಲಬೇಕು ಎಂಬುದು ಎಲ್ಲರ ಆಸೆಯೂ ಆಗಿದೆ. ಹೀಗಿದ್ದರೂ ಜಗತ್ತಿನಲ್ಲಿ ಯುದ್ಧಗಳು ನಿಲ್ಲುವ ಬದಲಾಗಿ ಮತ್ತಷ್ಟು ವಾರ್ ಶುರುವಾಗುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೂಡ ಚಿಂತಾಜನಕ ಆಗುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಇಡೀ ಜಗತ್ತಿಗೆ ತಲೆನೋವಾಗಿ ಪರಿಣಮಿಸಿದ್ದು, ಏನಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ನೆಲದಲ್ಲಿ ಹೊಸ ಸಮಸ್ಯೆ ಶುರುವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತ ಇರಾನ್ ವಿರುದ್ಧ ಯುದ್ಧ ಶುರು ಮಾಡುವ ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬ ದೊಡ್ಡ ಪ್ರಯತ್ನ ಮಾಡಿತ್ತು. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ದೊಡ್ಡ ದೊಡ್ಡ ಅಧಿಕಾರಿಗಳು ನೇರವಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ಹೋಗಿ ಬಂದಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆಗೆ ನೇರವಾಗಿ ಚರ್ಚೆ ಮಾಡಿದ್ದ ಅಮೆರಿಕ ಆಡಳಿತದ ಅಧಿಕಾರಿಗಳು, ಇನ್ನೇನು ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಈ ಯುದ್ಧ ನಿಲ್ಲಿಸಿದ್ದರೆ ಅದು ಟ್ರಂಪ್ ಅವರ ಆಡಳಿತಕ್ಕೆ ಮತ್ತಷ್ಟು ಹೆಸರು ತಂದುಕೊಂಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಯುದ್ಧ ನಿಲ್ಲುವ ಸಾಧ್ಯತೆಯೇ ಇಲ್ಲ!
ಅಮೆರಿಕ ಮತ್ತೊಂದು ಕಡೆ ರಷ್ಯಾಗೆ ದೊಡ್ಡ ಆಫರ್ ಕೂಡ ಕೊಟ್ಟಿತ್ತು, ಅಲ್ಲದೆ ಉಕ್ರೇನ್ ಅಧ್ಯಕ್ಷನ ಬಾಯಿ ಮುಚ್ಚಿಸುವ ಕೆಲಸ ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಯುದ್ಧ ನಿಲ್ಲುವ ನಿರೀಕ್ಷೆಗಳು ಕೂಡ ಇದ್ದವು. ಆದರೆ ಈ ಎಲ್ಲಾ ನಿರೀಕ್ಷೆ ದಿನದಿಂದ ದಿನಕ್ಕೆ ಹುಸಿಯಾಗುತ್ತಿದ್ದು, ಇರಾನ್ ವಿರುದ್ಧ ಭೀಕರ ಯುದ್ಧ ನಡೆಯುವ ಈ ಸಮಯದಲ್ಲಿ ಯುರೋಪ್ ಒಕ್ಕೂಟ ಹೊಸ ಸಂಕಷ್ಟಕ್ಕೆ ಸಿಲುಕಿದೆ. ಹಾಗಾದರೆ ಏನದು ಹೊಸ ಸಮಸ್ಯೆ? ಯುರೋಪ್ ಒಕ್ಕೂಟ ಈ ಯುದ್ಧ ನಿಲ್ಲಿಸಲು ಉಕ್ರೇನ್ ಮೇಲೆ ಒತ್ತಡ ಹೇರುತ್ತಾ?
ಕುಸಿದು ಬೀಳುತ್ತಾ ಯುರೋಪ್ ಆರ್ಥಿಕತೆ?
ಯುರೋಪ್ ಒಕ್ಕೂಟದ ದೇಶಗಳು ತಮಗೆ ಅಗತ್ಯ ಇದ್ದ ತೈಲ ಹಾಗೂ ಅನಿಲ ಆಮದು ಮಾಡಿಕೊಳ್ಳಲು ರಷ್ಯಾ ದೇಶವನ್ನೇ ನಂಬಿ ಕೂತಿದ್ದವು. ಆದರೆ ಯಾವಾಗ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಶುರು ಮಾಡಿತ್ತೋ ಅಂದಿನಿಂದ ಹೊಸ ಹೊಸ ನಿರ್ಬಂಧ ಹೇರಿಕೆ ಮಾಡಿ ರಷ್ಯಾ ಮೂಲಕ ಬರುತ್ತಿದ್ದ ತೈಲ ಹಾಗೂ ಅನಿಲ ನಿಲ್ಲಿಸಲಾಗಿತ್ತು. ಹೀಗಿದ್ದಾಗ ಮಧ್ಯಪ್ರಾಚ್ಯ ಅದರಲ್ಲೂ ಪ್ರಮುಖವಾಗಿ ಅರಬ್ ದೇಶಗಳ ಮೂಲಕ ತಮಗೆ ಬೇಕಾಗಿದ್ದ ತೈಲ & ಅನಿಲ ತರಿಸಿಕೊಳ್ಳುತ್ತಿದೆ ಯುರೋಪ್. ಆದರೆ ಇದೀಗ ಇರಾನ್ ವಾರ್ ಶುರುವಾಗಿದ್ದು, ಅದಕ್ಕೂ ಕಲ್ಲು ಬಿದ್ದಂತೆ ಆಗಿದೆ.
ಯುರೋಪ್ ದೇಶಗಳಲ್ಲಿ ಈಗಲೂ ಚಳಿ ಇದ್ದು, ದಿನದಿನಕ್ಕೆ ಈ ಸಮಸ್ಯೆ ದೊಡ್ಡದಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಲು ಉಕ್ರೇನ್ ಮೇಲೆ ಯುರೋಪ್ ಒಕ್ಕೂಟ ಒತ್ತಡ ಹೇರುವ ಸಾಧ್ಯತೆ ಇದೀಗ ದಟ್ಟವಾಗಿದೆ. ಒಟ್ನಲ್ಲಿ ಒಂದು ಕಡೆ ಉಕ್ರೇನ್ ಜನರು ಈ ಯುದ್ಧದ ಪರಿಣಾಮ ಈಗಾಗಲೇ ಬೀದಿಗೆ ಬಿದ್ದಿರುವ ಸ್ಥಿತಿ ಎದುರಿಸುತ್ತಿದ್ದಾರೆ. ಸ್ವತಃ ಉಕ್ರೇನ್ ಜನರಿಗೆ ಕೂಡ ತಮ್ಮದೇ ದೇಶದ ಅಧ್ಯಕ್ಷ ಕೈಗೊಳ್ಳುತ್ತಿರುವ ನಿರ್ಧಾರಗಳು ಕೋಪ ತರಿಸುತ್ತಿವೆ. ಮತ್ತೊಂದು ಕಡೆ ಉಕ್ರೇನ್ ದೇಶದಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಬೇಕು, ಆಗ ಮಾತ್ರ ನಾವು ಯುದ್ಧ ನಿಲ್ಲಿಸುತ್ತೇವೆ ಎಂದು ರಷ್ಯಾ ಹೊಸದಾಗಿ ಡಿಮ್ಯಾಂಡ್ ಮಾಡುತ್ತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ಲುವ ಬದಲಾಗಿ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications