PM Modi: ಸೆಶೆಲ್ಸ್ ನಾಯಕರ ಮನಗೆದ್ದ ಕರ್ನಾಟಕದ ಬಿದರಿ ಕಲೆ: ಪ್ರಧಾನಿ ಮೋದಿಯಿಂದ ಅಪರೂಪದ ಉಡುಗೊರೆ

ದೇಶದ ಶ್ರೀಮಂತ ಸಂಸ್ಕೃತಿ ಮತ್ತು ವಿಶಿಷ್ಟ ಕಲಾ ನೈಪುಣ್ಯತೆಯ ಪರಂಪರೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಪ್ರಧಾನಿ ನರೇಂದ್ರ ಮೋದಿ ಅವರ ವಿಶಿಷ್ಟ ನಡೆ ಈ ಬಾರಿಯೂ ಮುಂದುವರಿದಿದೆ. ತಮ್ಮ ಸೆಶೆಲ್ಸ್ (Seychelles) ಪ್ರವಾಸದ ಸಂದರ್ಭದಲ್ಲಿ ಮೋದಿ ಅವರು ಅಲ್ಲಿನ ಗಣ್ಯರಿಗೆ ನೀಡಿದ ಉಡುಗೊರೆಗಳು ಈಗ ಜಾಗತಿಕವಾಗಿ ಗಮನ ಸೆಳೆದಿವೆ. ವಿಶೇಷವೆಂದರೆ, ಈ ಉಡುಗೊರೆಗಳ ಪೈಕಿ ಕರ್ನಾಟಕದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಕಲೆಯಾದ 'ಬಿದರಿ ಕಲೆ' (Bidriware) ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸೆಶೆಲ್ಸ್ ಪ್ರವಾಸದ ಸಂದರ್ಭದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಿಶಿಷ್ಟ ಕಲಾ ನೈಪುಣ್ಯತೆಯನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ವಿದೇಶಿ ಗಣ್ಯರಿಗೆ ಭಾರತದ ವೈವಿಧ್ಯಮಯ ಕಲೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಅವರ ವಿಶಿಷ್ಟ ಶೈಲಿ ಈ ಬಾರಿಯೂ ಮುಂದುವರಿದಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುತ್ತಾ ಉತ್ತರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ ಮತ್ತು ಸಿಕ್ಕಿಂ ರಾಜ್ಯಗಳ ಐತಿಹಾಸಿಕ ಕಲಾಕೃತಿಗಳನ್ನು ಸೆಶೆಲ್ಸ್ ನಾಯಕರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.

PM Modi

ಮೊರಾದಾಬಾದ್‌ನ ಹಿತ್ತಾಳೆ ಆಮೆ

ಸೆಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನಿ ಅವರಿಗೆ ಮೊರಾದಾಬಾದ್‌ನ ಹಿತ್ತಾಳೆ ಆಮೆ ನೀಡಲಾಯಿತು. ಭಾರತದ 'ಬ್ರಾಸ್ ಸಿಟಿ' ಎಂದೇ ಖ್ಯಾತಿಯಾಗಿರುವ ಉತ್ತರಪ್ರದೇಶದ ಮೊರಾದಾಬಾದ್‌ನ ಕುಶಲಕರ್ಮಿಗಳು ಈ ಅಪರೂಪದ ಹಿತ್ತಾಳೆ ಆಮೆಯನ್ನು ಸೂಕ್ಷ್ಮ ಕೆತ್ತನೆಗಳೊಂದಿಗೆ ಸಿದ್ಧಪಡಿಸಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಆಮೆಯನ್ನು ಜ್ಞಾನ, ಸ್ಥಿರತೆ, ಧೀರ್ಘಾಯುಷ್ಯ ಮತ್ತು ಸಹನೆಯ ಸಂಕೇತವಾಗಿ ನೋಡಲಾಗುತ್ತದೆ. ಸೆಶೆಲ್ಸ್‌ನ ಪರಿಸರ ಪರಂಪರೆಯಲ್ಲಿ ಅಲ್ಲಿನ ಅಪರೂಪದ 'ಅಲ್ದಾಬ್ರಾ ದೈತ್ಯ ಆಮೆ' ಅತ್ಯಂತ ಪ್ರಮುಖ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನೀಡಿದ ಈ ಉಡುಗೊರೆ ಸೆಶೆಲ್ಸ್ ನಾಗರಿಕರ ಮನಗೆದ್ದಿದ್ದು, ಉಭಯ ದೇಶಗಳ ಸ್ನೇಹಕ್ಕೆ ಸಾಕ್ಷಿಯಾಗಿದೆ.

ಪ್ರಶಸ್ತಿ ಸಿಗುತ್ತೆ ಅಂದ್ರೆ ಮೋದಿ ಯಾವ ದೇಶಕ್ಕಾದ್ರು ಓಡಿ ಹೋಗ್ತಾರೆ ಅಂತ ಕಾಲೆಳೆದ ಕಾಂಗ್ರೆಸ್

ಮಹೇಶ್ವರಿ ಸಿಲ್ಕ್ ಸ್ಟೋಲ್ ಮತ್ತು ಬಿದರಿ ಕಲೆಯ ಪೆಟ್ಟಿಗೆ

ಸೆಶೆಲ್ಸ್ ಪ್ರಥಮ ಮಹಿಳೆ ವೆರೋನಿಕ್ ಹೆರ್ಮಿನಿ ಅವರಿಗೆ ಈ ಉಡುಗೊರೆ ನೀಡಲಾಯಿತು. ಮಧ್ಯಪ್ರದೇಶದ ಹೆಮ್ಮೆಯ ಕೈಮಗ್ಗ ಕಲೆಯಾದ ಮಹೇಶ್ವರಿ ಸಿಲ್ಕ್ ಸ್ಟೋಲ್ ಅನ್ನು ವೆರೋನಿಕ್ ಅವರಿಗೆ ನೀಡಲಾಯಿತು. ಹತ್ತಿ ಮತ್ತು ರೇಷ್ಮೆ ದಾರಗಳ ಸಮ್ಮಿಶ್ರಣದಿಂದ ತಯಾರಾಗುವ ಈ ವಸ್ತ್ರವು ಅತ್ಯಂತ ಹಗುರವಾಗಿದ್ದು, ತನ್ನ ವಿಶಿಷ್ಟ ವಿನ್ಯಾಸ ಹಾಗೂ ಬಾರ್ಡರ್‌ಗಳಿಂದ ಜಾಗತಿಕ ಮನ್ನಣೆ ಪಡೆದಿದೆ.

ಬಿದರಿ ಕಲೆಯ ಪೆಟ್ಟಿಗೆ

ಕರ್ನಾಟಕದ ಬೀದರ್‌ನ ಐತಿಹಾಸಿಕ ಕಲೆಯಾದ 'ಬಿದರಿವೇರ್' ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಲಾಯಿತು. ಸತು ಮತ್ತು ತಾಮ್ರದ ಮಿಶ್ರಲೋಹದ ಮೇಲೆ ಶುದ್ಧ ಬೆಳ್ಳಿಯ ತಂತಿಯನ್ನು ಬಳಸಿ ಮಾಡುವ ಈ ಸೂಕ್ಷ್ಮ ಕೆತ್ತನೆ ಕಲೆಯು ಭಾರತೀಯ ಕರಕುಶಲತೆಯ ಸಾಕ್ಷಿಯಾಗಿದೆ. ಪ್ರಧಾನಿ ಮೋದಿಯವರ ಈ ಉಡುಗೊರೆಗಳು ಕೇವಲ ವಸ್ತುಗಳಾಗಿರದೆ, ಭಾರತದ ವಿವಿಧ ರಾಜ್ಯಗಳ ಕಲೆ, ಇತಿಹಾಸ ಮತ್ತು ಜಾಗತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ಜೀವಂತ ಸಂಕೇತಗಳಾಗಿವೆ.

PM Modi

ತೋಡಾ ಶಾಲು ಮತ್ತು ಕಾಂಚೀಪುರಂ ರೇಷ್ಮೆ ಸೀರೆ

ಸೆಶೆಲ್ಸ್ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಜಾರೆಲ್ ಎರ್ನೆಸ್ಟಾ ಮತ್ತು ದ್ವಿತೀಯ ಪ್ರಥಮ ಮಹಿಳೆ ಲೀನಾ ಪಿಳ್ಳೈ ತೋಡಾ ಶಾಲು ಮತ್ತು ಕಾಂಚೀಪುರಂ ರೇಷ್ಮೆ ಸೀರೆ ಉಡುಗೊರೆಯಾಗಿ ನೀಡಲಾಯಿತು. ಸ್ಪೀಕರ್ ಅಜಾರೆಲ್ ಅವರಿಗೆ ತಮಿಳುನಾಡಿನ ನೀಲಗಿರಿಯ ಪ್ರಾಚೀನ 'ತೋಡಾ' ಬುಡಕಟ್ಟು ಸಮುದಾಯದವರು ಕೈಯಿಂದ ನೇಯ್ದ ವಿಶೇಷ ಶಾಲನ್ನು ನೀಡಲಾಯಿತು. ಬಿಳಿ ಹತ್ತಿ ಬಟ್ಟೆಯ ಮೇಲೆ ಕೆಂಪು ಮತ್ತು ಕಪ್ಪು ದಾರಗಳಿಂದ 'ಪುಖೂರ್' ಎಂಬ ವಿಶಿಷ್ಟ ಕಲಾ ಶೈಲಿಯಲ್ಲಿ ಇದನ್ನು ಸಿದ್ಧಪಡಿಸಲಾಗುತ್ತದೆ. ಇದು ಅವರ ಪ್ರಕೃತಿ ಪ್ರೇಮಕ್ಕೆ ಸಾಕ್ಷಿಯಾಗಿದೆ. ಲೀನಾ ಪಿಳ್ಳೈ ಅವರಿಗೆ ಭಾರತದ ಹೆಮ್ಮೆಯ ಕಾಂಚೀಪುರಂ ಶುದ್ಧ ಮಲ್ಬರಿ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಲಾಯಿತು. ಮರೂನ್ ಬಣ್ಣದ ಈ ಸೀರೆಗೆ ಚಿನ್ನದ ಜರಿ, ಆಕರ್ಷಕ ಕೆಂಪು ಹಾಗೂ ಹಸಿರು ಬಣ್ಣದ ಬಾರ್ಡರ್ ಇದೆ. ಇದರಲ್ಲಿ ದೇವಾಲಯದ ವಾಸ್ತುಶಿಲ್ಪ, ನವಿಲು ಮತ್ತು ಬಳ್ಳಿಗಳ ಜ್ಯಾಮಿತೀಯ ವಿನ್ಯಾಸಗಳನ್ನು ಅದ್ಭುತವಾಗಿ ಮೂಡಿಸಲಾಗಿದೆ.

ಸಿಕ್ಕಿಂ ಆರ್ಕಿಡ್ ಪೇಂಟಿಂಗ್

ಸೆಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಳ್ಳೈ ಈ ಪ್ರಶಸ್ತಿ ಸ್ವೀಕರಿಸಿದರು. ಸಿಕ್ಕಿಂನ ಸಾಂಪ್ರದಾಯಿಕ ಶೈಲಿಯ ಈ ವರ್ಣಚಿತ್ರದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಮತ್ತು ಸೆಶೆಲ್ಸ್‌ನ ರಾಷ್ಟ್ರೀಯ ಹೂವಾದ ಆರ್ಕಿಡ್ ಅನ್ನು ಅತ್ಯಂತ ಕಲಾತ್ಮಕವಾಗಿ ಸಮ್ಮಿಲನಗೊಳಿಸಲಾಗಿದೆ. ಜೈವಿಕ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಹೆಸರಾಗಿರುವ ಸೆಶೆಲ್ಸ್ ದೇಶಕ್ಕೆ ಪ್ರಕೃತಿ ಮತ್ತು ಕಲೆಯ ಸಮತೋಲನವನ್ನು ಸಾರುವ ಈ ಉಡುಗೊರೆ ಅತ್ಯಂತ ಸೂಕ್ತವಾಗಿ ಮೂಡಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+